Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯ ರೈಲ್ವೆ ಇಲಾಖೆಯಲ್ಲಿ 590 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

---Advertisement---

ದೆಹಲಿ.ಸೆಪ್ಟೆಂಬರ್. 15: ಕೇಂದ್ರ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (RRB) ವಿವಿಧ ಪ್ಯಾರಾಮೆಡಿಕಲ್ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 590 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (CEN No. 05/2026) ಪ್ರಕಟಿಸಿದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ (Paramedical) ಅರ್ಹತೆ ಹೊಂದಿರುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ಹುದ್ದೆಗಳು ಮತ್ತು ವಿವರಗಳು

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 9 ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಹುದ್ದೆಗಳ ವಿವರ ಕೆಳಗಿನಂತಿದೆ:

ನರ್ಸಿಂಗ್ ಸೂಪರಿಂಟೆಂಡೆಂಟ್ (Nursing Superintendent): 365 ಹುದ್ದೆಗಳು (ವೇತನ: ₹44,900 – Level 7)

ಫಾರ್ಮಾಸಿಸ್ಟ್ (Pharmacist – Entry Grade): 118 ಹುದ್ದೆಗಳು (ವೇತನ: ₹29,200 – Level 5)

ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ Gr. II: 43 ಹುದ್ದೆಗಳು (ವೇತನ: ₹35,400 – Level 6)

ಲ್ಯಾಬ್ ಅಸಿಸ್ಟೆಂಟ್ Gr. II: 31 ಹುದ್ದೆಗಳು (ವೇತನ: ₹21,700 – Level 3)

ರೇಡಿಯೋಗ್ರಾಫರ್ / ಎಕ್ಸ್‌-ರೇ ಟೆಕ್ನಿಷಿಯನ್: 25 ಹುದ್ದೆಗಳು (ವೇತನ: ₹29,200 – Level 5)

ಇಸಿಜಿ ಟೆಕ್ನಿಷಿಯನ್ (ECG Technician): 04 ಹುದ್ದೆಗಳು

ಆಪ್ಟೋಮೆಟ್ರಿಸ್ಟ್ (Optometrist): 02 ಹುದ್ದೆಗಳು

ಡಯಾಲಿಸಿಸ್ ಟೆಕ್ನಿಷಿಯನ್: 01 ಹುದ್ದೆ

ಆಡಿಯಾಲಜಿಸ್ಟ್ & ಸ್ಪೀಚ್ ಥೆರಪಿಸ್ಟ್: 01 ಹುದ್ದೆ

ಶೈಕ್ಷಣಿಕ ಅರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ವಿಷಯದಲ್ಲಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ:

ನರ್ಸಿಂಗ್ ಸೂಪರಿಂಟೆಂಡೆಂಟ್: ಜಿಎನ್‌ಎಂ (GNM) ಕೋರ್ಸ್ ಅಥವಾ ಬಿ.ಎಸ್ಸಿ ನರ್ಸಿಂಗ್ (B.Sc Nursing).

ಫಾರ್ಮಾಸಿಸ್ಟ್: ಬಿ.ಫಾರ್ಮಾ (B.Pharma) ಅಥವಾ ಫಾರ್ಮ್.ಡಿ (Pharm.D).

ಲ್ಯಾಬ್ ಅಸಿಸ್ಟೆಂಟ್: ಪಿಯುಸಿ (ವಿಜ್ಞಾನ) ಜೊತೆಗೆ ಡಿಎಂಎಲ್‌ಟಿ (DMLT).

ಇತರೆ ಹುದ್ದೆಗಳಿಗೆ: ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೊಮಾ, ಪದವಿ ಅಥವಾ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ (01.01.2027 ಕ್ಕೆ ಅನ್ವಯಿಸುವಂತೆ)

ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವಯಸ್ಸು 18 ರಿಂದ 21 ವರ್ಷ ಹಾಗೂ ಗರಿಷ್ಠ ವಯಸ್ಸು 30 ರಿಂದ 40 ವರ್ಷಗಳವರೆಗೆ ಇರಲಿದೆ (ನರ್ಸಿಂಗ್ ಹುದ್ದೆಗೆ ಗರಿಷ್ಠ 40 ವರ್ಷ).

ನಿಯಮಾನುಸಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು EWS ವರ್ಗದ ಅಭ್ಯರ್ಥಿಗಳಿಗೆ: ₹500 (CBT ಪರೀಕ್ಷೆಗೆ ಹಾಜರಾದ ನಂತರ ₹400 ಮರುಪಾವತಿ ಮಾಡಲಾಗುತ್ತದೆ).

SC, ST, ಮಾಜಿ ಸೈನಿಕರು, ಅಂಗವಿಕಲರು, ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EBC): ₹250 (CBT ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ).

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT – 100 ಅಂಕಗಳು, 90 ನಿಮಿಷಗಳು)

(ಗಮನಿಸಿ: ಪ್ರತಿ ತಪ್ಪು ಉತ್ತರಕ್ಕೆ 1/3 ನೆಗೆಟಿವ್ ಅಂಕವಿರುತ್ತದೆ)

ದಾಖಲಾತಿ ಪರಿಶೀಲನೆ (Document Verification)

ವೈದ್ಯಕೀಯ ತಪಾಸಣೆ (Medical Examination)

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 15 ಸೆಪ್ಟೆಂಬರ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಅಕ್ಟೋಬರ್ 2026 (ರಾತ್ರಿ 11:59 ರವರೆಗೆ)

ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನ: 16 ಅಕ್ಟೋಬರ್ 2026

ಅರ್ಜಿ ತಿದ್ದುಪಡಿಗೆ ಕಾಲಾವಕಾಶ: 17 ಅಕ್ಟೋಬರ್ ರಿಂದ 26 ಅಕ್ಟೋಬರ್ 2026

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್‌ಸೈಟ್ ಆದ rrbapply.gov.in ಅಥವಾ rrb.indianrailways.gov.in ಗೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Join WhatsApp

Join Now

Join Telegram

Join Now