ಬೆಂಗಳೂರು.ಸೆಪ್ಟೆಂಬರ್.10: ಚಿತ್ರದುರ್ಗ, ತುಮಕೂರು, ವಿಜಯಪುರ ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿಕೃತ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯ ಮೇರೆಗೆ ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಪಟ್ಟಿ:
ಬಾಗಲಕೋಟೆ: ದಯಾನಂದ್ ಎಸ್. ಪಾಟೀಲ್
ಬೆಂಗಳೂರು ಉತ್ತರ: ಅಬ್ದುಲ್ ವಾಜಿದ್
ಬೆಂಗಳೂರು ದಕ್ಷಿಣ: ಒ. ಮಂಜುನಾಥ್
ಬೆಂಗಳೂರು ಪೂರ್ವ: ಡಿ.ಕೆ. ಮೋಹನ್ ಬಾಬು
ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ
ಬೆಂಗಳೂರು ಸೆಂಟ್ರಲ್: ಜೆ. ಶರವಣನ್
ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನ ಕುಮಾರ್
ಚಿಕ್ಕೋಡಿ: ಲಕ್ಷ್ಮಣ್ರಾವ್ ಚಿಂಗಳೆ

ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ)
ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೇಗಾವಿ
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್
ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ್
ಬೀದರ್: ಅಬ್ದುಲ್ ಮನ್ನಾನ್ ಸೇಠ್
ಚಾಮರಾಜನಗರ: ಜೆ. ಯೋಗೇಶ್

ಚಿಕ್ಕಮಗಳೂರು: ಹೆಚ್.ಪಿ. ಮಂಜೇಗೌಡ
ದಕ್ಷಿಣ ಕನ್ನಡ: ಪದ್ಮರಾಜ್ ಆರ್. ಪೂಜಾರಿ
ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ
ಧಾರವಾಡ ಗ್ರಾಮಾಂತರ: ಚಂದ್ರಶೇಖರ್ ಜುಟ್ಟಲ್
ಗದಗ: ವಾಸಣ್ಣ ಕುರ್ಡಗಿ
ಕಲಬುರಗಿ: ಡಾ. ಕಿರಣ್ ಎ. ದೇಶಮುಖ್
ಹಾಸನ: ಶಶಿಧರ್ ಜಿ. ಬಿ.
ಹಾವೇರಿ: ಸಂಜೀವ್ ಕುಮಾರ್ ನೀರಲಗಿ
ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ್ ವಿ. ಡಂಗನವರ್
ಕೊಡಗು: ಧರ್ಮಜ ಉತ್ತಪ್ಪ
ಕೋಲಾರ: ಎನ್. ನಾರಾಯಣಸ್ವಾಮಿ
ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ

ಮಂಡ್ಯ: ಕುಮಾರ್ ಕೊಪ್ಪ
ಮೈಸೂರು ನಗರ: ಆರ್. ಮೂರ್ತಿ
ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ

ರಾಯಚೂರು: ಕೆ. ಶಾಂತಪ್ಪ
ರಾಮನಗರ: ಸಿ.ಎನ್. ವೆಂಕಟೇಶ್
ಶಿವಮೊಗ್ಗ: ಹೆಚ್.ಸಿ. ಯೋಗೇಶ್
ಉಡುಪಿ: ಕಿಶನ್ ಕುಮಾರ್ ಹೆಗ್ಡೆ
ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ್
ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್




















