Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಮಹಾಂತರೆಡ್ಡಿ ನೇಮಕ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ನ. 26 : ಸಂಘದ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಸದಸ್ಯರು ಹಾಗೂ ಹಿರಿಯ ಮತ್ತು ಕಿರಿಯ ನಿವೃತ್ತ ಅಧಿಕಾರಿಗಳು ಭೇದಭಾವವಿಲ್ಲದೆ ಒಗ್ಗೂಡಿ ಸಹಕಾರ ನೀಡಬೇಕೆಂದು ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡ ಮಹಾಂತರೆಡ್ಡಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ನಂತರ ಸಂಘಕ್ಕೆ ನೂತನವಾಗಿ ನೇಮಕವಾದ ಕಾರ್ಯ ಕಾರಿ ಸಮಿತಿಯಲ್ಲಿ ಭಾಗವಹಿಸಿ ಮಾತನಾಡಿದ ಮಹಾಂತರೆಡ್ಡಿಯವರು, ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಾತ್ರಕ್ಕೆ ಯಾರೂ ದೊಡ್ಡವರಲ್ಲ, ಕೆಳಗೆ ಕುಳಿತುಕೊಂಡ ಮಾತ್ರಕ್ಕೆ ಯಾರೂ ಸಣ್ಣವರಲ್ಲ ಎಂದು ಅವರು, ಎಲ್ಲರೂ ನಿವೃತ್ತ ಅಧಿಕಾರಿಗಳಾಗಿದ್ದು, ತಮ್ಮಲ್ಲಿ ಯಾವುದೇ ಭೇದಭಾವ ಇರಬಾರದೆಂದು ಸಂಘದ ಶ್ರೇಯೋ ಭಿವೃದ್ಧಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಜವಾಬ್ದಾರಿ ನೀಡಲು ಕಾರ್ಯಕಾರಿ ಸಮಿತಿ ಇರುತ್ತದೆ ಹಾಗೂ ಬಂದಿರುವ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಈಗಾಗಲೇ ಅನುಭವವಿದೆ ಅಭಿಪ್ರಾಯ ಪಟ್ಟಿದ್ದಾರೆ.

ಸರ್ವ ಸದಸ್ಯರು ಈ ಹಿಂದೆ ಸಭೆಗಳಿಗೆ ಹಾಜರಾಗಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಗೆ ನೀಡುತ್ತಿದ್ದ ಸಹಕಾರವನ್ನೇ ಮುಂದೆಯೂ ನಿರೀಕ್ಷಿಸುವುದಾಗಿ ತಿಳಿಸಿ ಹಿರಿಯ ಹಾಗೂ ಕಿರಿಯ ಅಧಿಕಾರಿಗಳಿಂದಲೂ ಇದೇ ರೀತಿಯ ಸಹಕಾರ ಬಯಸುವುದಾಗಿ ಹೇಳಿ ಸಂಘದ ಪ್ರಗತಿಗಾಗಿ ಭೇದಭಾವ ಮರೆತು ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಹಿಂದಿನಂತೆಯೇ ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘಕ್ಕೆ ನೂತನವಾಗಿ ಕಾರ್ಯಕಾರಿ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ನಿವೃತ್ತ ಡಿವೈಎಸ್ಪಿ ಭೀಮಾರೆಡ್ಡಿ, ಎಸ್.ಬಸವರಾಜು, ಉಪಾಧ್ಯಕ್ಷರಾಗಿ ಟಿ.ಎಚ್.ರಾಜಪ್ಪ, ಜಿ.ಎಸ್.ಜಯಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಿವೃತ್ತ ಡಿವೈಎಸ್ಪಿ ಯೂಸುಫ್, ಜಂಟಿ ಕಾರ್ಯದರ್ಶಿಯಾಗಿ ಪಿ.ನಾಗೇಂದ್ರಪ್ಪ, ಖಂಜಾಚಿಯಾಗಿ ಹನುಮಂತರೆಡ್ಡಿ, ಲೆಕ್ಕಾಧಿಕಾರಿಯಾಗಿ ಆರ್.ತಿಮ್ಮಣ್ಣ, ಕಾನೂನು ಸಲಹೆಗಾರರಾಗಿ ವೀರಣ್ಣ, ನಿರ್ದೆಶಕರುಗಳಾಗಿ ಎಸ್.ನಾಗರಾಜು, ಲಿಂಗಪ್ಪ, ಶಂಕರ್, ಪಿ.ನಾಗರಾಜು, ಜಿತೇಂದ್ರಪ್ಪ, ಟಿ.ಲಿಂಗಪ್ಪ, ವಿ.ಬಿ.ತಿಮ್ಮಾರೆಡ್ಡಿ, ಸಿ.ಮಹೇಶ್ವರಪ್ಪ, ಮಲ್ಲಿಕಾರ್ಜನ, ಲಕ್ಷ್ಮೀನಾರಾಯಣ, ಜಯ್ಯಪ್ಪ ಹಾಗೂ ಬಸವರಾಜು ನೂತನ ಕಾರ್ಯಕಾರಿ ಸಮಿತಿಗೆ ನೇಮಕವಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now