ಬೆಂಗಳೂರು.ಸೆಪ್ಟೆಂಬರ್. 15 : ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ (CPC) ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತಂತ್ರಜ್ಞಾನದ ಬಳಕೆಗೆ ನಿರ್ಧರಿಸಿದೆ.
ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಓಟದ ನಿಖರ ಸಮಯ ದಾಖಲಿಸಲು ಕಾಲಿನ ಮಣಿಕಟ್ಟಿಗೆ ಎಲೆಕ್ಟ್ರಾನಿಕ್ ಟೈಮಿಂಗ್ ಚಿಪ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ (CPC) ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನದ ಬಳಕೆಗೆ ನಿರ್ಧರಿಸಿದೆ.
ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಓಟದ ನಿಖರ ಸಮಯ ದಾಖಲಿಸಲು ಕಾಲಿನ ಮಣಿಕಟ್ಟಿಗೆ ಎಲೆಕ್ಟ್ರಾನಿಕ್ ಟೈಮಿಂಗ್ ಚಿಪ್ ಅಳವಡಿಸಲು ಕ್ರಮ… pic.twitter.com/5qPYSHFWII
— Karnataka Congress (@INCKarnataka) September 15, 2026
ಓಟದ ಆರಂಭ ಹಾಗೂ ಮುಕ್ತಾಯದ ನಿಖರ ಸಮಯ ಸ್ವಯಂಚಾಲಿತವಾಗಿ ದಾಖಲಾಗಲಿದ್ದು, ಸಮಯದ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಜತೆಗೆ ಪರೀಕ್ಷೆ ಮುಗಿದ 24 ತಾಸುಗಳಲ್ಲಿ ಜಿಲ್ಲಾವಾರು ಫಲಿತಾಂಶವೂ ಸಿಗಲಿದೆ.












