ಚಿತ್ರದುರ್ಗ : ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೃಹತ್ ವೇದಿಕೆಗೆ ಪ್ರಧಾನಿಮೋದಿ ಅವರು ಆಗಮಿಸಿದ್ದಾರೆ.

ಪ್ರಧಾನಿ ಮೋದಿಯವರನ್ನು ಸನ್ಮಾನಿಸಿದ ಬಿಜೆಪಿ ನಾಯಕರು. ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಜನರತ್ತ ಕೈ ಬೀಸಿ ಮಾತನಾಡಿಸಿದ್ದಾರೆ. ಮೋದಿ ಎಂಟ್ರಿಯಾಗುತ್ತಿದ್ದಂತೆ ಮೋದಿ ಮೋದಿ ಎಂದು ಜನ ಘೋಷಣೆ ಕೂಗಿದರು. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್, ತಿಪ್ಪೇಸ್ವಾಮಿ, ಎಂ ಚಂದ್ರಪ್ಪ, ಎಸ್ ಲಿಂಗಮೂರ್ತಿ ಸೇರಿದಂತೆ ಸ್ಥಳೀಯ ನಾಯಕರು ಸೇರಿದ್ದು, ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಸ್ಥಳೀಯ ಬಿಜೆಪಿ ನಾಯಕರು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಸನ್ಮಾನ ಮಾಡಲಾಗಿದೆ.














