ಬೆಂಗಳೂರು: ಏಪ್ರಿಲ್ ಬಂತು ಅಂದ್ರೆ ಒಂದಷ್ಟು ವಸ್ತುಗಳು ದುಬಾರಿಯಾಗಲಿದೆ. ಹೊಸ ಹಣಕಾಸು ನೀತಿಯೂ ಜಾರಿಯಾಗಲಿದೆ. ಹೀಗಾಗಿ ಇರುವ ಹೆಚ್ಚಿನ ದರ ಏರಿಕೆಯ ಬಿಸಿ ಹೊರಲು ಮತ್ತಷ್ಟು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಹಾಗಾದ್ರೆ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಮೊದಲನೆಯದಾಗಿ ಟೋಲ್ ನಲ್ಲಿ ಇನ್ಮೇಲೆ ನಗದು ವ್ಯವಹಾರ ಇರುವುದಿಲ್ಲ. ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದ್ದಾರೆ. ಯುಪಿಐ ಅಥವಾ ಕಾರ್ಡ್ ಮಾತ್ರ ಬಳಕೆ ಮಾಡಲಾಗುತ್ತದೆ. ಹಾಗೇ ಟೋಲ್ ಗಳಲ್ಲಿ 3-5 ರಷ್ಟು ದರ ಏರಿಕೆ ಮಾಡಲಾಗುತ್ತದೆ. ಕಾರುಗಳಿಗೆ 5-10 ರೂಪಾಯಿ ಟೋಲ್ ದರವನ್ನ ಹೆಚ್ಚಳ ಮಾಡಿದ್ದಾರೆ. ವಾಣಿಜ್ಯ ವಾಹನಗಳಿಗೆ 15-40 ರೂಪಾಯಿ ಹೆಚ್ಳ. ವಾರ್ಷಕ ಪಾಸ್ ದರ 3,070 ರೂಪಾಯಿ ದರ ಏರಿಕೆಯನ್ನ ಮಾಡಲಾಗಿದೆ. ಯುದ್ಧದ ಪರಿಣಾಮದಿಂದ ಗ್ಯಾಸ್ ಸಿಕ್ತಿಲ್ಲ ಅಂತ ಆಟೋ ಚಾಲಕರು ಪರದಾಡ್ತಾ ಇದ್ದಾರೆ. ಒಂದೊಂದೆ ಪೆಟ್ರೋಲ್ ಬಂಕ್ ನಲ್ಲಿ ದರ ಏರಿಕೆ ಮಾಡ್ತಾ ಇದ್ದಾರೆ. ಈ ಎಲ್ಲದರ ನಡುವೆ ಈಗ ಟೋಲ್ ದರವನ್ನು ಏರಿಕೆ ಮಾಡಿ, ಜನ ಸಾಮಾನ್ಯರ ಬದುಕನ್ನ ದುಬಾರಿ ಬದುಕಾಗಿಸ್ತಾ ಇದ್ದಾರೆ.
ಅಷ್ಟೇ ಅಲ್ಲ ಬೆಂಗಳೂರಿಗರಿಗೆ ನೀರಿನ ದರವೂ ಏರಿಕೆಯಾಗಿದೆ. ಜೊತೆಗೆ ವಿದ್ಯುತ್ ದರವನ್ನು ಏರಿಕೆ ಮಾಡುವ ಎಲ್ಲಾ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಶೇಕಡ 3 ರಷ್ಟು ನೀರಿನ ದರವನ್ನು ಏರಿಕೆ ಮಾಡಿದ್ರೆ, ವಿದ್ಯುತ್ ದರವನ್ನು ಎರಡು ಹಂತದಲ್ಲಿ ಏರಿಕೆ ಮಾಡ್ತಾರೆ. ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಾ ಇದ್ದು, ಅದು ಮುಗಿದ ಮೇಲೆ ಗೃಹಬಳಕೆಯ ವಿದ್ಯುತ್ ಕೂಡ ಏರಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
























