Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅರೇಬಿಯನ್‌ ಪೆನಿನ್ಸುಲಾದಲ್ಲಿ ನೀರಿನ ಕೊರತೆ : ಅಂತರ್ಜಲದ ಈಗಿನ ಪರಿಸ್ಥಿತಿ ಕುರಿತು ಇಲ್ಲಿದೆ ಮಾಹಿತಿ…!

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್

ಅರೇಬಿಯನ್‌ ಪೆನಿನ್ಸುಲಾ (ಅರೇಬಿಯನ್‌ ದ್ವಿಪಕಲ್ವ) ಜಗತ್ತಿನ ಅತ್ಯಂತ ಶುಷ್ಕ ಹಾಗೂ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಭೂಗತ ಜಲದ (Ground Water) ಪರಿಸ್ಥಿತಿಯು ಅಂತ್ಯಂತ ಗಂಭೀರವಾಗಿದೆ. ಮಳೆಯ ಕೊರತೆ ಕೃಷಿ ವಲಯದ ಅತಿಯಾದ ಬಳಕೆ ಮತ್ತು ಅಂತರ್ಜಲ ಮರುಪೂರಣದ ಕೊರತೆಯಿಂದಾಗಿ ಇಲ್ಲಿನ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿಯುತ್ತಿದೆ.
ಅರೇಬಿಯನ್‌ ದ್ವೀಪಕಲ್ಪದ ಭೂಗತ ಜಲದ ಸಂಪೂರ್ಣ ಸ್ಥಿತಿಯ ವಿವರಗಳು ಗಂಭೀರವಾಗಿದೆ. ಅರೇಬನಿಯಾ ಪ್ರದೇಶದಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ, ಇಲ್ಲಿನ ನೀರಿನ ಮೂಲಗಳು ಪ್ರಾಥಮಿಕವಾಗಿ ಅಂತರ್ಜಲ ಮತ್ತು ಸಾಗರ ನೀರನ್ನು ಸಿಹಿ ನೀರಾಗಿಸುವ ಘಟಕಗಳಾಗಿವೆ. ಭೂಗತ ಜಲದ ಬಹುಪಾಲು ಭಾಗವು ಸಾವಿರಾರು ಅಥವಾ ಲಕ್ಷಾಂತರ ವರ್ಷಗಳ ಹಿಂದೆ ಪ್ರಕೃತಿಯಲ್ಲಿ ಸಂಗ್ರಹವಾದ “ಪಳೆಯುಳಿಕೆ ನೀರು” (ಪಾಸಿಲ್‌ ವಾಟರ್‌) ಆಗಿವೆ. ಈ ನೀರು ಒಮ್ಮೆ ಖಾಲಿಯಾದರೆ ಮತ್ತೆ ಲಭ್ಯವಿಲ್ಲಾದಂತಾಗುತ್ತದೆ. ಈ ಪ್ರದೇಶದಲ್ಲಿ ಹೊರತೆಗೆಯುವ ಅಂತರ್ಜಲದ ಸುಮಾರು 80 ರಿಂದ 90% ರಷ್ಟು ಭಾಗವು ಕೃಷಿ ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ತೈಲ ಸಂಪತ್ತಿನಿಂದ ಬರುವ ಆದಾಯವನ್ನು ಬಳಸಿ, ಹೆಚ್ಚು ಇಂಧನವನ್ನು ವ್ಯಯಿಸಿ ಆಳವಾದ ಕೊಳವೆ ಬಾವಿಗಳಿಂದ ನೀರನ್ನು ಎತ್ತಲಾಗುತ್ತಿದೆ. ಇದು ಅಂತರ್ಜಲದ ತೀವ್ರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಮುಖ ಭೂಗತ ಜಲ ವ್ಯವಸ್ಥೆಗಳಾದ “ವಾಜಿಡ್‌ (Wajid) ಉಮ್‌ ಎರ್‌ ರಧುಮ ಮತ್ತು ವಾಸಿಯಂ” ಜಲಧರಗಳು ಸೌದಿ ಅರೇಬಿಯಾ ಇರಾಕ್‌, ಸಿರಿಯಾ, ಹೆಮೆನ್‌ ಮತ್ತು ಓಮನ್‌ ದೇಶಗಳ ನಡುವೆ ಹಂಚಿಕೆಯಾಗಿದೆ. ಅಂತರ್ಜಲ ನಿರ್ವಹಣೆಗಾಗಿ ಈ ಪ್ರದೇಶಗಳ ನಡುವೆ ಯಾವುದೇ ಸರಿಯಾದ ಜಲ ಹಂಚಿಕೆ ಒಪ್ಪಂದಗಳಿಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಕಳೆದ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ನೂರಾರು ಮೀಟರ್‌ಗಳಷ್ಟು ಕುಸಿದಿದೆ. ಕರಾವಳಿ ಪ್ರದೇಶಗಳಲ್ಲಿ ಸಿಹಿ ನೀರು ಖಾಲಿಯಾಗುತ್ತಿರುವುದರಿಂದ ಉಪ್ಪು ನೀರು ಭೂಗತ ಜಲವನ್ನು ಸೇರಿಕೊಳ್ಳುತ್ತದೆ. ಅತಿಯಾದ ನೀರೆತ್ತುವಿಕೆಯಿಂದಾಗಿ ಭೂಮಿಯ ಮೇಲ್ಮೆ ಕುಸಿಯುವ ಅಪಾಯವನ್ನು ಈ ಪ್ರದೇಶಗಳು ಎದುರಿಸುತ್ತಿವೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಅರೇಬಿಯನ್‌ ರಾಷ್ಟ್ರಗಳು ಸೀಮೆ ನೀರನ್ನು ಸಿಹಿ ನೀರಾಕರಿಸುವ ತಂತ್ರಜ್ಞಾನಗಳ ಮೇಲೆ ಭಾರೀ ಹೂಡಿಕೆ ಮಾಡುತ್ತಿವೆ. ಜೊತೆಗೆ, ನೀರು ಪೋಲಾಗುವುದನ್ನು ತಡೆಯಲು ಹನಿ ನೀರಾವರಿಯಂತಹ ಆಧುನಿಕ ಕೃಷಿ ಪದ್ಧತಿಗಳು ಮತ್ತು ಮಳೆ ನೀರು ಕೊಯ್ಲು ಯೋಜನೆಗಳನ್ನು ಜಾರಿಗೆತರಲಾಗುತ್ತಿದೆ. ಸೌದಿ ಅರೇಬಿಯಾ ಅಥವಾ ಯು.ಎ.ಇ. (UAE) ನಂತಹ ದೇಶಗಳಲ್ಲಿನ ಅಂತರ್ಜಲದ ಪರಿಸ್ಥಿತಿಗಂಭೀರವಾಗಿದೆ. ಪಳಿಯುಳಿಕೆ ನೀರನ್ನು ಹೊರತೆಗಯುವ ತಾಂತ್ರಿಕತೆಯನ್ನು ಉಪಯೋಗಿಸಲಾಗುತ್ತಿದೆ. ಸಾಗರ ನೀರನ್ನೂ ಸಿಹಿ ಮಾಡುವ ಡಿಸಾಲಿನೇಷನ್‌ ಪ್ರಕ್ರಿಯೆ ಮುಂದುವರಿಸುತ್ತಿವೆ.ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಅಂತರ್ಜಲದ ಪ್ರಮುಖ್ಯತೆ ಎಷ್ಟು ಎಂಬುದು ಮನವರಿಕೆಯಾಗುತ್ತದೆ. ಆದುದರಿಂದ ಅಂತರ್ಜಲವನ್ನು ಮಿತಿಯಾಗಿ ಬಳಸಿ ಮುಂದೆಯಾಗುವ ತೊಂದರೆಗಳನ್ನು ತಪ್ಪಿಸಲು ಪ್ರತಿಯೊಬ್ಬರು ಕೈಜೋಡಿಸಲು ಮನವಿ ಮಾಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now