Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇವಾಲಯಗಳು ಶಾಂತಿ, ನೆಮ್ಮದಿಯ ಕೇಂದ್ರಗಳು : ಶಾಸಕ ಟಿ.ರಘುಮೂರ್ತಿ

---Advertisement---

ಸುದ್ದಿಒನ್, ಚಳ್ಳಕೆರೆ, ಮೇ. 04 : ಗುಡಿ ಗೋಪುರ ದೇವಾಲಯಗಳು ಪೂಜಾ ಸ್ಥಳಗಳು ಅಷ್ಟೆಅಲ್ಲದೆ , ಇವುಗಳು ಮಾನಸಿಕ ನೆಮ್ಮದಿ, ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರಗಳಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

 

ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದ ಮಟ್ಲಿಗೆರೆ ಕೆರೆ ಹಿಂಭಾಗದಲ್ಲಿ ನೆಲಸಿರುವ ಶ್ರೀಕಾಟಂಲಿಂಗೇಶ್ವ ನೂತನ ದೇವಸ್ಥಾನ ಲೋಕಾರ್ಪಣೆ,ಕಳಸ ಉತ್ಸವ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿ..

ಇಂದಿನ ಒತ್ತಡದ ಜೀವನದಲ್ಲಿ, ದೇವಾಲಯದ ಆವರಣವು ಭಕ್ತರಿಗೆ ದೈವಿಕ ಅನುಭವ ಮತ್ತು ನೆಮ್ಮದಿಯನ್ನು ನೀಡುತ್ತದೆ. ದೆವಾಲಯ
ಸುತ್ತಮುತ್ತಲಿನ ಪರಿಸರ ಮತ್ತು ದೇವಾಲಯದ ಒಳಾಂಗಣವು ಪ್ರಶಾಂತತೆಯನ್ನು ಕಲ್ಪಿಸಿಕೊಡುತ್ತದೆ, ಇದು ಧ್ಯಾನ ಮತ್ತು ಭಕ್ತಿಗೆ ಸಹಕಾರಿಯಾಗಿದೆ.

 

ಆಧುನಿಕ ಜಗತ್ತಿಗೆ ಮಾರುಹೋಗಿರುವ ನಾವು ದೇವಾಲಯಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಬದುಕಿನ ಜಂಜಾಟಗಳನ್ನು ಒತ್ತಡಗಳನ್ನು ಸ್ಪಲ್ಪ ಮಟ್ಟಿಗೆ ನೀಗಲು ದೇವಾಲಯಕ್ಕೆ ಒಮ್ಮೆ ಬಂದರೆ ನೆಮ್ಮದಿ ಸಿಗುತ್ತದೆ.
ಬೆಳಗೆರೆ ಗ್ರಾಮ ಒಂದು ವಿಶೇಷ ಗ್ರಾಮವಾಗಿದ್ದು ಬೆಳಗೆರೆ ಕೆರೆ ಏರಿ ಹತ್ತಿರ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನವಿದ್ದು ಅದೇ ರೀತಿಯಾಗಿ ಮಟ್ಟಲಿಗೆರೆಕೆರೆ ಏರಿ ಹತ್ತಿರ ಈ ದೇವಸ್ಥಾನ ನಿರ್ಮಾಣಗೊಂಡಿರುವುದು ಒಂದು ವಿಶೇಷವಾಗಿದೆ.

 

ದೇವಸ್ಥಾನಕ್ಕೆ ರಸ್ತೆ ಅವಶ್ಯಕತೆ ಇದೆ ಜೊತೆಗೆ ಇಲ್ಲಿ ಭಕ್ತರು ಬಂದು ಉಳಿದುಕೊಳ್ಳು ಸಮುದಾಯ ಭವನದ ಮುಂದಿನ ದಿನಗಳಲ್ಲಿ ಸಮುದಾಯ ಭವನಕ್ಕೆ ಹಾಗೂ ಇಲ್ಲಿಗೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ಈ ಸಮಯದಲ್ಲಿ. ಪರಶುರಾಮಪುರ‌ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ.ಶಶಿಧರ್.ಕಾಡುಗೊಲ್ಲರ ಸಂಘದ ಯುವ ಘಟದ ಅಧ್ಯಕ್ಷ ಸಿದ್ದಾಪುರ ವಿರೇಶ,.ಮುಖಂಡರಾದಬೆಟ್ಟಪ್ಪನಹಳ್ಳಿ‌ ಮಹಾಲಿಂಗಪ್ಪ
ದೇವಸ್ಥಾನ‌‌ ಪೂಜಾರಿಗಳಾದ ಮಹಾಲಿಂಗಪ್ಪ, ಮುಖಂಡರಾದ ಕೆ.ಟಿ.ನಿಜಲಿಂಗಪ್ಪ,ಪಾಂಡುರಂಗಪ್ಪ,ಸಿ.ರಾಜಣ್ಣ,ಪಟೇಲ್ ಗೋಪಿನಾಥ,ಪೂಜಾರ್ ರಂಗಸ್ವಾಮಿ,ಎ.ಸುರೇಶ,ಪಾಂಡುರಂಗ, ಶಿವಣ್ಣ,ಗೋಪಾಲಪ್ಪ, ಮುದ್ದಿವೀರಪ್ಪ, ಗಿರಿಯಪ್ಪ,ಬೆಳಗೆರೆ ಗ್ರಾಮಪಂಚಾಯಿತಿ ಆಡಳಿತಾಧಿಕಾರಿ ರಮೇಶ, ಮಹಾಂತೇಶ್. ಪೂಜಾರ್ ಶ್ರೀಧರ್. ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಹಾಗೂ ಪೂಜಾರಿಗಳು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now