ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನಿಜವಾದ ಸ್ವಾತಂತ್ರ್ಯವೆಂದರೆ ಅಜ್ಞಾನ, ಬಡತನ, ಬೇಧಭಾವ, ಅಸಹಿಷ್ಣುತೆ ಹಾಗೂ ಭ್ರಷ್ಟಾಚಾರದಿಂದ ಮುಕ್ತಿ ಪಡೆಯುವುದು ಎಂದು ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಭಾರತೀಯ ಪುರಾತತ್ವ ಇಲಾಖೆಯ ಸಹಯೋಗ ದೊಂದಿಗೆ ನಗರದ ಐತಿಹಾಸಿಕ ಕಲ್ಲಿನ ಕೋಟೆಯ ಆವರಣದಲ್ಲಿ 80 ನೇ ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸೋಣ ಹಾಗೂ ಪ್ರತಿಯೊಬ್ಬರೂ ಗೌರವ ಅವಕಾಶ ಹಾಗೂ ಭರವಸೆಯಿಂದ ಬದುಕುವ ಭಾರತವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.
ಇಂದಿನ ಭಾರತದ ಯುವ ಶಕ್ತಿ ಆವಿಷ್ಕರಿತ ಶಿಕ್ಷಣ ಪಡೆಯುವದರೊಂದಿಗೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ವಿಜ್ಞಾನ, ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರಗಳಿಗೆ ಕೊಡುಗೆ ನೀಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಏಕತೆ , ಶಾಂತಿ ಹಾಗೂ ಜಾಗೃತಿ ಮೂಡಿಸುವುದೇ ನಿಜವಾದ ಸ್ವಾತಂತ್ರ್ಯ ಹಾಗೂ ಹಿರಿಯರ ಸ್ವಾತಂತ್ರ್ಯ ಹೋರಾಟಕ್ಕೆ ನಾವು ಕೊಡುವ ನಿಜವಾದ ಗೌರವ ಹಾಗೂ ನ್ಯಾಯ ಎಂಬ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ರೊ|M. R. ರವಿ, ಕಾರ್ಯದರ್ಶಿ, M.K.ರವೀಂದ್ರ IPDG, ರೊ| ಸವಿತಾ ಶಿವಕುಮಾರ್, AG . ಇನ್ನರ್ವ್ಹೀಲ್ ಕ್ಲಬ್ಬಿನ ಅಧ್ಯಕ್ಷಿಣಿ ರೊ| ಸುನೀತ ರಮೇಶ್
ಕ್ಲಬ್ಬಿನ ನಿರ್ದೇಶಕರು, ಸದಸ್ಯರು, ಕೋಟೆಯ ಸೆಕ್ಯುರಿಟಿ ತಂಡದವರು, ಸಾರ್ವಜನಿಕರು ಉಪಸ್ಥಿತರಿದ್ದು ಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡಿದರು.ರೊ| ಮಂಜುನಾಥ,ರಾಜ್ಯ ಕಂಟ್ರ್ಯಾಕ್ಟರ್ ಸಂಘದ ಅಧ್ಯಕ್ಷರು ಆಗಮಿತರಿಗೆ ಸ್ವಾಗತ ಕೋರಿದರು , ಕಾರ್ಯಕ್ರಮವನ್ನು ರೊ| P ಸುರೇಶ್ ರಾಜು ನಿರೂಪಿಸಿದರು. ಪುರಾತತ್ವ ಇಲಾಖೆಯ ಕನ್ಸರ್ವೇಟೀವ್ ಆಫೀಸರ್ ಸುಧೀರ್ ಹಾಗೂ ಕಿರಣ್ ಉಪಸ್ಥಿತರಿದ್ದರು.M. R. ರವಿ ವಂದಿಸಿದರು. ಅಂತಿಮವಾಗಿ ರೊI ಶ್ರೀಕಾಂತ ಎ.ವಿ. ಅವರೊಂದಿಗೆ ಸಾಮೂಹಿಕವಾಗಿ ಒಂದೇ ಮಾತರಂ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.










