Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಧಿಕಾ ಕುಮಾರಸ್ವಾಮಿ ಜೊತೆಗಿನ 2 ಕೋಟಿ ವ್ಯವಹಾರಕ್ಕೆ ಜಮೀರ್ ಏನಂದ್ರು..?

---Advertisement---

 

ಬೆಂಗಳೂರು: ಇತ್ತೀಚೆಗಷ್ಟೇ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆ ವೇಳೆ ರಾಧಿಕಾ ಕುಮಾರಸ್ವಾಮಿ ಅವರು ಜಮೀರ್ ಜೊತೆಗೆ ನಡೆಸಿದ ಹಣದ ವ್ಯವಹಾರದ ಬಗ್ಗೆ ಒಪ್ಪಿಕೊಂಡಿದ್ದಾರೆ. ಲಕ್ಕಿ ಸಿನಿಮಾದಲ್ಲಿ ಬಂದಂತ ಲಾಭದಿಂದ ಎರಡು ಕೋಟಿಯನ್ನ ಜಮೀರ್ ಅಹ್ಮದ್ ಅವರಿಗೆ ಸಾಲವಾಗಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದೀಗ ಆ ಪ್ರಶ್ನೆಗೆ ಸಚಿವ ಜಮೀರ್ ಅಹ್ಮದ್ ಉತ್ತರಿಸಿದ್ದಾರೆ.

ಮನೆ ತೆಗೆದುಕೊಳ್ಳುವಾಗ ರಾಧಿಕಾ ಕುಮಾರಸ್ವಾಮಿ ಅವರು ಎರಡು ಕೋಟಿ ಹಣವನ್ನ ನೀಡಿದ್ದಾರೆ. ಇನ್ ಕಂ ಟ್ಯಾಕ್ಸ್ ನಲ್ಲಿ ನಾನು ತೋರಿಸಿದ್ದೀನಿ, ಅವರು ತೋರಿಸಿದ್ದಾರೆ. ನಮ್ಮ ಮನೆ ಮೇಲೆ ಇಡಿ ರೇಡ್ ಆಗಿತ್ತು. ಆ ಕೇಸನ್ನ ಎಸಿಪಿಗೆ ನೀಡಲಾಗಿತ್ತು. ಎಸಿಪಿ ಆದ್ಮೇಲೆ ಲೋಕಾಯುಕ್ತಕ್ಕೆ ರೆಫರ್ ಮಾಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸ್ಟೇಟ್ಮೆಂಟ್ ತೆಗೆದುಕೊಳ್ಳಬೇಕಿತ್ತು ತೆಗೆದುಕೊಂಡಿದ್ದಾರೆ. ಕೊಟ್ಟಿದ್ದೀನಿ ಅಂತ ಅವರು ಹೇಳಿದ್ದಾರೆ, ನಾನು ಹೇಳಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಕೆಜಿಎಫ್ ಬಾಬು ಕೂಡ ಜಮೀರ್ ಅಹ್ಮದ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಕೆಜಿಎಫ್ ಬಾಬು, 2013ರಲ್ಲಿ ಜಮೀರ್ ಸಾಹೇಬ್ರು ಒಂದು ಮನೆ ತಗೊಂಡ್ರು. ಶಿವಾಜಿನಗರದ ಬಂಬೂನಗರದಲ್ಲಿ. ಅಸ್ಲಾಂ ಪಾಷಾ ಎಂಬುವವರಿಂದ ತೆಗೆದುಕೊಂಡಿದ್ದರು. ಅದಕ್ಕೆ ದುಡ್ಡು ಕಟ್ಟಿಲ್ಲ ಅಂತ ಫೈನಲ್ ನೋಟೀಸ್ ಬಂದಿಲ್ಲ. ಎರಡು ತಿಂಗಳು ಸಮಯ ನೀಡಿದ್ದರು. ಆಗ ಜಮೀರ್ ನನ್ನ ಕರೆದಿದ್ದರು. ಮರ್ಯಾದೆ ಹೋಗ್ತಿದೆ, ಮೂರುವರೆ ಕೋಟಿ ಹಣ ಬೇಕು ಅಂತ ಕೇಳಿದ್ರು. ಆರು ತಿಂಗಳಲ್ಲಿಯೇ ಕೊಡ್ತೀನಿ ಅಂದಿದ್ರು‌. ಸರಿ ಅಂತ ಬ್ಯಾಂಕ್ ಗೆ ಹೋಗಿ ನೇರವಾಗಿ ಕಟ್ಟಿ ಬಂದ್ವಿ. ಆದ್ರೆ ಇಲ್ಲಿಯವರೆಗೂ ಹಣ ಕೊಟ್ಟಿಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...