Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾರಾಗ್ತಾರೆ ಸಚಿವರು ? ಸಂಪುಟ ವಿಸ್ತರಣೆ ಬಗ್ಗೆ ಚಿತ್ರದುರ್ಗದಲ್ಲಿ ಉಭಯ ಶಾಸಕರ ಮಹತ್ವದ ಹೇಳಿಕೆ…!

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ಜಿಲ್ಲೆಯ ಇಬ್ಬರಿಗೂ ಸಚಿವ ಸ್ಥಾನ ನೀಡಿ ಅಥವಾ ಜಿಲ್ಲೆಯ ಯಾರಿಗೆ ಕೊಟ್ಟರು ಸಂತೋಷವೇ ಬೇರೆಯವರಿಗೆ ಕೊಟ್ಟರು ಸಂತೋಷವೇ. ಪಕ್ಷ ಏನೇ ತೀರ್ಮಾನ ಕೈಗೊಂಡರು ಅದಕ್ಕೆ ಬದ್ಧ.

ಸಂಪುಟ ವಿಸ್ತರಣೆ ಹಾಗೂ ಸಚಿವರ ಆಯ್ಕೆ ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್‌ನ ತೀರ್ಮಾನ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ. ಸಚಿವ ಸ್ಥಾನಕ್ಕಿಂತ ಜಿಲ್ಲೆಯ ಅಭಿವೃದ್ಧಿಯೇ ನಮಗೆ ಮೊದಲ ಆದ್ಯತೆ” ಎಂದು
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 25ರಂದು ನಗರದ ಅನುಭವ ಮಂಟಪದಲ್ಲಿ ನಡೆಯಲಿರುವ ಬೆಂಗಳೂರು ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಗುರುವಾರ ನಗರದ ಅನುಭವ ಮಂಟಪಕ್ಕೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮತ್ತು ಹೊಸದುರ್ಗ ಶಾಸಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ಭೇಟಿ ನೀಡಿ ಸಭೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ರಘುಮೂರ್ತಿ ಅವರು ಮಾತನಾಡಿ, ಜಿಲ್ಲೆಯ ಹಿರಿಯ ಶಾಸಕರಾದ ಗೋವಿಂದಣ್ಣನವರೂ ಇದ್ದಾರೆ, ನಾವೂ ಇದ್ದೇವೆ. ಇನ್ನೂ ಬೇರೆಬೇರೆ ಶಾಸಕರು ಇದ್ದಾರೆ. ಮಾಧ್ಯಮಗಳ ಮಾಹಿತಿ ಪ್ರಕಾರ ನಮಗೂ ಭರವಸೆ ಇದೆ. ಆದರೆ ಪಟ್ಟಿ ಪ್ರಕಟವಾದ ನಂತರವಷ್ಟೇ ತಿಳಿಯಲಿದೆ. ಇಬ್ಬರಿಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ಇಬ್ಬರಿಗೂ ಸಚಿವ ಸ್ಥಾನ ನೀಡಿ ಎಂದು ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ನಮಗೆ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೆವು. ಪ್ರಾದೇಶಿಕವಾರು ಜಾತಿವಾರು ವ್ಯವಸ್ಥೆಯಲ್ಲಿ ನಮಗೆ ಇಬ್ಬರಿಗೂ ಅಚಿವ ಸ್ಥಾನ ನೀಡಿ ಎಂದು ಜಂಟಿಯಾಗಿ ಕೇಳಿದ್ದೆವು. ಪ್ರಾದೇಶಿಕವಾರು, ಜಾತಿವಾರು, ಜನಾಂಗವಾರು ಲೆಕ್ಕಚಾರದಲ್ಲಿ ಇಬ್ಬರಿಗೂ ನೀಡಿ ಎಂದು ಕೇಳಿದ್ದೇವೆ ಯಾರಿಗೆ ಕೊಟ್ಟರು ಸಂತೋಷವೇ ಬೇರೆಯವರಿಗೆ ಕೊಟ್ಟರು ಸಂತೋಷವೇ ಪಕ್ಷ ಏನೇ ತೀರ್ಮಾನ ಕೈಗೊಂಡರು ಅದಕ್ಕೆ ಬದ್ಧ ಎಂದು ಶಾಸಕ ರಘುಮೂರ್ತಿ ಅವರು ತಿಳಿಸಿದರು.

ನಂತರ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪನವರು ಮಾತನಾಡಿ, ಪಕ್ಷದ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ದ. ಈ ಜಿಲ್ಲೆಯಲ್ಲಿ ರಘುಮೂರ್ತಿ ಮತ್ತು ನಮ್ಮ ಹೆಸರು ನೂತನ ಸಚಿವರ ಪಟ್ಟಿಯಲ್ಲಿ ಹೆಸರುಗಳಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ಅಥವಾ ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಯಾವುದೇ ಲೆಕ್ಕಾಚಾರ ನಡೆದರೂ ಇಬ್ಬರೂ ಫಿಟ್ ಇದ್ದೇವೆ. ಅವರಿಗೆ ಕೊಟ್ಟರೆ ನಾನಾದಂತೆ, ನನಗೆ ಕೊಟ್ಟರೆ ಅವರಾದಂತೆ. ಇಬ್ಬರಲ್ಲಿ ಯಾವುದೇ ಬೇಧವಿಲ್ಲ. ಯಾರಿಗೆ ಕೊಡುತ್ತಾರೆಂಬುದು ಗೊತ್ತಿಲ್ಲ. ಇನ್ನೆರಡು ದಿನ ಕಾದು ನೋಡಬೇಕು. ಇಬ್ಬರಲ್ಲಿ ಒಬ್ಬರಿಗೆ ಕೊಟ್ಟರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರಿಗೆ ಕೊಟ್ಟರೆ ನಾನಾದಂತೆ, ನನಗೆ ಕೊಟ್ಟರೆ ಅವರಾದಂತೆ ಎಂದು ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now