Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಹನಗಳಿಗೆ ವಿಮೆ ಇಲ್ಲದಿದ್ದರೆ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನವಿಲ್ಲ : ಸುಪ್ರೀಂಕೋರ್ಟ್ ನಿರ್ದೇಶನ

---Advertisement---

ದೆಹಲಿ.ಆಗಸ್ಟ್.5: ಚಾಲ್ತಿಯಲ್ಲಿರುವ ಥರ್ಡ್‌ ಪಾರ್ಟಿ ವಿಮೆ (Vehicle Insurance) ಹೊಂದಿರದ ವಾಹನಗಳಿಗೆ ಇಂಧನ ಪೂರೈಕೆ ಮಾಡುವುದನ್ನು ತಡೆಯಲು ಪ್ರಾಯೋಗಿಕ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ಪ್ರಮುಖ ಆದೇಶ ಹೊರಡಿಸಿದೆ.

ದೇಶದಲ್ಲಿ ಸಂಚರಿಸುವ ಶೇಕಡಾ 56 ರಷ್ಟು ವಾಹನಗಳು ಯಾವುದೇ ರೀತಿಯ ವಿಮೆ ಹೊಂದಿಲ್ಲ ಎಂಬುದನ್ನು 2024-25ರ ಹಣಕಾಸು ಸ್ಥಾಯಿ ಸಮಿತಿ ವರದಿಯನ್ನು ಉಲ್ಲೇಖಿಸಿ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂಧನ ವಿತರಣೆಯನ್ನು ವಾಹನದ ವಿಮಾ ರಸೀದಿಯೊಂದಿಗೆ ಲಿಂಕ್ ಮಾಡುವ ಹೊಸ ಪ್ರಯೋಗಕ್ಕೆ ಚಾಲನೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಜಂಟಿಯಾಗಿ ಯೋಜಿಸಬೇಕೆಂದು ಪೀಠ ಸೂಚಿಸಿದೆ. ವಿಮೆ ಮಾಡಿಸುವವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಭರ್ತಿ ನಿರಾಕರಿಸುವ ವ್ಯವಸ್ಥೆ ಜಾರಿಗೆ ತರಲು ನ್ಯಾಯಾಲಯ ತಿಳಿಸಿದೆ.

Join WhatsApp

Join Now

Join Telegram

Join Now