Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಲೆ, ಸಾಹಿತ್ಯ, ಸಂಗೀತದಿಂದ ನೆಮ್ಮದಿ : ಕೆ.ಎಸ್.ನವೀನ್

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 10 : ಯಾಂತ್ರಿಕ ಬದುಕಿನಲ್ಲಿ ಹಣದ ಹಿಂದೆ ಓಡುತ್ತಿರುವವರು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕಾದರೆ ಕಲೆ, ಸಾಹಿತ್ಯ, ಸಂಗೀತದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಕರೆ ನೀಡಿದರು.

 

ಅಂಜನಾ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ಭಾನುವಾರ ಆಯೋಜಿಸಲಾಗಿದ್ದ ನೃತ್ಯ ನಾದ ನಮನ ನೃತ್ಯ ನಿವೇದನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ನೃತ್ಯ ಕಲೆ, ಸಾಹಿತ್ಯ, ಸಂಗೀತ, ಭರತನಾಟ್ಯಕ್ಕೆ ಮನ ಸೋಲದವರಿಲ್ಲ. ಮಗು ಹುಟ್ಟಿ ಬೆಳೆಯುವ ಹಂತದಲ್ಲಿ ತಾಯಿಯ ಜೋಗುಳದ ಹಾಡಿಗೆ ಸುಖ ನಿದ್ರೆಗೆ ಜಾರುತ್ತದೆ. ಭಾರತೀಯ ಪರಂಪರೆಯಲ್ಲಿ ಕಲೆಗೆ ವೈಶಿಷ್ಠ್ಯತೆಯಿದೆ. ನೃತ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರದವರು ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯ ಕಲಿಸಿ ದೇಶ ವಿದೇಶಗಳಲ್ಲಿ ಕೀರ್ತಿ ಗಳಿಸಿದ್ದಾರೆ. ಹಣ ಗಳಿಸಿ ಸಂತೋಷ ಪಡುವುದಕ್ಕಿಂತಲೂ ಬಹುತೇಕರು ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆಗೆ ಹಣ ಖರ್ಚು ಮಾಡುತ್ತಿದ್ದಾರೆ.

 

ಬದುಕು ಸಮತೋಲನವಾಗಿರಬೇಕಾದರೆ ಇಂತಹ ಕಲೆಗಳನ್ನು ಆಸ್ವಾದಿಸಬೇಕೆಂದು ಹೇಳಿದರು.
ಸಾಧನೆ ಯಾರ ಮನೆಯ ಸ್ವತ್ತಲ್ಲ. ಜೀವನದಲ್ಲಿ ಪರಿಶ್ರಮ ಪಡುವವರು ದೊಡ್ಡ ಸಾಧನೆ ಮಾಡಬಹುದು. ಎಸ್.ಜಾನಕಿಗೆ ಬಾಲ್ಯದಲ್ಲಿಯೇ ಹಾಡುವ ಹವ್ಯಾಸವಿದ್ದುದರಿಂದ ದಕ್ಷಿಣ ಭಾರತದಲ್ಲಿಯೇ ಕಂಚಿನ ಕಂಠದ ಗಾಯಕಿ ಎಂದು ಪ್ರಸಿದ್ದಿಯಾಗಿದ್ದರು. ಅದೆ ರೀತಿ ಲತಾ ಮಂಗೇಶ್ಕರ್ ಕೂಡ ಜನರ ಮನಸ್ಸಿನಲ್ಲಿ ಇನ್ನು ಅಚ್ಚಳಿಯದೆ ಉಳಿದಿದ್ದಾರೆಂದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಚಿತ್ರದುರ್ಗದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಸ್ಥಾಪನೆಯಾಗದಿದ್ದರೆ ಕಲೆಗಳೆ ಇರುತ್ತಿರಲಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರೂ ಮೊಬೈಲ್‍ನಲ್ಲಿ ಮುಳುಗಿ ಹೋಗಿರುವುದರಿಂದ ಹಾಡು ಸಂಗೀತದ ಬಗ್ಗೆ ಒಲವು ಕಡಿಮೆಯಾಗಿದೆ.

 

ನಂದಿನಿ ಶಿವಪ್ರಕಾಶ್‍ರವರು ಭರತನಾಟ್ಯದ ಮೂಲಕ ದೇಶ-ವಿದೇಶಗಳಲ್ಲಿ ಚಿತ್ರದುರ್ಗದ ಕೀರ್ತಿಯನ್ನು ಮೊಳಗಿಸಿದ್ದಾರೆ. ಶಿಷ್ಯರು ಗುರುವಂದನೆ ಮಾಡುವುದು ಅಪರೂಪವಾಗಿರುವ ಇಂದಿನ ಕಾಲದಲ್ಲಿ ಕರ್ನಾಟಕ ಕಲಾಶ್ರಿ ಪ್ರಶಸ್ತಿ ಪುರಸ್ಕøತ ವಿದ್ವಾನ್ ಸಿ.ಆರ್.ಶಿವಪ್ರಕಾಶ್‍ರವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಗುರುಗಳ ಕೃಪೆಯಿದ್ದರೆ ಏನನ್ನಾದರೂ ಸಾಧಿಸಬಹುದು. 42 ವರ್ಷಗಳಲ್ಲಿ ಸಾವಿರಾರು ಭರತನಾಟ್ಯ ವಿದ್ಯಾರ್ಥಿಗಳನ್ನು ಅಂಜನಾ ನೃತ್ಯ ಕಲಾ ಕೇಂದ್ರ ಕೊಡುಗೆಯಾಗಿ ನೀಡಿರುವುದು ಕಮ್ಮಿ ಸಾಧನೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಜನಾ ನೃತ್ಯ ಕಲಾ ಕೇಂದ್ರದ ಸಿ.ಆರ್.ಶಿವಪ್ರಕಾಶ್, ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಇವರುಗಳು ವೇದಿಕೆಯಲ್ಲಿದ್ದರು. ಶ್ರೀಕೃಷ್ಣದೇವರಾಯ, ಗುರು-ಶಿಷ್ಯರು, ಶೃತಿ ಸೇರಿದಾಗ ಚಿತ್ರದಲ್ಲಿ ಎಸ್.ಜಾನಕಿರವರು ಹಾಡಿರುವ ಕನ್ನಡ ಗೀತೆಗಳಿಗೆ ಅಂಜನಾ ನೃತ್ಯ ಕಲಾ ಕೇಂದ್ರದವರು ಭರತ ನಾಟ್ಯದ ಮೂಲಕ ನೃತ್ಯ ನಿವೇದನ ಸಮರ್ಪಿಸಿದರು.

ವಿದುಷಿ ಡಾ.ರಕ್ಷಿತಾ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ ವೈವಿದ್ಯ, ವಿದುಷಿ ಪ್ರಜ್ಞಾ ಮತ್ತು ತಂಡದಿಂದ ನೃತ್ಯ ಮಾಲಿಕಾ, ವಿದುಷಿ ವೈಷ್ಣವಿ ಮರಡಿ ಮತ್ತು ತಂಡದಿಂದ ವಿಶೇಷ ಆಕರ್ಷಣೆ ನಟವರ ನೃತ್ಯ ರೂಪಕ ನೆರದಿದ್ದವರ ಮನ ಸೂರೆಗಳಿಸಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now