ದೇಶದ ಅತಿ ದೊಡ್ಡ ಮೋಸಗಾರ ಸಂಸ್ಥೆ ಅಂದರೆ ಅದು ಇಸ್ಕಾನ್. ಗೋವುಗಳನ್ನು ಕಟುಕರಿಗೆ ಮಾಡುತ್ತಿದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಇಸ್ಕಾನ್ ಸಂಸ್ಥೆ ಗೋಶಾಲೆಗಳನ್ನು ನಡೆಸುತ್ತಾ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ಪಡೆಯುತ್ತಿದೆ. ರಸ್ತೆಯ ಮೇಲೆ ಹರೇ ರಾಮ, ಹರೇ ಕೃಷ್ಣ ಹಾಡು ಹೇಳುತ್ತಾ, ನಮ್ಮ ಇಡೀ ಜೀವನ ಹಾಲಿನ ಮೇಲೆಯೇ ನಡೆಯುತ್ತದೆ ಎಂದೇ ಸಾರುತ್ತಾರೆ. ಆದರೆ ಇಸ್ಕಾನ್ ಗೋಶಾಲೆ ಹಸುಗಳನ್ನು ಕಟುಕರಿಗೆ ಮಾರುತ್ತಿದೆ ಎಂದೇ ಆರೋಪಿಸಿದ್ದಾರೆ.
ಮನೇಕಾ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ಕಾನ್ ವಕ್ತಾರ ಯುದಿಷ್ಟ್ ಗೋವಿಂದ ದಾಸ್, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಗೋವುಗಳ ರಕ್ಷಣೆಯ ಮುಂಚೂಣಿಯಲ್ಲಿರುವುದು ಇಸ್ಕಾನ್. ನಾವೂ ಯಾರಿಗೂ ಗೋವುಗಳನ್ನು ಮಾರಿಲ್ಲ. ಆದರೆ ನಮ್ಮ ಹಿತೈಶಿಯಾಗಿದ್ದವರು ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















