ಬೆಂಗಳೂರು; ಮಹಾದಾಯಿ ವಿವಾದ ಇಂದು ಮುಗಿಯುತ್ತೆ ನಾಳೆ ಮುಗಿಯುತ್ತೆ ಎಂದುಕೊಳ್ಳುವಾಗಲೇ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣ ಮತ್ತೆ ಆರು ತಿಂಗಳ ಕಾಲ ವಿಸ್ತರಣೆಯಾಗಿದೆ. ಪದೇ ಪದೇ ಅವಧಿಯನ್ನು ವಿಸ್ತರಿಸುತ್ತಿರೋದು ಸಹಜವಾಗಿಯೇ ಹೋರಾಟಗಾರರನ್ನು ಕೆರಳಿಸಿದೆ. ಮಹಾದಾಯಿ ನೀರಿನ ಪಾಲಿನ ಕರ್ನಾಟಕಕ್ಕೂ ಸೇರಿದ್ದು ಅನ್ನೋ ವಾದ ಭುಗಿಲೆದ್ದಾಗ ಮೊದಲು ಅಡ್ಡಿ ಮಾಡಿದ್ದೇ ಗೋವಾ. ಗೋವಾದ ಬೆನ್ನಿಗೆ ನಿಂತು ಮಹಾರಾಷ್ಟ್ರ ಕ್ಯಾತೆ ತೆಗೆದಿತ್ತು. ಹೀಗಾಗಿ ಮಹದಾಯಿ ವಿವಾದ ಜಟಿಲವಾಗುತ್ತಲೇ ಹೋಯ್ತು.
ಇದರ ಇತ್ಯರ್ಥಕ್ಕಾಗಿ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ ರಚನೆ ಮಾಡಿತ್ತು. ಈ ನ್ಯಾಯ ಮಂಡಳಿ ಅವಧಿ ಇದೇ ಫೆಬ್ರವರಿ 16ಕ್ಕರ ಅಂತ್ಯಗೊಂಡಿತ್ತು. ಜೊತೆಗೆ ಇಷ್ಟರಲ್ಲಿಯೇ ಅಂತಿಮ ತೀರ್ಪಿನ ವರದಿಯೂ ಬರಬೇಕಿತ್ತು. ಹೋರಾಟಗಾರರು ಕೂಡ ಕಾಯುತ್ತಿದ್ದರು. ತೀರ್ಪು ಮಾತ್ರ ಬರಲಿಲ್ಲ. ಆದರೆ ಅವಧಿ ಮತ್ತೆ ವಿಸ್ತರಣೆಯಾಗಿದೆ. ಸಚಿವಾಲಯವೂ ಆರು ತಿಂಗಳಿಗೆ ವಿಸ್ತರಣೆ ಮಾಡಿದೆ.
ಆಗಸ್ಟ್ 14ರ 2018ರಲ್ಲಿ ಕೇಂದ್ರ ಸರ್ಕಾರದ ಇದೇ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಅವಧಿ ಮತ್ತೆ ವಿಸ್ತರಣೆಯಾಗಿದೆ. ಹೀಗಾಗಿ ಮಲಪ್ರಭಾ ನದಿಯಲ್ಲಿ ನಮ್ಮ ನೀರನ್ನು ನಾವೂ ಕಾಪಾಡಿಕೊಳ್ಳುತ್ತೇವೆ. ಆಗ ಮತದಾರರಿಗೆ ಜನಪ್ರತಿನಿಧಿಗಳು ಎಲ್ಲಿಂದ ನೀರು ಕೊಡುತ್ತಾರೆ ಎಂಬುದನ್ನು ನೋಡೋಣಾ. ಈಗ ಮಲಪ್ರಭಾದಿಂದ ನಾಲ್ಕು ಜಿಲ್ಲೆಗಳಿಗೆ ಬರುತ್ತಿರೋ ನೀರಿನಲ್ಲಿ ಬಹುತೇಕ ರೈತರ ಹೆಸರಿನಲ್ಲಿ ಹಂಚಿಕೆಯಾಗಿದ್ದೇ ಇದೆ. ಹೀಗಾಗಿ ಈ ನೀರು ಕೊಡಬೇಡಿ ಅಂತಾ ಹೋರಾಟ ಮಾಡಿದರೆ ಏನಾದೀತು ಊಹಿಸಿ ಅಂತ ಮಹದಾಯಿ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















