Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋತಿರಾಜನ ಹೊಸ ಸಾಹಸ ; ಬಂಟ್ವಾಳದ ಈ ಬೆಟ್ಟ ಹತ್ತಲಿದ್ದಾರೆ ನಾಳೆ..!

---Advertisement---

ಕೋತಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರದುರ್ಗ ಮೂಲದವರು. ಜ್ಯೋತಿರಾಜ್ ಮೂಲ ಹೆಸರಾದರೂ ಮಾಡುವ ಸಾಹಸಗಳಿಂದ ಕೋತಿರಾಜ್ ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವುದಕ್ಕೆ ಮುಂದಾಗಿದ್ದಾರೆ.

ನಾಳೆಯೇ ಕಾರಿಂಜೇಶ್ವರ ಬೆಟ್ಟವನ್ನು ಏರಲಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿದೆ. ಮೊದಲ ಬಾರಿಗೆ ಬಂಟ್ವಾಳದತ್ತ ಕೋತಿರಾಜ್ ಪಯಣ ಬೆಳೆಸಿದ್ದಾರೆ. ಈ ಕೋತಿರಾಜ್ ಅವರನ್ನು ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯುತ್ತಾರೆ. ಈಗ ಕಾರಿಂಜೇಶ್ವರ ಬೆಟ್ಟವನ್ನು ಏರಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕೋತಿರಾಜ್ ಸಾಹಸ ಮಾತ್ರವಲ್ಲ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಬಡವರ ಕಲ್ಯಾಣಕ್ಕಾಗಿ ತಮ್ಮದೇ ಆದ ಟ್ರಸ್ಟ್ ಅನ್ನು ಮಾಡಿದ್ದಾರೆ. ಈ ಟ್ರಸ್ಟ್ ಮೂಲಕ ಬಡವರಿಗೆ ಅಗತ್ಯವಿರುವ ಸಹಾಯವನ್ನು ಮಾಡುತ್ತಾ ಇರುತ್ತಾರೆ. ಅದಕ್ಕೆ ಹಣ ಹೊಂದಿಸಲು ಈ ರೀತಿಯ ಸಾಹಸಕ್ಕೂ ಕೈ ಹಾಕುತ್ತಾರೆ.

ನಾಳೆ ಭಾನುವಾರ ಕಾರಿಂಜೇಶ್ವರ ಬೆಟ್ಟವನ್ನು ಕೋತಿರಾಜ್ ಹತ್ತಲಿದ್ದಾರೆ. ಈ ಸಂಬಂಧ ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅಧಿಜೃತವಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಹಾಗೇ ಬಂಟ್ವಾಳ ಜನತೆಯ ಸಹಾಯವನ್ನು ಕೇಳಿದ್ದಾರೆ. ಇತ್ತೀಚೆಗಷ್ಟೇ ಕುಂದಾಪುರದ ಹನುಮಾನ್ ವಿಗ್ರಹ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಭಿನ್ನ ಸಾಹಸದ ಮೂಲಕ ಜನಪ್ರಿಯರಾದ ಕೋತಿರಾಜ್ ತನ್ನ ಇಷ್ಟದೇವರಾದ 85 ಅಡಿ ಎತ್ತರದ ಹನುಮಂತನ ವಿಗ್ರಹದ ತುತ್ತ ತುದಿಗೆ ಏರಿ ಎಲ್ಲರನ್ನು ಚಕಿತರನ್ನಾಗಿ ಮಾಡಿದ್ದಾರೆ. ಈಗಾಗಲೇ ಬಹಳಷ್ಟು ಕಡೆ ಎತ್ತರದ ಕಟ್ಟಡಗಳನ್ನು ಏರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಿಂದೆಯೂ ಕೂಡ ಉಡುಪಿಯ ಅನೇಕ ಬಹು ಮಹಡಿ ಕಟ್ಟಡಗಳನ್ನು ಇವರು ಏರಿ ಸಾಹಸ ಮೆರೆದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ಮೂತ್ರಪಿಂಡ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆ: ಖ್ಯಾತ ತಜ್ಞ ವೈದ್ಯ ಡಾ. ಮಂಜುನಾಥ ವಾಲಿ ಲಭ್ಯ

ಚಿತ್ರದುರ್ಗದ ಜನಸಾಮಾನ್ಯರ ಆಸ್ಪತ್ರೆ ‘ಸುನೀತ ನರ್ಸಿಂಗ್ ಹೋಂ’ಗೆ 25 ವರ್ಷಗಳ ಸಾರ್ಥಕ ಸೇವೆ

ವೈದ್ಯರ ದಿನಾಚರಣೆ ವಿಶೇಷ: ವೈದ್ಯಕೀಯ ಸೇವೆ, ಸಂಶೋಧನೆ, ತರಬೇತಿಯಲ್ಲಿ ಚಿತ್ರದುರ್ಗದ `CMCRI’ಯ ಸಾಧನೆಗಳು

ಇಂದಿನಿಂದ ದೇಶಾದ್ಯಂತ ಹೊಸ ಉದ್ಯೋಗ ಖಾತರಿ ‘VBK-G RAM G’ ಜಾರಿ; ಕೂಲಿ ಮತ್ತು ದಿನಗಳ ಸಂಖ್ಯೆ ಭಾರಿ ಏರಿಕೆ!

ಸಿಎ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆ: ಮಧು ಪ್ರಸಾದ್ ಕಿವಿಮಾತು ಮತ್ತು ಯಶಸ್ಸಿನ ಸೂತ್ರಗಳು

ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ವಿಶೇಷ ಲೆಕ್ಕದಲ್ಲೂ ಸೈ, ಸೇವೆಯಲ್ಲೂ ಸೈ: ಚಿತ್ರದುರ್ಗದ ಸಿಎ ಕೆ. ಮಧುಪ್ರಸಾದ್ ಸಮಾಜಕ್ಕೆ ಮಾದರಿ

Leave a Comment