ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಚಿತ್ರದುರ್ಗ ಜಿಲ್ಲಾ ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ಸ್ ಅಂಡ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ (ಸಿಡಿ-ಪೇಸ್) ವತಿಯಿಂದ ನಗರದಲ್ಲಿ ತೃತೀಯ ಬಾರಿಗೆ ಬೃಹತ್ ಕಟ್ಟಡ ಸಾಮಗ್ರಿಗಳು, ಇಂಟೀರಿಯರ್ಸ್ ಹಾಗೂ ಎಕ್ಸ್ಟೀರಿಯರ್ಸ್ ವಸ್ತು ಪ್ರದರ್ಶನ ಡ್ರೀಮ್ ಬಿಲ್ಡ್ – 2026 ಆಯೋಜಿಸಲಾಗಿದೆ.
ಈ ವಸ್ತು ಪ್ರದರ್ಶನವು ಆಗಸ್ಟ್ 8, 9 ಮತ್ತು 10 ರಂದು ನಗರದ ಪಿ.ಬಿ. ರಸ್ತೆಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಆಗಸ್ಟ್ 8 ರಂದು ಬೆಳಿಗ್ಗೆ 11.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10.00 ರಿಂದ ರಾತ್ರಿ 9.00 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
ಸಿರಿಗೇರಿಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಟಿ. ರಘುಮೂರ್ತಿ, ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ, ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ, ಎಸ್.ಕೆ. ಸ್ಟೀಲ್ ಟೆಕ್ ನ ಜನರಲ್ ಮ್ಯಾನೇಜರ್ ಸುಭಾಷ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ನ ಅಶೋಕ್ ರೆಡ್ಡಿ ಕೊಳ್ಳೂರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಿ ಪೇಸ್ ಅಧ್ಯಕ್ಷರಾದ ಸಿ. ರವಿಕುಮಾರ್ ವಹಿಸಲಿದ್ದಾರೆ.








