ಬೆಂಗಳೂರು: ಟೀ, ಕಾಫಿಗೆ ಹೋದ್ರು, ಬಟ್ಟೆ ಶಾಪಿಂಗ್, ಮನೆಗೆ ಬೇಕಾದ ದವಸ ಧಾನ್ಯಗಳ ಶಾಪಿಂಗ್ ಹೋದ್ರು ಕೂಡ ಅಲ್ಲಿ ಎರಡು ಥರದ ಜಿಎಸ್ಟಿ ಕಟ್ಟಿ ಕಟ್ಟಿನೆ ಜನ ಸುಸ್ತಾಗಿ ಹೋಗಿದ್ದಾರೆ. ಇದೀಗ GST ವಿಚಾರದಲ್ಲಿ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನ ನೀಡಿದೆ. ಕಾಳುಗಳು, ಟೀ, ಮಂಡಕ್ಕಿ, ಕಡಲೆ ಹಿಟ್ಟು ಸೇರಿದಂತೆ ಹಲವು ಅಗತ್ಯ ಸಾಮಾಗ್ರಿಗಳ ಮೇಲೆ GST ಇಳಿಕೆಗೆ ಕ್ರಮ ತೆಗೆದುಕೊಳ್ಳಲಾಗಿದೆಯಂತೆ.
ಜಿಎಸ್ಟಿ ದರದಲ್ಲಿ ಕಡಿಮೆಯಾದರೆ ಮಧ್ಯಮವರ್ಗದವರ ಬದುಕಲ್ಲಿ ಕೊಂಚ ಖರ್ಚು ವೆಚ್ಚ ಕಡಿಮೆಯಾಗಬಹುದು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ಸಲಹೆ ನೀಡಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇದೇ ತಿಂಗಳ ಜುಲೈನಲ್ಲಿ ನಡೆಯುವ ಮಂಡಳಿ ಸಭೆಯಲ್ಲಿ ಜಿಎಸ್ಟಿ ದರ ಇಳಿಕೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಊಹೆ ಮಾಡಿದ್ದಾರೆ.
ಅದರಲ್ಲೂ ನಮ್ಮ ದೇಶದಲ್ಲಿ ಜಿಎಸ್ಟಿ ಹಣ ಹೆಚ್ಚಾಗಿನೆ ಕಲೆಕ್ಟ್ ಆಗ್ತಾ ಇದೆ. ಮೇ 2025ರಲ್ಲಿ 2.01 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಹಣ ಸಂಗ್ರಹವಾಗಿದ್ರೆ, ಜೂನ್ 2025ರಲ್ಲಿ 1.85 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಹಣ ಸಂಗ್ರಹವಾಗಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚು ಜಿಎಸ್ಟಿ ಹಣವನ್ನು ಸಂಗ್ರಹಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಜೂನ್ ತಿಂಗಳಲ್ಲಿ ಜಿಎಸ್ಟಿ ಹಣ ಸಂಗ್ರಹ ಕಡಿಮೆಯಾಗಿದ್ದರೂ, 2024ರ ಜೂನ್ ತಿಂಗಳಿಗೆ ಹೋಲಿಸಿದರೇ, ಶೇಕಡ 6.5ರಷ್ಟು ಹೆಚ್ಚು ಜಿಎಸ್ಟಿ ಹಣ ಸಂಗ್ರಹವಾಗಿದೆ. ಹೀಗಾಗಿ ಜಿಎಸ್ಟಿ ದರದಲ್ಲಿ ಕಡಿಮೆ ಮಾಡಲು ಸದ್ಯದಲ್ಲಿಯೇ ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ ಎನ್ನಲಾಗಿದೆ.











