ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 05 : ತಾಲ್ಲೂಕಿನ ದೊಡ್ಡೇರಿ ಗೊಲ್ಲರಹಟ್ಟಿ ಗ್ರಾಮದ ವಾಸಿ ಮುದ್ದು ಕೃಷ್ಣಪ್ಪ (60 ವರ್ಷ) ಅವರು ನಿನ್ನೆ ರಾತ್ರಿ (ಆಗಸ್ಟ್. 04, ಮಂಗಳವಾರ) ನಿಧನರಾದರು. ಮೃತರು ಪತ್ನಿ ರತ್ನಮ್ಮ, ಮಕ್ಕಳಾದ ಸಂಜಯ್, ಸಚಿನ್ ಸೇರಿದಂತೆ ಅಪಾರ ಕುಟುಂಬ ವರ್ಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ದೊಡ್ಡೇರಿ ಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.









