ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಮೊಮ್ಮಗ ಸಮರ್ಥ್ ಪರ ಪ್ರಚಾರ ನಡೆಸಲು ಡಿಸಿಎಂ ಡಿಕೆ ಶಿವಕುಮಾರ್ ದಾವಣಗೆರೆಗೆ ಬಂದಿದ್ದಾರೆ. ತಾತನಂತೆ ಮೊಮ್ಮಗ ಕೂಡ ಒಳ್ಳೆ ಲೀಡ್ ನಲ್ಲಿ ಗೆಲ್ತಾರೆ ಎಂಬ ಮಾತನ್ನೇ ನಾಯಕರು ಹೇಳ್ತಿದ್ದಾರೆ. ಆದರೆ ಇಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಮುಸಲ್ಮಾನರು ಬಂಡಾಯವೆದ್ದಿದ್ದಾರೆ. ಜಮೀರ್ ಅಹ್ಮದ್ ಬಂದು ಇಲ್ಲಿ ಬಂಡಾಯ ಶಮನ ಮಾಡ್ತಾರಾ ಎಂಬ ಪ್ರಶ್ನೆಯೂ ಎಲ್ಲರನ್ನು ಕಾಡುತ್ತಿದೆ. ಆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಅವರಿಗೆ ನಾವೂ ಕೇರಳದಲ್ಲಿ ಒಂದು ದೊಡ್ಡ ಜವಬ್ದಾರಿಯನ್ನ ಕೊಟ್ಟಿದ್ದೇವೆ. ಅವರು ನಮ್ಮ ಸ್ಟಾರ್ ಪ್ರಚಾರಕರಿದ್ದಾರೆ. ಅದನ್ನ ಮುಗಿಸಿಕೊಂಡು. ವಹಿಸಿದ ಕೆಲಸ ಮಾಡೋದಕ್ಕೆ ಹೇಳಿದ್ದೇವೆ. ಮೈನಾರಿಟಿ ಲೀಡರ್ಸ್ ಎಲ್ಲಾ ಇಲ್ಲೇ ಇದ್ದಾರೆ. ಅವರಿಗೆಲ್ಲಾ ಜವಬ್ದಾರಿಯನ್ನ ವಹಿಸಿದ್ದೇವೆ. ಎಲ್ಲರೂ ಕೆಲಸ ಮಾಡ್ತಾ ಇದ್ದಾರೆ.
ಒಬ್ಬ ವ್ಯಕ್ತಿ ಮೇಲೆ ಪಕ್ಷ ನಡೆಯಲ್ಲ. ಡಿಕೆ ಶಿವಕುಮಾರ್ ಮೇಲೂ ನಡೆಯ್ಳ, ಸಿಎಂ ಸಿದ್ದರಾಮಯ್ಯ ಅವರ ಮೇಲೂ ನಡೆಯಲ್ಲ, ಜಮೀರ್ ಮೇಲೂ ನಡೆಯಲ್ಲ. ಪಕ್ಷದ ಸಿದ್ಧಾಂತಗಳ ಮೇಲೆ ನಮ್ಮ ಕಾರ್ಯಕ್ರಮ ನಡೆಯುತ್ತೆ. ಅವರಿಗೆ ನಾವೂ ಕೊಟ್ಟ ಕೊಡುಗೆ ಕಡಿಮೆ ಏನು ಅಲ್ಲ. ಬಿಜೆಪಿಯವರ ಬಳಿ ಇದೊಂದು ಮುಸಲ್ಮಾನರ ಪಕ್ಷ ಅಂತ ಬೈಸ್ಕೊಂಡು. ತೆಗೆಳಿಸಿಕೊಳ್ತಾ ಇದ್ದೇವೆ. ಆದರೆ ಅವರನ್ನು ರಕ್ಷಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ಆ ದೃಷ್ಟಿಯಿಂದಾನೂ ಇಂದು ಮೂರು ಬಾರಿ ಜಬ್ಬಾರ್ ಅವರಿಗೆ ಎಂಎಲ್ಸಿ ಸ್ಥಾನ ಕೊಟ್ಟಿಕೊಂಡು ಬಂದಿದ್ದೇವೆ. ನಾವೇ ಅವರಿಗೆ ಹೆಚ್ಚಿನದ್ದನ್ನು ನೀಡಿದ್ದೇವೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















