ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ. ಎಂ.
ಭೀಮಸಮುದ್ರ, ಚಿತ್ರದುರ್ಗ (ತಾ)
ಮೊ : 8088076203
ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ತಾಲೂಕಿನ ಹುಲ್ಲೂರು ಗ್ರಾಮದ ಶ್ರೀ ಕಾಳಿಕಾಂಬ ದೇವಿಯ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣ ಹಾಗೂ ಮಳೆರಾಯನ ಅನುಗ್ರಹಕ್ಕಾಗಿ ಜುಲೈ 13ರ ಸೋಮವಾರದಂದು ವಿಶೇಷ ಯಾಗವನ್ನು ಹಮ್ಮಿಕೊಳ್ಳಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮವು ಅಂದು ಬೆಳಿಗ್ಗೆ 7:20 ರಿಂದಲೇ ವಿಧ್ಯುಕ್ತವಾಗಿ ಚಾಲನೆ ಪಡೆಯಲಿದೆ. ಬೆಳಿಗ್ಗೆ 11:00 ಗಂಟೆಗೆ ಅಂಕಲೇರಿ ಬೆಟ್ಟದ ಮೇಲೆ ಪವಿತ್ರ ಗಂಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ತದನಂತರ ಬೆಳಿಗ್ಗೆ 11:30 ಕ್ಕೆ ಹುಲ್ಲೂರು ಕೆರೆಯಲ್ಲಿರುವ ನಾಗರಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಭವ್ಯ ಶೋಭಾಯಾತ್ರೆ ಹಾಗೂ ಯಾಗದ ಮುಖ್ಯ ವಿಧಿವಿಧಾನಗಳು ಪ್ರಾರಂಭವಾಗಲಿವೆ. ಮಧ್ಯಾಹ್ನ 1:00 ಗಂಟೆಯಿಂದ ಆಗಮಿಸುವ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಅಂದ್ರಳ್ಳಿಯ ಜೋಡಿ ಮುನೇಶ್ವರ ಸ್ವಾಮಿ ಕ್ಷೇತ್ರದ ಶ್ರೀ ಶ್ರೀ ಶಿವಶಂಕರ ಗುರೂಜಿ ಅವರ ದಿವ್ಯ ನೇತೃತ್ವದಲ್ಲಿ ಈ ಸಮಸ್ತ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಕಮಿಟಿ ಕೋರಿದೆ.








