
ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 9448338821
ಸುದ್ದಿಒನ್
ನೀರಿನಿಂದಲೇ ನಮ್ಮ ದೇಶದಲ್ಲಿ ಸುಮಾರು ಶೇಕಡ 21ರಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ನೀರಿನಲ್ಲಿ ಸ್ವಲ್ಪ ಪ್ರಮಾಣ ಕಬ್ಬಿಣ, ಸುಣ್ಣ, ಮೇಗ್ನಿಷಿಯಂ ಮುಂತಾದ ಲೋಹಗಳಿರುತ್ತವೆ. ಕಲುಷಿತ ನೀರಿನಲ್ಲಿ ಇವುಗಳ ಪ್ರಮಾಣ ಹೆಚ್ಚಾಗಿದ್ದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತವೆ. ಒಂದು ಲೀಟರ್ ನೀರಿಗೆ 30 mg ಗಿಂತ ಹೆಚ್ಚಾದ ಕಬ್ಬಿಣಾಂಶ ವಾಂತಿ ತರುತ್ತವೆ. ಅಧಿಕ ಪ್ರಮಾಣದ ಆರ್ಸೆನಿಕ್ ಲವಣಗಳು ಕ್ಯಾನ್ಸರ್‌ನ್ನು, ಕ್ಯಾಡ್ಮಿಯಂ ಮೂತ್ರ ಪಿಂಡಗಳ ತೊಂದರೆಯನ್ನು ಪ್ಲೋರೈಡ್ ಹಲ್ಲುಗಳ ಕಾಯಿಲೆಯನ್ನು ಉಂಟು ಮಾಡುತ್ತದೆ. ಮಲಿನವಾದ ನೀರಿನಲ್ಲಿ ಕಂಡುಬರುವ ಪಾದರಸವು ದೃಷ್ಟಿ, ಶ್ರವಣ ಹಾಗೂ ಬುದ್ಧಿಮತ್ತೆಯ ವ್ಯತಿರಿಕ್ತ ಪರಿಣಾಮವನ್ನು ಮಾಡುತ್ತದೆ. ಆರೋಗ್ಯಕರವಾದ ಕುಡಿಯುವ ನೀರಿನಲ್ಲಿರ ಬೇಕಾದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಮಿತಿಗಳ ಪ್ರಮಾಣವನ್ನು 1 Bsರ ನಿಗದಿಪಡಿಸಿದ ಪರಿಮಿತಿಯನ್ನು ಕೆಳಗಿನಂತಿದೆ.
ಆರೋಗ್ಯಕರ ನೀರಿನಲ್ಲಿರಬೇಕಾದ ಅಂಶಗಳ ಪ್ರಮಾಣ
ಭೌತಿಕ/ರಾಸಾಯನಿಕ ಅಂಶಗಳು ಮತ್ತು ಪರಿಮಿತಿ
1. ಕ್ಷಾರತೆ (ಪಿ.ಹೆಚ್.) – 6.5 ರಿಂದ 8.5
2.ಒಟ್ಟು ಕರಿಗಿರುವ ಘನಧಾತುಗಳು – 500.00 ಮಿ.ಲಿ. (ಪ್ರತಿ ಲೀಟರ್‌ಗೆ)
3.ಒಟ್ಟು ಗಡಸುತನ – 300.00 ಮಿ.ಲಿ. (ಪ್ರತಿ ಲೀಟರ್‌ಗೆ)
4.ಕ್ಯಾಲ್ಸಿಯಂ ಕಾರ್ಬೋನೇಟ್ – 75.00 ಮಿ.ಲಿ. (ಪ್ರತಿ ಲೀಟರ್‌ಗೆ)
5.ಕ್ಲೋರೈಡ್‌ಗಳು – 250.00 ಮಿ.ಲಿ. (ಪ್ರತಿ ಲೀಟರ್‌ಗೆ)
6.ಸಲ್ಫೇಟ್ – 200.00 ಮಿ.ಲಿ. (ಪ್ರತಿ ಲೀಟರ್‌ಗೆ)
7.ಪ್ಲೋರೈಡ್ಸ್ – 1.00 ಮಿ.ಲಿ. (ಪ್ರತಿ ಲೀಟರ್‌ಗೆ)
8.ಮ್ಯಾಂಗನೀಸ್ – 0.10 ಮಿ.ಲಿ. (ಪ್ರತಿ ಲೀಟರ್‌ಗೆ)
9.ನೈಟ್ರೇಟ್ಸ್ – 45.10 ಮಿ.ಲಿ. (ಪ್ರತಿ ಲೀಟರ್‌ಗೆ)
10.ಕಬ್ಬಿಣದ ಧಾತುಗಳು – 0.30 ಮಿ.ಲಿ. (ಪ್ರತಿ ಲೀಟರ್‌ಗೆ)
11.ಕ್ರೋಮಿಯಂ – 0.05 ಮಿ.ಲಿ. (ಪ್ರತಿ ಲೀಟರ್‌ಗೆ)
12.ಸತು – 1.00 ಮಿ.ಲಿ. (ಪ್ರತಿ ಲೀಟರ್‌ಗೆ)
13.ಬೋರಾನ್ – 5.00 ಮಿ.ಲಿ. (ಪ್ರತಿ ಲೀಟರ್‌ಗೆ)
14.ತಾಮ್ರ- 0.05 ಮಿ.ಲಿ. (ಪ್ರತಿ ಲೀಟರ್‌ಗೆ)
15.ಸೀಸ – 0.05 ಮಿ.ಲಿ. (ಪ್ರತಿ ಲೀಟರ್‌ಗೆ)
16.ಪಾದರಸ – 0.001 ಮಿ.ಲಿ. (ಪ್ರತಿ ಲೀಟರ್‌ಗೆ)
17.ಕ್ಯಾಡ್‌ಮಿಯಂ – 0.01 ಮಿ.ಲಿ. (ಪ್ರತಿ ಲೀಟರ್‌ಗೆ)
18.ಸೆಲಿನಿಯಂ – 0.01 ಮಿ.ಲಿ. (ಪ್ರತಿ ಲೀಟರ್‌ಗೆ)
19.ಆರ್ಸೆನಿಕ್ – 0.05 ಮಿ.ಲಿ. (ಪ್ರತಿ ಲೀಟರ್‌ಗೆ)
20.ಸಯನೈಡ್ – 0.05 ಮಿ.ಲಿ. (ಪ್ರತಿ ಲೀಟರ್‌ಗೆ)
21.ಖನಿಜಗಳ ತಳಯ – 0.01 ಮಿ.ಲಿ. (ಪ್ರತಿ ಲೀಟರ್‌ಗೆ)
ಜೈವಿಕ ಅಂಶ
ಕೋಲಿಬ್ಯಾಕ್ಟೀರಿಯಾ
– 100 ಮಿಲಿಯ ಒಂದು ಮಾದಯಲ್ಲಿ 10 ಕ್ಕಿಂತ ಕಡಿಮೆ
– ಎರಡು ಬಾರಿ ಸತತವಾಗಿ ಪರೀಕ್ಷಿಸಿದ ಒಂದು 100 ಮಿಲಿ ಮಾದರಿಯಲ್ಲಿ ಒಂದು ಕೋಲಿ ಬ್ಯಾಕ್ಟೀರಿಯಾ ಕೂಡ ಇರಬಾರದು. ಕುಡಿಯುವ ನೀರಿನಲ್ಲಿ ಮೇಲೆ ತಿಳಿಸಿರುವ ಪರಿಮಿತಿಗಳ ಪ್ರಮಾಣ ಸೂಚಿಸಿದ ಪ್ರಮಾಣಕ್ಕಿಂತ ಅಧಿಕವಾಗಿದ್ದರೆ ಅದು ಕುಡಿಯಲು ಆರೋಗ್ಯಕರವಲ್ಲ.
ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 9448338821
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













