Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ನಿರ್ಬಂಧ :  ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ಕಟ್ಟುನಿಟ್ಟಿನ ನಿಯಮ

---Advertisement---

ಬೆಂಗಳೂರು.ಸುದ್ದಿಒನ್.ಅಕ್ಟೋಬರ್.06: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಮರುಬಳಕೆಯ ಎಣ್ಣೆಯ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿದಂತೆ ವಿವಿಧ ಆಹಾರ ಮಳಿಗೆಗಳಲ್ಲಿ ಪದೇ ಪದೇ ಕರಿದ ಎಣ್ಣೆಯನ್ನೇ ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಡುಗೆ ಎಣ್ಣೆಯ ಮರುಬಳಕೆಗೆ ಸರ್ಕಾರ ಸಂಪೂರ್ಣ ನಿರ್ಬಂಧ ವಿಧಿಸಿದೆ. ಸುರಕ್ಷಿತ ಆಹಾರವನ್ನು ಒದಗಿಸಿ, ಆರೋಗ್ಯಕರ ಸಮಾಜವನ್ನು ನಿರ್ಮಿಸುವುದೇ ತಮ್ಮ ಮುಖ್ಯ ಆದ್ಯತೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಿಸಿ ಮಾಡುವಂತಿಲ್ಲ

ಹೊಸ ನಿಯಮಾವಳಿಗಳ ಅನ್ವಯ, ಯಾವುದೇ ಕಾರಣಕ್ಕೂ ಅಡುಗೆ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಿಸಿ ಮಾಡಿ ಮರುಬಳಕೆ ಮಾಡುವಂತಿಲ್ಲ. ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ-ದೊಡ್ಡ ಆಹಾರ ಮಳಿಗೆಗಳು ಈ ಕಟ್ಟುನಿಟ್ಟಿನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆಹಾರ ಸುರಕ್ಷತಾ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಫಲರಾಗುವ ಮತ್ತು ಪದೇ ಪದೇ ಎಣ್ಣೆಯನ್ನು ಕಾಯಿಸಿ ತಿಂಡಿ-ತಿನಿಸುಗಳನ್ನು ತಯಾರಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆ ಸೂಚನೆ ನೀಡಿದೆ.

 

ಸಿಂಕ್ ಅಥವಾ ಒಳಚರಂಡಿಗೆ ಸುರಿಯದೆ ಅಧಿಕೃತ ಸಂಸ್ಥೆಗಳಿಗೆ ನೀಡಲು ಸೂಚನೆ

  ಬಳಸಿ ಉಳಿದ ಎಣ್ಣೆಯನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡುವುದಕ್ಕೂ ಸರ್ಕಾರ ಕಡಿವಾಣ ಹಾಕಿದೆ. ಬಳಸಿದ ಎಣ್ಣೆಯನ್ನು ನೇರವಾಗಿ ಅಡುಗೆ ಮನೆಯ ಸಿಂಕ್ ಅಥವಾ ಒಳಚರಂಡಿಗೆ ಸುರಿದು ಪರಿಸರ ಮಾಲಿನ್ಯ ಉಂಟುಮಾಡಬಾರದು. ಬದಲಿಗೆ, ಇಂತಹ ತ್ಯಾಜ್ಯ ಎಣ್ಣೆಯನ್ನು ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಸಂಗ್ರಹಣಾ ಸಂಸ್ಥೆಗಳಿಗೆ (Aggregators) ಮಾತ್ರವೇ ಹಸ್ತಾಂತರಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಜತೆಗೆ ಪರಿಸರ ಸಂರಕ್ಷಣೆಗೂ ಸರ್ಕಾರ ಒತ್ತು ನೀಡಿದೆ.

Join WhatsApp

Join Now

Join Telegram

Join Now