Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೋಗ ಮತ್ತು ಸಂಗೀತ ಎರಡೂ ಅತ್ಯುತ್ತಮ ಸಾಂಸ್ಕøತಿಕ ಮೌಲ್ಯಗಳು : ಆರ್.ಎಸ್.ಉಮೇಶ್

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್. 28 : ಭಾರತೀಯ ಸಂಸ್ಕೃತಿಯಲ್ಲಿ ಯೋಗ ಮತ್ತು ಸಂಗೀತ ಎರಡೂ ಅತ್ಯುತ್ತಮ ಸಾಂಸ್ಕøತಿಕ ಮೌಲ್ಯಗಳಾಗಿವೆ. ಆರೋಗ್ಯಪೂರ್ಣ ಸಂಸ್ಕಾರವನ್ನು ಕಲಿಸುತ್ತವೆ. ಯೋಗವು ಋಷಿ ಸಂಸ್ಕøತಿ ಗುರುಕುಲ ಪದ್ಧತಿಯ ಕೊಡುಗೆಯಾಗಿದೆ. ಸಿಂಧೂ ಬಯಲಿನ ನಾಗರೀಕತೆಯ ಮುದ್ರೆಯಲ್ಲಿರುವ ಪಶುಪತಿಯ ಪದ್ಮಾಸನ ಚಿತ್ರವು ಮೂಲ ಯೋಗದ ಕಾಲಘಟ್ಟವನ್ನು ಸೂಚಿಸುತ್ತದೆ. ಸಾಮವೇದವು ಗಾನರೂಪದ ಶ್ಲೋಕಗಳಿಂದ ಕೂಡಿದ ವೇದವಾಗಿದ್ದು ಸಂಗೀತವನ್ನು ಪ್ರತಿನಿಧಿಸುತ್ತದೆ ಎಂದು ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಆರ್.ಎಸ್.ಉಮೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಇಂಗಳದಾಳ್ ಗ್ರಾಮದ ತಳವಾರ ಸಂಚಲಪ್ಪ ಪ್ರೌಢಶಾಲೆ ಆವರಣದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕøತಿಕ ಸಂಸ್ಥೆ ಮಲ್ಲಾಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಕ್ರೀಡಾ ಭಾರತಿ ಹಾಗೂ ರಂಗಸೌರಭ ಕಲಾ ಸಂಘ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಅಂತರರಾಷ್ಟ್ರೀಯ ಸಂಗೀತ ದಿನಾಚರಣೆ ಅಂಗವಾಗಿ ಉಪನ್ಯಾಸ, ಯೋಗ ಪ್ರಾತ್ಯಕ್ಷಿಕೆ, ನಾಡಗೀತೆ, ರೈತಗೀತೆ ಹಾಗೂ ರಾಷ್ಟ್ರಗೀತೆ ತರಬೇತಿ ಕಾರ್ಯಕ್ರಮವನ್ನು ಕುರಿತು ಉಪನ್ಯಾಸ ನೀಡಿದರು.

 

ಧರ್ಮಯುಗದಿಂದ ಆಧುನಿಕ ಕಾಲದವರೆಗೆ ಯೋಗ, ಸಂಗೀತ ಬೆಳೆದುಬಂದಿದೆ. ರಾಜ ಮಹಾರಾಜರ ಆಳ್ವಿಕೆಯಿಂದ ಪೋಷಿಸಿಕೊಂಡು ಬಂದ ಸಾಂಸ್ಕøತಿಕ ಆಯಾಮಗಳು ಇಂದು ಸಾರ್ವಜನಿಕವಾಗಿ ಬಹುವಿಸ್ತ್ರುತ ಶ್ರೀಮಂತಿಕೆಯನ್ನು ಕಂಡುಕೊಂಡಿದೆ. ಯೋಗ ಮತ್ತು ಸಂಗೀತವು ದೈಹಿಕ ಸದೃಢತೆ, ಆಧ್ಯಾತ್ಮೀಕತೆ, ದೇಹ ಮತ್ತು ಮನಸ್ಸಿನ ಏಕತೆಯನ್ನು ಸಾಧಿಸಲು ಸಹಕಾರಿಯಾಗಿದೆ. ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಒತ್ತಡವನ್ನು ಕಡಿಮೆ ಮಾಡಲು, ಸ್ಮರಣೆ, ಕಲಿಕೆಯನ್ನು ಹೆಚ್ಚಿಸಲು ಯೋಗ ಮತ್ತು ಸಂಗೀತ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ತಳವಾರ ಸಂಚಲಪ್ಪ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಪಿ.ಆನಂದಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಶಿಕ್ಷಕರಾದ ಎಂ.ರಂಗನಾಥ, ಎಸ್.ಪಿ.ಮಂಜುನಾಥ, ಹೆಚ್,ಧನಂಜಯ, ಬಿ.ವಿ.ಪ್ರಿಯಾಂಕ, ಯೋಗಶಿಕ್ಷಕ ಎಂ.ಆರ್. ಮಂಜುನಾಥ, ಶಿವಮೊಗ್ಗ ವಿಭಾಗ ಕ್ರೀಡಾಭಾರತಿ ಸಹ ಸಂಯೋಜಕ ಎಸ್.ಶಂಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

 

ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಹಾಗೂ ಯೋಗಶಿಕ್ಷಕ ಎಂ.ಬಿ.ಮುರುಳಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗಧಿಪಡಿಸಿದ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ, ರೈತಗೀತೆ ಮತ್ತು ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರ್ ವಿರಚಿತ ರಾಷ್ಟ್ರಗೀತೆಯನ್ನು ಯೋಗ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಆದಪ್ಪಸ್ವಾಮಿ ಪ್ರಾರ್ಥಿಸಿದರು. ಸಹಶಿಕ್ಷಕ ಆರ್.ರುದ್ರಸ್ವಾಮಿ ಸ್ವಾಗತಿಸಿದರು. ಕನ್ನಡ ಶಿಕ್ಷಕ ಜಿ.ವಿ.ತೇಜಸ್ವಿ ಪ್ರಾಸ್ತಾವಿಕವಾಗಿ ನುಡಿದರು. ಸಹಶಿಕ್ಷಕ ಧನಂಜಯ ವಂದಿಸಿದರು. ವಿದ್ಯಾರ್ಥಿನಿ ಎಂ.ದ್ಯಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment