ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿರುವ ಇಲ್ಲಿನ ಪ್ರಮುಖ ವೈದ್ಯಕೀಯ ಚಿಕಿತ್ಸಾ ಕೇಂದ್ರ ‘ಸುನೀತ ನರ್ಸಿಂಗ್ ಹೋಂ’ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿ ಜಿಲ್ಲೆಯ ಜನರ ಮನೆಮಾತಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೇವೆಗಾಗಿ ಪಕ್ಕದ ದಾವಣಗೆರೆ ಅಥವಾ ಬೆಂಗಳೂರಿಗೆ ಹೋಗಬೇಕಿದ್ದ ಕೊರಗನ್ನು ನೀಗಿಸಿರುವ ಈ ಆಸ್ಪತ್ರೆ, ಬಯಲುಸೀಮೆ ಭಾಗದ ಬಡ ಹಾಗೂ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ವಿಶಿಷ್ಟ ಛಾಪು ಮೂಡಿಸಿದೆ.
1998 ರಲ್ಲಿ ಸ್ಥಾಪನೆಗೊಂಡ ಈ ಆಸ್ಪತ್ರೆಯನ್ನು ವೈದ್ಯ ದಂಪತಿಗಳಾದ ಡಾ. ಜಿ. ನರಸಪ್ಪ ಹಾಗೂ ಡಾ. ಎಚ್. ಉಷಾಕಿರಣ್ ಅವರು ಆರಂಭಿಸಿದರು. ಪ್ರಸ್ತುತ ಇವರೊಂದಿಗೆ ಇವರ ಪುತ್ರ ಡಾ. ಸಂದೀಪ್ ಮತ್ತು ಸೊಸೆ ಡಾ. ಎಸ್. ಸೌಮ್ಯಾ ಅವರು ಕೈಜೋಡಿಸಿದ್ದು, ಇಡೀ ವೈದ್ಯ ಕುಟುಂಬ 24 ಗಂಟೆಯೂ ನಿರಂತರವಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಲಭ್ಯವಿರುವ ಸೌಲಭ್ಯಗಳು:
ಉಚಿತ ನೇತ್ರ ಚಿಕಿತ್ಸೆ: ಜಿಲ್ಲಾಸ್ಪತ್ರೆಯ ನಿವೃತ್ತ ಸರ್ಜನ್ ಆಗಿರುವ ನೇತ್ರ ತಜ್ಞ ಡಾ. ಜಿ. ನರಸಪ್ಪ ಅವರು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಣ್ಣಿನ ಪೊರೆ ತೆಗೆದು ಲೆನ್ಸ್ ಅಳವಡಿಸುವ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ಉಚಿತ ಶಿಬಿರಗಳ ಮೂಲಕ 30 ಸಾವಿರಕ್ಕೂ ಹೆಚ್ಚು ಜನರಿಗೆ ದೃಷ್ಟಿ ನೀಡಿದ್ದಾರೆ.
ಮೊದಲ ಡಯಾಲಿಸಿಸ್ ಕೇಂದ್ರ: ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುವವರಿಗಾಗಿ ಡಾ. ಸಂದೀಪ್ ಅವರು ಜಿಲ್ಲೆಯಲ್ಲೇ ಮೊದಲ ಬಾರಿಗೆ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದ್ದು, ಇದುವರೆಗೆ 35 ಸಾವಿರಕ್ಕೂ ಅಧಿಕ ಡಯಾಲಿಸಿಸ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಸ್ತ್ರೀರೋಗ ಹಾಗೂ ಬಂಜೆತನ ನಿವಾರಣೆ: ಪ್ರಸೂತಿ ತಜ್ಞರಾದ ಡಾ. ಉಷಾಕಿರಣ್ ಹಾಗೂ ಡಾ. ಸೌಮ್ಯಾ ಅವರ ನೇತೃತ್ವದಲ್ಲಿ ಹೆರಿಗೆ, ಲ್ಯಾಪ್ರೋಸ್ಕೋಪಿ ಹಾಗೂ ಬಂಜೆತನ ನಿವಾರಣೆಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
ಇತರ ಸೌಲಭ್ಯಗಳು: ಆಸ್ಪತ್ರೆಯಲ್ಲಿ ಸುಸಜ್ಜಿತ ಲ್ಯಾಬೋರೇಟರಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಸಿಜಿ, ನೆಬುಲೈಸೆಷನ್, ಸ್ವಂತ ಔಷಧ ಮಳಿಗೆ, ಆ್ಯಂಬುಲೆನ್ಸ್ ಹಾಗೂ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ವಿಮಾ ಸೌಲಭ್ಯಗಳು ಲಭ್ಯವಿವೆ.
‘ರೋಗಿಗಳ ಸೇವೆಯೇ ಜೀವನದ ಅತ್ಯುನ್ನತ ಸೇವೆ’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಸುನೀತ ನರ್ಸಿಂಗ್ ಹೋಂ, ಚಿತ್ರದುರ್ಗ ಜಿಲ್ಲೆಯ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.

ಹೆಚ್ಚಿನ ಮಾಹಿತಿ ಸಂಪರ್ಕಕ್ಕಾಗಿ: 08194-224229 ಕರೆ ಮಾಡಿ.
ಸುನೀತ ನರ್ಸಿಂಗ್ ಹೋಂ
LAPAROSCOPY AND INFERTILITY CLINIC
ಲ್ಯಾಪ್ರೋಸ್ಕೋಪಿ ಮತ್ತು ಬಂಜೆತನ ನಿವಾರಣ ಕೇಂದ್ರ
ಸುನೀತ ಕಿಡ್ನಿ ಕೇರ್ ಅಂಡ್ ಡಯಾಲಿಸಿಸ್ ಸೆಂಟರ್
ಡಾ. ಜಿ.ನರಸಪ್ಪ
ಡಿಒಎಂಎಸ್,
ನೇತ್ರ ತಜ್ಞರು,
ನಿವೃತ್ತ ಜಿಲ್ಲಾ ಸರ್ಜನ್
ಡಾ. ಎಚ್. ಉಷಾಕಿರಣ್,
ಎಂಬಿಬಿಎಸ್, ಡಿಜಿಒ,
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು,
ಡಾ. ಎಸ್. ಸೌಮ್ಯ,
ಎಂಬಿಬಿಎಸ್, ಎಂ.ಎಸ್ (ಒಬಿಜಿ).
ಡಿಎಂಎಸ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
ಲ್ಯಾಪ್ರೋಸ್ಕೊಪಿ ಮತ್ತು ಬಂಜೆತನ ನಿವಾರಣೆ ತಜ್ಞರು
ಡಾ. ಜಿ.ಎನ್. ಸಂದೀಪ್,
ಎಂಬಿಬಿಎಸ್, ಎಂಡಿ (ಮೆಡಿಸಿನ್)
ಎಫ್.ಸಿ.ಐಡಿ (ಡಯಾಬಿಟಿಸ್) ಫಿಜಿಷಿಯನ್ ಮತ್ತು ಡಯಾಲಿಟಲಾಜಿಸ್ಟ್

ಡಾ. ಪ್ರದೀಪ್ ಬಿ.ಜಿ.
ಎಂ.ಬಿ.ಬಿ.ಎಸ್., ಡಿ.ಓ (AFMC PUNE)
ನೇತ್ರ ಚಿಕಿತ್ಸಾ ತಜ್ಞರು
ಡಾ. ನಾಗರಾಜ್
ಎಂಬಿಬಿಎಸ್, ಎಂಎಸ್
ENT ಸರ್ಜನ್
ದೊರೆಯುವ ಸೌಲಭ್ಯಗಳು :
ಕಣ್ಣಿನ ಪೊರೆ ಮತ್ತು ಲೆನ್ಸ್ ಅಳವಡಿಕೆ ಶಸ್ತ್ರಚಿಕಿತ್ಸೆ
ಹೆರಿಗೆ ಮತ್ತು ಬಂಜೆತನ ನಿವಾರಣ ಕೇಂದ್ರ
ಶಸ್ತ್ರಚಿಕಿತ್ಸ ವಿಭಾಗ
ಲ್ಯಾಪ್ರೋಸ್ಕೋಪಿ ಕೇಂದ್ರ
ಕಿಡ್ನಿ ರೋಗ ಮತ್ತು ಡಯಾಲಿಸಿಸ್ ಸೌಲಭ್ಯಗಳು
ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕ್ಲಿನಿಕ್
ಲ್ಯಾಬೋರೇಟರಿ ಸೌಲಭ್ಯಗಳು :
ಅಲ್ಟಾಸೌಂಡ್ ಸ್ಕ್ಯಾನಿಂಗ್
ಫೋಟೊಥೆರಪಿ
ಇ.ಸಿ.ಜಿ. ಮತ್ತು ನೆಬುಲೈಸೆಷನ್ ಸೌಲಭ್ಯಗಳು
ಔಷಧಿ ಅಂಗಡಿ
ಅಂಬ್ಯುಲೆನ್ಸ್ ಸೌಲಭ್ಯ
ಕಾಲ್ಲೋಸ್ಕೋಪಿ
ನಗದು ರಹಿತ ಚಿಕಿತ್ಸೆಗಾಗಿ ಆರೋಗ್ಯ ವಿಮೆ ಕಾರ್ಡ್ ಸ್ವೀಕರಿಸಲಾಗುತ್ತದೆ.
ವಿಳಾಸ :
ಸುನೀತ ಹಾಸ್ಪಿಟಲ್,
ಕೋರ್ಟ್ ಸಮೀಪ, ತುರುವನೂರು ರಸ್ತೆ
ಸಿ.ಕೆ. ಪುರ ಬಡಾವಣೆ, ಆಕಾಶವಾಣಿ ಎದುರು, ಚಿತ್ರದುರ್ಗ 577 501.
ಫೋನ್ : 08194-224229/200020

























