Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋರ್ಟ್ ಮೊರೆ ಹೋಗಲು ಬಲಗೈ ಸಮುದಾಯ ನಿರ್ಧಾರ: ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಕರೆ

---Advertisement---

ಬೆಂಗಳೂರು: ಏ.16: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ವಸಂತ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್

ಆಯೋಗ ವರದಿ ಹಿನ್ನೆಲೆಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಗಣ್ಯರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯ ಅದ್ಯಕ್ಷ
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಇಂದು ಕ್ಯಾಬಿನೆಟ್ ಸಭೆಯಲ್ಲಿ ಯಾರಿಗೂ ಕೂಡ ಅನ್ಯಾಯ ಆಗದಂತೆ ಎಲ್ಲರಿಗೂ ಸಮಾನ ರೀತಿಯಲ್ಲಿ ಒಳ ಮೀಸಲಾತಿಯಲ್ಲಿ ನ್ಯಾಯ ಒದಗಿಸಲು ಸರ್ಕಾರದ ಬಂದಂತೆ ಇರುತ್ತದೆ. ಇನ್ನು ಮುಂದೆ ನಮ್ಮ ಸಮುದಾಯಗಳನ್ನು ತುಂಬಾ ಎಚ್ಚರಿಕೆಯಿಂದ ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರದಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಉಪ ಸಮಿತಿ ಮತ್ತು ತಾಂತ್ರಿಕ ಸಮಿತಿ ರಚಿಸಲು ಸರ್ಕಾರವು ಮಾಡಬೇಕು. ಇನ್ನೊಂದು ಪ್ರಮುಖವಾಗಿ ನಾವು ಕಾನೂನು ಪ್ರಕಾರ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕು, ಪ್ರತಿಯೊಬ್ಬರೂ ಕೂಡ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್ ಹೋಗಲು ಬಲಗೈ ಸಮುದಾಯವು ನಿರ್ಧಾರ

ಒಳ ಮೀಸಲಾತಿ ವರದಿ ನೀಡಿದ ನಾಗ ಮೋಹನ್ ದಾಸ್ ಆಯೋಗದಲ್ಲಿ ಅಂಕಿ ಅಂಶಗಳು ಸುಪ್ರೀಂ ಕೋರ್ಟ್ ಗೆ ವಿರೋಧವಾಗಿದೆ. ನಾವುಗಳು ಎಲ್ಲರೂ ಸೇರಿಕೊಂಡು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಹೋಗಬೇಕು ಅತಿ ತುರ್ತಿ ವಿಷಯ ಎಂದು ತಿಳಿಸಿದರು.

ನಂತರದಲ್ಲಿ ರಾಜ್ಯ ಸಂಚಾಲಕರಾದ ಶ್ರೀ ಸಿದ್ದಯ್ಯ ಐಎಎಸ್‌ (ನಿವೃತ್ತ) ಮಾತನಾಡಿದ ಅವರು ನಾಗಮೋಹನ್ ದಾಸ್ ಆಯೋಗವು ನೀಡಿರುವ ಅವೈಜ್ಞಾನಿಕ ವರದಿಯ ಹಿನ್ನಲೆಯಲ್ಲಿ ಸಮಗ್ರವಾಗಿ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೂಡಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ನೀಡಿರುವ ವರದಿಯನ್ನು ಅದಷ್ಟು ಬೇಗನೇ ತಿರಸ್ಕರಿಸಬೇಕು ಎಂದು ಕರೆ ಕೊಟ್ಟರು.

ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಬಲಗೈ ಸೇರಿದಂತೆ ಹಲವು ಸಮುದಾಯಗಳಿಗೆ ಮರಣ ಶಾಸನವಾಗಿದೆ. ಸರ್ಕಾರವು ಸದ್ಯದಲೇ 12 ಜಿಲ್ಲೆಗಳಲ್ಲಿ ಮರು ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.

ನಾಗಮೋಹನದಾಸ್ ವರದಿಯು ಸಂವಿಧಾನದ ಬಾಹಿರ: ಬಲಗೈ ಸಮುದಾಯ ರೆಬೆಲ್

ಮುಖ್ಯ ಅತಿಥಿಯಾಗಿ ಮಾತನಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ ಚಂದ್ರಶೇಖರಯ್ಯ ಅವರು ನಾಗಮೋಹನದಾಸ್ ವರದಿಯು ಸಂವಿಧಾನದ ಬಾಹಿರವಾಗಿದೆ ಇದೊಂದು ಬಲಗೈ ಸಮುದಾಯ ರೆಬೆಲ್ ಆಗಬೇಕಾಗುತ್ತದೆ. ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರದ ಗಣತಿಯನ್ನು ಈಗಾಗಲೇ ಆರಂಭವಾಗಿದ್ದು, ನಮ್ಮ ಜನಾಂಗದ ಸರಿಯಾದ ಮಾಹಿತಿಯನ್ನು ಕುಟುಂಬ ಸಮೀಕ್ಷೆಯ ಅಂಕಿ ಅಂಶದೊಂದಿಗೆ ವೈಜ್ಞಾನಿಕ ಮಾನದಂಡದ ರೀತಿಯಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ನಾವು ಒಳ ಮೀಸಲಾತಿಗೆ ವಿರೋಧಿಗಳಲ್ಲ. ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅವಕಾಶ ಸಿಗಬೇಕು. ಆಯೋಗದ ವರದಿಯು ಯಾವುದೋ ಒಂದು ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತಿದೆ ಎಂಬುದು ದುರಂತ ಸಂಗತಿ ಹಾಗೆಯೇ ಹಲವಾರು ಮತ್ತಿತರರ ವಿಷಯಗಳ ಬಗ್ಗೆ ಸಮಗ್ರವಾಗಿ ವಿವರವಾಗಿ ಎಂದು ತಿಳಿಸಿದರು.

ಬಲಗೈ ಸಮುದಾಯವನ್ನು 63 ಜಾತಿಗಳು ಸೇರಿ ಎ ಗುಂಪುಗೆ ಸೇರ್ಪಡೆವಾಗಲಿ: ಡಿ.ಜಿ. ಸಾಗರ್

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಮಾತನಾಡಿದ ಅವರು ರಾಜ್ಯ ಸರ್ಕಾರವು ಮಾನಸಿಕವಾಗಿ ಒಳ ಮೀಸಲಾತಿ ವರದಿಯನ್ನು ಪೂರ್ವಭಾವಿಯಾಗಿ ತಯಾರಿ ಮಾಡಿಕೊಂಡು, ನಮ್ಮ ಬಲಗೈ ಗೆ ಅನ್ಯಾಯ ಮಾಡಿದ್ದಾರೆ. ಒಳ ಮೀಸಲಾತಿಯಲ್ಲಿ ಎಲ್ಲರಿಗೂ ಕೂಡ ಸಮಾನವಾಗಿ ರೋಸ್ಟರ್ ಬಿಂದುಗಳಲ್ಲಿ ನ್ಯಾಯ ಬೇಕು.

ನಮ್ಮ ಬಲಗೈ ಸಮುದಾಯವನ್ನು 63 ಜಾತಿಗಳು ಎ ಗುಂಪುಗಳಲ್ಲಿ ಬರಬೇಕು, ಅತಿಮುಖ್ಯವಾಗಿ ರೋಸ್ಟರ್ ಪದ್ದತಿ ಸರಿಮಾಡಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ, ಬೆಂಗಳೂರು ಜಲಮಂಡಳಿ, ಕೆಇಎ, ಹಾಗೆಯೇ ಶೈಕ್ಷಣಿಕವಾಗಿ ಹೇಳುವುದಾದರೆ ಬೆಂಗಳೂರು ವಿವಿಯಲ್ಲಿ ಪಿಎಚ್.ಡಿ ಸೀಟ್ ಗಳಲ್ಲಿ ಒಂದೇ ಒಂದು ಎ ಗುಂಪು ಬರುವಂತೆ ಸಿಟ್ ಮ್ಯಾಟ್ರಿಕ್ಸ್ ಮಾಡಿದ್ದು ಮಹಾ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಟಚಬಲ್ – ಆನ್ ಟಚಬಲ್ ಎರಡು ಗುಂಪು ಮಾಡಬೇಕಾಗಿತ್ತು. ಆದರೆ ಬಿಜೆಪಿ ಸರ್ಕಾರದ ಸಿಎಂ ಬೋಮ್ಮಯಿ ಇದಾಗ ಮೀಸಲಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಟಚಬಲ್ ಗೆ ಅತಿಹೆಚ್ಚಾಗಿ ಸರ್ಕಾರಿ ಸೌಲಭ್ಯ ಪ್ರಮಾಣದಲ್ಲಿ ಮಾಡಲು ಕೈ ಹಾಕಿದರು ಎಂದರು.

ಇನ್ನೂ ಒಳ ಮೀಸಲಾತಿಯಲ್ಲಿ ಕೊನೆಗೂ ಬಿ ಮತ್ತು ಸಿ ಗುಂಪು ಗೆ ನ್ಯಾಯ ಸಿಗಲಿಲ್ಲ ಇದೊಂದು ಬೇಸರದ ಸಂಗತಿ. ನಮ್ಮ ಅಸ್ಪೃಶ್ಯಯರು ರಾಜ್ಯದ ಸಿಎಂ ಎಲ್ಲಾ ಅರ್ಹತೆ ಇದ್ದರೂ ಕೂಡ ನಮ್ಮ ಹಿರಿಯರು ಈ ಹಿಂದಯೇ ಆಗಲಿಲ್ಲ, ಪ್ರಸ್ತುತ ದಿನಗಳಲ್ಲಿ ಕೂಡ ಇದೊಂದು ನೋವಿನ ಸಂಗತಿ ಎಂದು ತಿಳಿಸಿದರು.

ಒಳ ಮೀಸಲಾತಿಯಲ್ಲಿ 6.6.5. ಇದೊಂದು ಕೋರ್ಟಿನ ವ್ಯಾಪ್ತಿಯಲ್ಲಿ ಬರುತ್ತದೆ. ಆದರೂ ರಾಜ್ಯದ ಹಲವಾರು ಸಂಸ್ಥೆಗಳು ಅರ್ಜಿ ಸಲ್ಲಿಸಲು ಆರಂಭ ಮಾಡಿದ್ದು, ದುರಂತವಾಗಿದೆ. ಹಾಗೆಯೇ ದಲಿತ ಸಂಘರ್ಷ ಸಮಿತಿ ವತಿಯಿಂದ ಹೋರಾಟದ ಕಿಚ್ಚು ಹಚ್ಚಿದ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಜಾತ್ಯತೀತ, ಸಮಾಜವಾದಿ ತತ್ವದ ಆಧಾರದ ಮೇಲೆ ಸಮಾಜ ನಿರ್ಮಿಸಬೇಕಿದೆ. ಪ್ರಸ್ತುತ ಕೇಂದ್ರ ಸರ್ಕಾರವು ರೆಸೆರ್ವಶನ್ ಹೆಸರಿನಲ್ಲಿ ಬರೀ ಉತ್ತರ ಭಾರತಕ್ಕೆ ಅನುಕೂಲ ಮಾಡಿ, ನಮ್ಮ ದಕ್ಷಿಣ ಭಾರತಕ್ಕೆ ಸೀಟ್ ಗಳಲ್ಲಿ ಕಡಿಮೆ ಮಾಡಿ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೋಸ ಮಾಡುತ್ತಿದ್ದು, ಇದನ್ನು ವಿರೋಧ ಪಕ್ಷದ ಧ್ವನಿ ಇಲ್ಲದಂತೆ ಮಾಡಿಕೊಂಡಿದ್ದು ಇದೊಂದು ಮೋಸದ ಜಾಲವಾಗಿದೆ ಎಂದರು.

ಒಳ ಮೀಸಲಾತಿಯಲ್ಲಿ ಬಲಗೈ ಗುಂಪುಗೆ ಅನ್ಯಾಯ ಸಲ್ಲದ ಎಡವಟ್ಟು ನಿಲ್ಲಲಿ!

ಇನ್ನೂ ಮುಂದುವರೆದ ವಿಠಲ್ ವಗ್ಗನ್ ಮಾತನಾಡಿದ ಅವರು ನಾಗಮೋಹನ್ ದಾಸ್ ಆಯೋಗದಲ್ಲಿ ನಮ್ಮ ಸಮುದಾಯಗಳಲ್ಲಿ ಒಡಕು ಉಟ್ಟುಮಾಡಿ ಒಳ ಮೀಸಲಾತಿಯಲ್ಲಿ ಬಲಗೈ ಗುಂಪುಗೆ ಅನ್ಯಾಯ ಸಲ್ಲದ ಎಡವಟ್ಟು ನಿಲ್ಲಲಿ ಅದಷ್ಟು ಬೇಗನೇ ಕಡಿಮೆ ನೀಡಬೇಕು ಹಾಗೆಯೇ ಮಾದಿಗರನ್ನು ಬರೀ 8 ಲಕ್ಷ ಮಾತ್ರ ಅಷ್ಟೇ, ಆದರೆ ಉಳಿದವರನ್ನು ಕ್ರೈಸ್ತರನ್ನು ಸಹ ಎ ಗುಂಪುಗಳಲ್ಲಿ ಸೇರಿಸಿದ್ದು, ಇದು ದ್ರೋಹದ ಕೆಲಸ ಎಂದು ತಿಳಿಸಿದರು.

ದಲಿತ ಸಮುದಾಯಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದರೆ ಅದು ಒಳ ಮೀಸಲಾತಿಯಲ್ಲಿ ಪಟ್ಟಿಗೆ ಸೇರಿಸಲಾಯಿತು. ಇದು ಕೂಡ ಮೀಸಲಾತಿ ಸೌಲಭ್ಯ ಅನರ್ಹರು ಈ ಆಯೋಗವು ತಿಳಿಸಬೇಕಿತ್ತು ಇದೆ ಬಗ್ಗೆ ರಾಜ್ಯ ಸರ್ಕಾರದ ಕೆಲಸ ಮಾಡಬೇಕೆಂಬುದು ಮರೆವಿನ ಸನ್ನಿವೇಶ ಸೃಷ್ಟಿಸಿದರು ಎಂದು ಅಭಿಪ್ರಾಯಪಟ್ಟರು.

ಕೊನೆಯಲ್ಲಿ ಕರ್ನಾಟಕ ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕ ಶಿವಣ್ಣ ಬಿ. ಕನಕಪುರ ಅವರು ನಿರೂಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಂಚಾಲಕರಾದ ಸಿದ್ದಯ್ಯ ಐಎಎಸ್ (ನಿವೃತ್ತ), ಶ್ರೀ ಚಂದ್ರಶೇಖರಯ್ಯ, ಡಿ.ಜಿ. ಸಾಗರ್, ಶಿವಣ್ಣ ಬಿ. ಕನಕಪುರ, ಶ್ರೀ ವಿಠಲ ವಗ್ಗನ್, ಸೇರಿದಂತೆ 31 ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಡಾ. ದೀಪಕ್ ಅಪ್ಪಾಜಿ, ಡಾ. ಈಶ್ವರ್ ಸಿರಿಗೇರಿ, ಗೌರಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...