ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 16 : ತಾಲೂಕಿನ ಕೆಂಚವಿರನಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ಬೀಸಿದ ಬಿರುಗಾಳಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರಿಳಿವೆ.
ಇಂದು ಸುಮಾರು 4.40 ಸಮಯದಲ್ಲಿ ಬಾರಿ ಗಾಳಿ ಬಿಸಿದ್ದು ಗಾಳಿ ಜೊತೆಗೆ ಸ್ವಲ್ಪ ಮಳೆಯೂ ಸಹ ಬಂದಿದೆ ಈ ಸಂದರ್ಭದಲ್ಲಿ ಬಿರುಗಾಳಿಗೆ ಕೆಂಚವಿರಹಳ್ಳಿ ಗ್ರಾಮದಲ್ಲಿ ಕೆಲವು ಮರಗಳು ಮನೆಗಳ ಮೇಲೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿದ್ದು ವಿದ್ಯುತ್ ಕಂಬ ಮಧ್ಯಕ್ಕೆ ತುಂಡಾಗಿ ಬಿದ್ದು ವಿದ್ಯುತ್ ಕಂಬದಲ್ಲಿನ ಕೇಬಲ್ ವೈರು ಸಹ ತುಂಡಾಗಿವೆ .
ಸಧ್ಯ ಈ ಸಮಯದಲ್ಲಿ ವಿದ್ಯುತ್ ಇಲ್ಲದೆ ಕಾರಣ ಯಾವುದೇ ಅಪಾಯವಾಗಿಲ್ಲ ಎಂದು ಕೆಂಚವೀರನಹಳ್ಳಿ ಗ್ರಾಮದ ದೇವರಾಜ್ ತಿಳಿಸಿದ್ದಾರೆ.













