Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಲುಮತದವರಿಗೆ ಅಧಿಕಾರ ಸಿಕ್ಕಿದೆ ಬಿಡೋದು ಕಷ್ಟ ; ಕೋಡಿಮಠದ ಶ್ರೀಗಳು ಹೀಗಂದಿದ್ಯಾಕೆ..?

---Advertisement---

 

ಬಾಗಲಕೋಟೆ; ಕೋಡಿಮಠದ ಶ್ರೀಗಳ ಭವಿಷ್ಯ ಸಾಕಷ್ಟು ಸಲ ಸತ್ಯವಾಗಿದೆ. ಇದೀಗ ರಾಜ್ಯದ, ರೋಗದ, ರಾಜಕೀಯದ ಭವಿಷ್ಯವನ್ನ ನುಡಿದಿದ್ದಾರೆ.

ಸಂಕ್ರಾಂತಿವರೆಗೂ ಯಾವ ಬದಲಾವಣೆ ದೋಷ ಕಾಣಿಸ್ತಾ ಇಲ್ಲ. ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ ಮತ್ತೊಂದು ಸಂಕ್ರಾಂತಿ ಭವಿಷ್ಯ. ಯುಗಾದಿಯಲ್ಲಿ ಬರುವಂತ ಭವಿಷ್ಯ ಅಂದ್ರೆ ಮಳೆ, ಬೆಳೆ, ಪ್ರಾಕೃತಿಕ ದೋಷಗಳು, ಭೂಮಿ ವಿಚಾರದಲ್ಲಿ ಹೇಳಬಹುದು. ಸಂಕ್ರಾಂತಿಯಲ್ಲಿ ಹೇಳಬಹುದಾದ ಭವಿಷ್ಯ ಬಂದು ರಾಜರಿಗೆ, ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ, ಹಡಗುಗಳಲ್ಲಿ ಬರುವವರಿಗೆ ಬರುತ್ತದೆ. ಸಂಕ್ರಾಂತಿ ಭವಿಷ್ಯದಲ್ಲಿ ರಾಜರ ಭವಿಷ್ಯ ಹೇಳಬಹುದು. ಇಲ್ಲಿಯವರೆಗೂ ರಾಜರಿಗೆ ಯಾವುದೇ ಬದಲಾವಣೆ ಇಲ್ಲ. ನಿಖರವಾಗಿ ಹೇಳಬೇಕು ಅಂದ್ರೆ ಅಂದು ನೋಡಿ ಹೇಳಬೇಕು. ಹಾಲುಮತದವರಿಗೆ ಅಧಿಕಾರ ಸಿಕ್ಕಿದೆ, ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಡುವವರೆಗೂ ಕಾಯಬೇಕು. ಹಿಂದೆಲ್ಲ ವಿಜಯನಗರ ಸಾಮ್ರಾಜ್ಯ ಕಟ್ಟಿದವರು. ಹಾಲು ಕೆಟ್ಟರು ಹಾಲುಮತ ಕೆಡಲ್ಲ ಅನ್ನೋದಿದೆ. ಅವರಿಗೆ ಅಧಿಕಾರ ಸಿಕ್ಕಿದೆ. ಈಗ ಅವರು ಬಿಡೋದು ಕಷ್ಟ.

ಇದೇ ವೇಳೆ ಮಾರಾಣಾಂತಿಕ ಕಾಯಿಲೆಗಳೇನಾದರೂ ಕಾಡುತ್ತವೆಯಾ ಎಂಬುದಕ್ಕೆ ಉತ್ತರಿಸಿ, ಅಪಾಯವಿದೆ. ಪ್ರಾಕೃತಿಕವಾಗಿ ಜಗತ್ತಿನಾದ್ಯಂತ ಅಪಾಯವಿದೆ. ಸೂಳಯ ಮಗನುಟ್ಟಿ ಆಳುವನು ಮುನಿಪುರವಾ. ಯುದ್ಧವಿಲ್ಲದ ಮಡಿಯೇ ಪುರವೆಲ್ಲಾ ಕೂಳಾದಿತು. ಇದರ ಅರ್ಥವನ್ನ ಕಾಲ ಬಂದಾಗ ಹೇಳುತ್ತೇನೆ. ಯುದ್ಧಭೀತಿ, ಅದರಿಂದ ಬರುವ ನೋವುಗಳು. ಒಂದು ರೋಗ ಬರುತ್ತೆ, ಐದು ವರ್ಷ ಇರುತ್ತೆ ಅಂತ ಹೇಳಿದ್ದೆ. ಮತ್ತೊಂದು ಮಾರಾಣಾಂತಿಕ ರೋಗ ಬರುತ್ತೆ. ನಾನು ಭವಿಷ್ಯವನ್ನ ಹೇಳಲ್ಲ, ರೂಪಿಸುತ್ತೇನೆ. ಕೊರೊನಾ ಮೊದಲೇ ಹೇಳಿದೆ ನಾನು. ಮದ್ದಿಲ್ಲದ ವ್ಯಾದಿ ಬರುತ್ತೆ, ಜನ ಸಾಯ್ತಾರೆ ಅಂತ. ಆಳುವವರು ಎಚ್ಚೆತ್ತುಕೊಳ್ಳಬೇಕು. ಈಗಲೂ ಅಂಥದ್ದೊಂದು ರೋಗ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...