Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ಮೋದಿಗೆ ಡಿಕೆಶಿ ಕೊಟ್ಟ ಉಡುಗೊರೆ ಸಿಕ್ಕಾಪಟ್ಟೆ ಚರ್ಚೆ : ಸ್ಪಷ್ಟನೆ ಕೊಟ್ರು ನೋಡಿ ಡಿಸಿಎಂ

---Advertisement---

ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಒಂದು ಬ್ಯೂಟಿಫುಲ್ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಅದು ಬೆಳ್ಳಿ ಗಣೇಶ. ಈ ಉಡುಗೊರೆಯ ಬಗ್ಗೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಬೇರೆಯವರು ತಂದ ಗಣೇಶನ ವಿಗ್ರಹವನ್ನು ಡಿಕೆ ಶಿವಕುಮಾರ್ ಅವರು ತಮ್ಮದು ಅಂತ ನೀಡಿದ್ದಾರೆ ಅಂತ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಯೆಲ್ಲೋ ಮೆಟ್ರೋ ಉದ್ಘಾಟನೆ ಮಾಡಿದ್ದಕ್ಕೆ ಬಂದಿದ್ದ ಮೋದಿಯವರಿಗೆ ನೀಡಿದ ಗಣೇಶನ ವಿಗ್ರಹ ತನ್ನ ಸ್ವಂತ ಹಣದಲ್ಲಿ ತಂದಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಬೆಳ್ಳಿ ಗಣೇಶ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂದು ಸಾಮಾಜಿಕ ಮಾಧ್ಯಮದಲ್ಲೆಲ್ಲಾ ಸಾಕಷ್ಟು ಓಡಾಡ್ತಾ ಇದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಹಾಗೂ ಸಂಪೂರ್ಣ ಸುಳ್ಳು ಎಂದಿದ್ದಾರೆ.

ಹಾಗೇ ಆ‌ ಗಣೇಶನನ್ನು ನನ್ನ ಸಂಪೂರ್ಣ ಹಣದಿಂದ ತಂದದ್ದು. ಇದಕ್ಕೆ ಯಾವುದೇ ರೀತಿಯ ಇಲಾಖೆಯ ಹಣವನ್ನು ನಾನು ಬಳಸಿಲ್ಲ. ಮನೆಯಿಂದಾನೇ ಹಣವನ್ನು ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಬಳಿ ಎಸ್ಪಿಜಿ ತಪಾಸಣೆಯನ್ನು ಮಾಡಿಸಿ, ಪ್ರಧಾನಿಯವರಿಗೆ ನೀಡಲಾಗಿದೆ. ಬೇರೆಯವರ ಉಡುಗೊರೆಯನ್ನು ನಮ್ಮ ಉಡುಗೊರೆ ಎಂದು ಕೊಡುವ ದುಸ್ಥಿತಿ ನಮಗಿನ್ನು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಅಂದು ಮೋದಿ ಅವರಿಗೆ ನೀಡಿದ ಉಡುಗೊರೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಉತ್ತರ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...