Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಭಿಮಾನ್ ಸ್ಟುಡಿಯೋ ವಿಷ್ಣು ಸ್ಮಾರಕ ವಿಚಾರ : MLC 5 ಲಕ್ಷ ಕೊಟ್ಟವ್ರೆ, ಬಾಲಕೃಷ್ಣ ಮಗಳು ಗೀತಾ ಬಾಲಿ ಹೇಳಿದ್ದೇನು..?

---Advertisement---

ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ವಿಚಾರವಂತು ಬಗೆಹರಿಯದ ಸಮಸ್ಯೆಯಾಗಿ ಕಾಡಿದೆ. ಅಭಿಮಾನಿಗಳು ಸ್ಮಾರಕ ಕಟ್ಟುತ್ತೀವಿ ಅಂದ್ರು ಬಾಲಣ್ಣನ ಮಕ್ಕಳು ಬಿಡಲಿಲ್ಲ. ಈಗ ಸರ್ಕಾರವೇ ಆ ಸ್ಟುಡಿಯೋವನ್ನ ಕಂಪ್ಲೀಟ್ ಮುಟ್ಟುಗೋಲು ಹಾಕಿಕೊಂಡಿದೆ. ಈಗ ಮತ್ತೆ ಗೀತಾ ಬಾಲಿ ಅವರು ಆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಟಿ ಕರೆದು ಮತ್ತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ, ಆ ಜಾಗವನ್ನ ಬಿಟ್ಟು‌ಕೊಡಲ್ಲ ಎಂದೇ ಹೇಳಿದ್ದಾರೆ.

ನಾನು ಕೇಸ್ ಹಾಕುವುದಕ್ಕೂ ಮುನ್ನ ಆಗಿನ ಎಂಎಲ್ಸಿ ಒಬ್ಬರು ನಮ್ಮ ಮನೆಗೆ ಬಂದು ಐದು ಲಕ್ಷ ಹಣ ಕೊಡುವುದಕ್ಕೆ ಬಂದಿದ್ದರು ಎಂದಿದ್ದರು. ವಿಲ್ಸನ್ ಗಾರ್ಡನ್ ನಲ್ಲಿ ಮನೆ ಇತ್ತು. ಅಲ್ಲಿಗೆ ಬಂದ ಎಂಎಲ್ಸಿ ಐದು ಲಕ್ಷದ ಚೆಕ್ ಕೊಡುವುದಕ್ಕೆ ಬಂದರು. ಕೇಸ್ ಎಲ್ಲಾ ಹಾಕ್ಬೇಡಿ, ಸುಮ್ನೆ ಸಮಸ್ಯೆ ಆಗುತ್ತೆ. ಹಣ ತಗೋಳಿ ಅಂದಿದ್ರು. ಆದರೆ ಹಣ ಎಲ್ಲಾ ಏನು ಬೇಡ, ನಾನು ಏನು ಮಾಡಬೇಕೋ ಅದನ್ನೇ ಮಾಡ್ತೀನಿ ಅಂದಿದ್ದೆ. ಆಮೇಲೆ ಅವರ ಅಸಿಸ್ಟೆಂಟ್ ಅನ್ನ ಕಳುಹಿಸಿದ್ದರು ಎಂದಿದ್ದಾರೆ.

ಅರಣ್ಯ ಇಲಾಖೆ ಈ ಸಂಬಂಧ ಈಗಾಗಲೇ ಒತ್ತುವರಿ ಮಾಡಿಕೊಂಡಿದೆ. ಆದರೂ ಈ ಸಂಬಂಧ ನನಗೆವಯಾವ ನೋಟೀಸ್ ಬಂದಿಲ್ಲ ಅಂತಾನೇ ಗೀತ ಬಾಲಿ ಹೇಳಿದ್ದಾರೆ. ಇತ್ತ ಸೆಪ್ಟೆಂಬರ್18ಕ್ಕೆ ವಿಷ್ಣು ಸ್ಮಾರಕಕ್ಕೆ ಅಡಿಗಲ್ಲು ಹಾಕ್ತೇವೆ ಅಂತ ಹೇಳಿದ್ದಾರೆ. ಅಭಿಮಾನಿಗಳೆಲ್ಲ ಸ್ಮಾರಕದ ಸಿದ್ಧತೆಗೆ ರೆಡಿಯಾಗಿದ್ದಾರೆ. ಈಗ ನೋಡಿದ್ರೆ ಮತ್ತೆ ಗೀತಾ ಬಾಲಿ ಅವರು ಸುದ್ದಿಗೋಷ್ಟಿ ನಡೆಸಿ, ಮತ್ತೆ ಹೌಹಾರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment