ನಗರದ ಜಿಲ್ಲಾ ದಂತ ವೈದ್ಯರ ಸಂಘದ ವತಿಯಿಂದ ಆಡು ಮಲ್ಲೇಶ್ವರಕ್ಕೆ ಹಾಗೂ ತಿಮ್ಮಣ್ಣ ನಾಯಕನ ಕೆರೆ ನಗರವನಕ್ಕೆ ಒಂದು ದಿನದ ಚಾರಣವನ್ನು ಏರ್ಪಡಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ಜೋಗಿಮಟ್ಟಿ ರಸ್ತೆಯ ಕೆಳಭಾಗದ ಅನ್ನಪೂರ್ಣೇಶ್ವರಿ ದೇವಾಲಯದಿಂದ ಹೊರಟು ತಿಮ್ಮಣ್ಣ ನಾಯಕನ ಕೆರೆಗೆ ತಲುಪಿ ಅಲ್ಲಿಂದ ಮುಂದೆ ನಗರವನ, ಚೌಡಮ್ಮನಕೆರೆ ಮೂಲಕ ಕಾಡು ಹಾದಿಯಲ್ಲಿ ಆಡುಮಲ್ಲೇಶ್ವರ ಪ್ರವೇಶ ದ್ವಾರಕ್ಕೆ ತಲುಪಿ ಅಲ್ಲಿಂದ ಮುಂದೆ ಜೋಗಿಮಟ್ಟಿ ಪ್ರವೇಶ ದ್ವಾರದವರೆಗೂ ನಡಿಗೆ ಮುಖಾಂತರ ಕ್ರಮಿಸಿ ಅನ್ನಪೂರ್ಣೇಶ್ವರಿ ಗುಡಿಗೆ ವಾಪಸ್ ಬಂದು ಚಾರಣ ಮುಕ್ತಾಯಗೊಳಿಸಲಾಯಿತು.
ಒಟ್ಟು ಹತ್ತು ಕಿಲೋಮೀಟರ್ ನಡಿಗೆಯನ್ನು ನಾಲ್ಕು ಗಂಟೆ ಅವಧಿಯಲ್ಲಿ ಪೂರೈಸಲಾಯಿತು.
ನಡಿಗೆಯ ಉದ್ದಕ್ಕೂ ಕಾಡು ಹಾಗೂ ಕಾಡಿನ ಪಶು ಪಕ್ಷಿಗಳ ವೀಕ್ಷಣೆ ಸಂಘದ ಸದಸ್ಯರು ಹಾಗೂ ಕುಟುಂಬದ ಸದಸ್ಯರ ಜೊತೆಗೂಡಿ ವೀಕ್ಷಿಸಲಾಯಿತು.

ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘ (ರಿ) ದ ಜಿಲ್ಲಾ ಅಧ್ಯಕ್ಷರಾದ ಮಹಾಂತೇಶ ರವರು ಮಾತನಾಡಿ ದಂತ ವೈದ್ಯರು ಸದಾಕಾಲ ಒತ್ತಡ ಭರಿತ ಜೀವನ ನಡೆಸುತ್ತಾರೆ. ಕುಟುಂಬದ ಜೊತೆಗೆ ಸಮಯ ಕಳೆಯಲು ಅವಕಾಶ ಬಹಳ ಕಡಿಮೆ ಇರುತ್ತದೆ.
ಇಂತಹ ಒಂದು ದಿನದ ಚಾರಣ ಸಂಘದ ವತಿಯಿಂದ ಏರ್ಪಡಿಸಿ ವೈದ್ಯರನ್ನು ಒತ್ತಡ ಮುಕ್ತರನ್ನಾಗಿ ಮಾಡಿ ಜೊತೆಗೆ ಕುಟುಂಬದ ಸದಸ್ಯರ ಜೊತೆಗೆ ಮುಕ್ತವಾಗಿ ಬೆರೆಯುವ ಒಂದು ಸದಾ ಅವಕಾಶವಾಗಿರುತ್ತದೆ. ಚಿತ್ರದುರ್ಗದಲ್ಲಿ ಸಾಕಷ್ಟು ಚಾರಣ ಸ್ಥಳಗಳಿದ್ದು ಮುಂದಿನ ದಿನಗಳಲ್ಲಿ ಚಾರಣವನ್ನು ಇತರ ಸ್ಥಳಗಳಿಗೆ ಏರ್ಪಡಿಸುವ ಮೂಲಕ ಪರಿಸರದ ಜೊತೆಗೆ ಮಾನವನ ಅನುಬಂಧವನ್ನು ಕುರಿತು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಸುನಿಲ್ ವಡವಡಗಿ ಮಾತನಾಡಿ ಪರಿಸರ ಹಾಗೂ ಕಾಡಿನ ಮಹತ್ವವನ್ನು ತಿಳಿಸಿ ಕಾಡನ್ನು ರಕ್ಷಿಸುವ ಜೊತೆಗೆ ಕಾಡನ್ನು ಅರಿಯುವ ಸಂದರ್ಭ ಇದಾಗಿದ್ದು ಮುಂದಿನ ದಿನಗಳಲ್ಲಿ ಸಂಘದ ಹಾಗೂ ಅರಣ್ಯ ಇಲಾಖೆಯ ಜೊತೆಗೂಡಿ ಸಸಿ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಚಾರಣದ ಮುಕ್ತಾಯದ ಸಮಯದಲ್ಲಿ ತಿಮ್ಮಣ್ಣ ನಾಯಕನ ಕೆರೆ ಪರಿಸರದಲ್ಲಿ ಸಂಘದ ಸದಸ್ಯರಿಗೆ ಭೋಜನವನ್ನು ಏರ್ಪಡಿಸಲಾಗಿತ್ತು.
ಚಿತ್ರದುರ್ಗ ನಗರದ ಖಾಸಗಿ ದಂತವೈದ್ಯರು ಹಾಗೂ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಖಜಾಂಚಿಗಳಾದ ಡಾ. ಗೋವರ್ಧನ ಚಾರಣದ ನೇತೃತ್ವ ವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












