Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಂಧ್ರದಲ್ಲಿ ಗೆಲ್ಲೋದ್ಯಾರು ? ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಿಜವಾದ ಸಮೀಕ್ಷೆ, ಅಲ್ಲೂ ನಿಜವಾಗುತ್ತಾ ?

Facebook
Twitter
Telegram
WhatsApp

ಸುದ್ದಿಒನ್  : ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ? ಆಂಧ್ರದ ಭವಿಷ್ಯದ ಸಿಎಂ ಯಾರು? 

ಜಗನ್ ಮತ್ತೆ ಅಧಿಕಾರಕ್ಕೆ ಬರುತ್ತಾರಾ? ಅಥವಾ ಚಂದ್ರಬಾಬು ಮೈತ್ರಿಕೂಟ ಗೆದ್ದು ಸಿಎಂ ಪಟ್ಟಕ್ಕೇರುತ್ತಾರಾ..? ಪ್ರಸ್ತುತ ಈ ವಿಷಯ ಇದೀಗ ಬಾರೀ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಬಿಜೆಪಿ, ಜನಸೇನಾ ಜೊತೆಗೆ ಟಿಡಿಪಿ ಅಖಾಡಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಇದರಿಂದ ಇಡೀ ದೇಶವೇ ಚುನಾವಣಾ ಸಂದರ್ಭದಲ್ಲಿ ಎಪಿ ರಾಜಕೀಯವನ್ನು ಕುತೂಹಲದಿಂದ ನೋಡುತ್ತಿದೆ.

ಕೇಂದ್ರದಲ್ಲಿ ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಮೋದಿ ಮೂರನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವ ಸಾಧ್ಯತೆ ಹೆಚ್ಚಿದೆ.‌
ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟ ಗೆಲ್ಲುವ ವಿಶ್ವಾಸದಲ್ಲಿದೆ. ವೈಎಸ್‌ಆರ್‌ಸಿಪಿ ಆಡಳಿತದ ಬಗ್ಗೆ ಜನರು ತೀವ್ರ ಅತೃಪ್ತರಾಗಿದ್ದಾರೆ ಎಂದು ಮೈತ್ರಿಕೂಟ ಭಾವಿಸಿದೆ.  ಯೋಜನೆಗಳು ತಮ್ಮನ್ನು ಗೆಲ್ಲಿಸುತ್ತವೆ ಎಂಬ ವಿಶ್ವಾಸ ಮುಖ್ಯಮಂತ್ರಿ ಜಗನ್ ಪಕ್ಷಕ್ಕಿದೆ.

ಈ ಹಿನ್ನೆಲೆಯಲ್ಲಿ ಹಲವು ಸಮೀಕ್ಷಾ ಸಂಸ್ಥೆಗಳು ಆಂದ್ರಪ್ರದೇಶದ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿವೆ. ಜನ್ಮಥ್ ಪೋಲ್ಸ್ ಎಂಬ ಸಂಸ್ಥೆಯು ಎಪಿಯಲ್ಲಿ ಪ್ರಸ್ತುತ ಗ್ರೌಂಡ್ ರಿಪೋರ್ಟ್ ಈ ಕೆಳಗಿನಂತಿದೆ ಎಂದು ಟ್ವೀಟ್ ಮಾಡಿದೆ. ಜನ್ಮಥ್ ಬಹಿರಂಗಪಡಿಸಿದ ವಿವರಗಳ ಪ್ರಕಾರ, ವೈಎಸ್‌ಆರ್‌ಸಿಪಿ ಮತ್ತೊಮ್ಮೆ ಎಪಿಯಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

ವೈಎಸ್‌ಆರ್‌ಸಿಪಿ 120-123 ಸ್ಥಾನಗಳನ್ನು ಮತ್ತು
ಟಿಡಿಪಿ ಮೈತ್ರಿಕೂಟ 46-48 ಸ್ಥಾನಗಳನ್ನು ಪಡೆಯಲಿದೆ ಎಂದು ಜನ್ಮತ ಭವಿಷ್ಯ ನುಡಿದಿದೆ.

ಫೆಬ್ರವರಿ 4 ರಂದು ಇದೇ ಸಂಸ್ಥೆ ಬಿಡುಗಡೆ ಮಾಡಿದ ಪ್ರಿಪೋಲ್ ಸಮೀಕ್ಷೆಯಲ್ಲಿ, YSRCP 107-110 ಸ್ಥಾನಗಳನ್ನು ಮತ್ತು ಟಿಡಿಪಿ-ಜನಸೇನಾ ಮೈತ್ರಿಕೂಟ 57-59 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಅಂದರೆ ಟಿಡಿಪಿ ಮತ್ತು ಜನಸೇನಾ ಜೊತೆ ಬಿಜೆಪಿ ಸೇರಿದ್ದರಿಂದ ಮೈತ್ರಿಕೂಟದ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ.

ಈ ಹಿಂದೆ ಲೋಕಮತ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗಪಡಿಸಿದೆ. ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಲೋಕಮತದ ಭವಿಷ್ಯ ನಿಜವಾಗಿದೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಲೋಕ ಮತ ಭವಿಷ್ಯ ನುಡಿದಿತ್ತು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಲೋಕಮತ ಸಮೀಕ್ಷೆಯ ನಿರೀಕ್ಷೆಗೂ ಮೀರಿ ಸ್ಥಾನ ಗಳಿಸಿದೆ.

ಮೇ 8, 2023 ರಂದು ಕರ್ನಾಟಕದಲ್ಲಿ ಕಾಂಗ್ರೆಸ್ 116-118, ಬಿಜೆಪಿ 79-81, ಜೆಡಿಎಸ್ 20-22 ಮತ್ತು ಇತರರು 4-6 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಲೋಕಮತ ಭವಿಷ್ಯ ನುಡಿದಿತ್ತು. ಮೇ 13ರಂದು ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 135, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳನ್ನು ಪಡೆದಿತ್ತು. ಇತರರು 4 ಸ್ಥಾನಗಳನ್ನು ಪಡೆದಿದ್ದರು.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 58-60 ಸ್ಥಾನಗಳನ್ನು ಪಡೆಯಲಿದೆ, BRS 49-51 ಸ್ಥಾನಗಳಿಗೆ ಸೀಮಿತವಾಗಲಿದೆ, ಬಿಜೆಪಿ 4-5 ಸ್ಥಾನಗಳನ್ನು ಪಡೆಯಲಿದೆ, MIM 6-7 ಸ್ಥಾನಗಳನ್ನು ತೆಲಂಗಾಣ ಚುನಾವಣೆಯಲ್ಲಿ ಪಡೆಯಲಿದೆ ಎಂದು 2023ರ ನವೆಂಬರ್ 29 ರಂದು ಜನಮಥ ಸಮೀಕ್ಷೆಗಳು ಭವಿಷ್ಯ ನುಡಿದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 64 ಸ್ಥಾನಗಳು, ಬಿಆರ್‌ಎಸ್‌ಗೆ 39 ಸ್ಥಾನಗಳು ಲಭಿಸಿದ್ದವು. ಬಿಜೆಪಿ 8 ಮತ್ತು ಎಂಐಎಂ 7 ಸ್ಥಾನಗಳನ್ನು ಗೆದ್ದಿದ್ದವು.

ಅದರಂತೆಯೇ ಇದೀಗ ಆಂದ್ರಪ್ರದೇಶದ ವಿಧಾನಸಭೆ ಚುನಾವಣೆಗೆ 45 ದಿನಗಳಿಗಿಂತ ಹೆಚ್ಚು ಸಮಯವಿದೆ. ಈ ಮಧ್ಯೆ, ಸಮೀಕ್ಷಾ ಸಂಸ್ಥೆಗಳು ಹೆಚ್ಚಿನ ಪ್ರಿಪೋಲ್‌ಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಮತ್ತು ಈ ಪ್ರಿಪೋಲ್‌ಗಳು ನಿಜವಾಗುತ್ತಾ..? ಅಥವಾ ಜನ ಗೊಂದಲಕ್ಕೀಡಾಗಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ತೀರ್ಪು ನೀಡುತ್ತಾರಾ..? ಎಂಬುದನ್ನು ತಿಳಿಯಲು ಜೂನ್ 4 ರಂದು ಬಿಡುಗಡೆಯಾಗಲಿರುವ ಫಲಿತಾಂಶದವರೆಗೂ ಕಾಯಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಹಣ ಬಿಡುಗಡೆ : ಕೇಳಿದ್ದು ಎಷ್ಟು ಕೋಟಿ, ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ..?

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ಹಣ ಬಿಡುಗಡೆ

ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆ : ಗೋವಿಂದ ಕಾರಜೋಳ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.

error: Content is protected !!