ಸುದ್ದಿಒನ್, ಚಿತ್ರದುರ್ಗ, ಜೂನ್. 09 : ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಯೋಗಗುರು ಕೆಂಚವೀರಪ್ಪ ಅವರನ್ನು ಧವಳಗಿರಿ ನಾಗರಿಕರು ಹಾಗೂ ಪತಂಜಲಿ ಯೋಗ ಪರಿವಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಯೋಗ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯೋಗ ಬಂಧುಗಳು ಒಗ್ಗೂಡಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಜೆ.ಎಸ್. ಗುರುಮೂರ್ತಿ ಅವರು, ಕೆಂಚವೀರಪ್ಪನವರ ಸರಳತೆ, ಸ್ನೇಹಪರತೆ ಹಾಗೂ ಸಮಾಜಕ್ಕೆ ಶ್ರಮಿಸುವ ಅರ್ಪಣಾ ಮನೋಭಾವವೇ ಅವರ ಈ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಂಚವೀರಪ್ಪನವರು, ನನಗೆ ಸಿಕ್ಕಿರುವ ಈ ಅಧಿಕಾರ, ಜಯ ಹಾಗೂ ಸನ್ಮಾನಗಳಿಗಿಂತಲೂ ಯೋಗ ಬಂಧುಗಳೊಂದಿಗೆ ನಾನು ಹೊಂದಿರುವ ಒಡನಾಟವೇ ಅತ್ಯಂತ ಅಮೂಲ್ಯವಾದುದು ಎಂದು ನುಡಿದರು. ಈ ಸಂದರ್ಭದಲ್ಲಿ ಶಶಿಕಿರಣ್, ಜಿ.ಎಮ್. ಲವಕುಮಾರ್, ಕಾಂತಣ್ಣ, ರಂಗನಾಯಕ್, ಹೇಮಣ್ಣ, ಯೋಗ ರಘು, ಶ್ರೀಕಾಂತ್, ಜಯಣ್ಣ, ಹರೀಶ್ ಹಾಗೂ ಮಹಿಳಾ ಮುಖಂಡರಾದ ಮಾಲಾ, ವಿಜಯಲಕ್ಷ್ಮೀ, ಲತಾ, ರತ್ನಮ್ಮ, ಸುಧಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.






















