Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆಯಲ್ಲಿ ಶ್ರದ್ಧಾ ಭಕ್ತಿಯ ‘ಹೋಳಿಗೆಮ್ಮ ಹಬ್ಬ ಆಚರಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 05 : ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.

ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ.

ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.‌

ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ್ ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ,ದೇವಸ್ಥಾನ, ಕಣಿವೆ ಮಾರಮ್ಮನ ದೇವಸ್ಥಾನ, ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು
ನಮಿಸಿದರು.

ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ ತಕ್ಕ ಹೆಜ್ಜೆ ಹಾಕಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now