ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಜನ್ಮಕೊಟ್ಟ ತಂದೆ ತಾಯಿ ಹಾಗೂ ಗುರು-ಹಿರಿಯರುಗಳಿಂದ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದೆಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿವೃತ್ತ ಜಂಟಿ ನಿರ್ದೇಶಕ ಎನ್.ಆರ್.ಮಾರ್ಕಂಡೇಯ ತಿಳಿಸಿದರು.

ಮಾರುತಿ ನಿವೃತ್ತ ನೌಕರರ ಸಂಘ ಹಾಗೂ ಗ್ರಾಮಸ್ಥರಿಂದ ಹೊಳಲ್ಕೆರೆ ತಾಲ್ಲೂಕು ಕೆಂಗುಂಟೆ ಗ್ರಾಮದ ಶಿವಾಂಜನೇಯ ರಂಗ ಮಂಟಪದಲ್ಲಿ ವಯೋ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುವ ಪೀಳಿಗೆಯನ್ನು ಸರಿಯಾದ ಮಾರ್ಗದರ್ಶನದಲ್ಲಿ ಕೊಂಡೊಯ್ಯುವ ಜವಾಬ್ದಾರಿ ಗುರುಗಳ ಮೇಲಿದೆ. ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ. ಶಿಕ್ಷಕರು, ಗುರು-ಹಿರಿಯರು, ಪೋಷಕರುಗಳ ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಬೇಕಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಲ್.ಬಿ.ರಾಜಪ್ಪ ಮಾತನಾಡಿ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿರುವವರು ಇಳಿಯ ವಯಸ್ಸಿನಲ್ಲಿ ಸಮಾನ ವಯಸ್ಕರ ಜೊತೆ ಕೆಲವು ಸಮಯ ಕಳೆದು ಕಷ್ಠ-ಸುಖಗಳನ್ನು ಹಂಚಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆಧುನಿಕ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಹಾಗಾಗಿ ಆರೋಗ್ಯದ ಕಡೆಗೂ ಕಾಳಜಿ ವಹಿಸುವಂತೆ ಮನವಿ ಮಾಡಿದರು.
ಮಾರುತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಸಿ.ಎನ್.ರಾಜು ಅಧ್ಯಕ್ಷತೆ ವಹಿಸಿದ್ದರು.
ನಿಕಟ ಪೂರ್ವ ಅಧ್ಯಕ್ಷ ಶತಾಯುಷಿ ಡಿ.ಹೆಚ್.ಪರಮೇಶ್ವರಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಲ್.ಕೆ.ಗಂಗಾಧರಪ್ಪ, ನಿವೃತ್ತ ಪ್ರಾಚಾರ್ಯರಾದ ಡಾ.ರವಿ ಎಸ್.ಪಿ. ಇವರುಗಳು ವೇದಿಕೆಯಲ್ಲಿದ್ದರು.
ಡಾ.ಶಿವಕುಮಾರ್ ಬಿ.ಲಕ್ಕೋಳ್, ಡಿ.ಪಿ.ನಾಗರಾಜ್, ಹಾಲೇಶಪ್ಪ ಜಿ.ಎಸ್, ಕೆ.ಎನ್.ಸೋಮಶೇಖರಪ್ಪ, ಬಿ.ಚಂದ್ರಪ್ಪ, ಕೆ.ಶಿವಲಿಂಗಪ್ಪ, ಎಸ್.ಸುಜ್ಞಾನಚಾರಿ,
ಎಲ್.ಎಸ್.ಚನ್ನಬಸಪ್ಪ, ಎ.ಕುಮಾರಪ್ಪ, ಜೆ.ಇ.ಚಂದ್ರಶೇಖರ್ ಇವರುಗಳನ್ನು ಸನ್ಮಾನಿಸಲಾಯಿತು.












