ಬೆಂಗಳೂರು: ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಬಸ್ ದುರಂತದಕ್ಕೆ 9 ಜನ ಸಜೀವ ದಹನವಾಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಯಾಣಿಜರ ಸಜೀವ ದಹನ ದುಃಖ ತಂದಿದೆ. ಮೃತರ ಕುಟುಂಬಸ್ಥರ ಜೊತೆಗೆ ಸರ್ಕಾರದ ಇದೆ ಎಂದು ಡಿಕೆ ಶಿವಕುಮಾರ್ ಸಾಂತ್ವಾನ ತಿಳಿಸಿದ್ದಾರೆ.
ಈ ರೀತಿಯ ದುರಂತಗಳು ಆಗಬಾರದಿತ್ತು. ಕುಟುಂಬಸ್ಥರಿಗೆ ಸರ್ಕಾರ ದುಃಖವನ್ನ ವ್ಯಕ್ತಪಡಿಸ್ತಾ ಇದೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ. ಏನಾಗಿದೆ ಎಂಬ ವರದಿಯನ್ನ ಅಧಿಕಾರಿಗಳು ಕಲೆ ಹಾಕಿದ್ದಾರೆ ಎಂದಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಪರಿಹಾರ ಘೋಷಣೆ ಮಾಡಿದ್ದು, ಸಾಂತ್ವಾನವನ್ನು ವ್ಯಕ್ತೊಡಿಸಿದ್ದಾರೆ. ಪ್ರಯಾಣಿಕರ ಸಜೀವ ದಹನ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ ಮಸ್ ರಜೆಗೆ ಊರಿಗೆ ಹೋಗುತ್ತಿದ್ದವರ ದುರಂತ ಅಂತ್ಯ ನಿಜಕ್ಕೂ ವಿಷಾದನೀಯ ಎಂದಿದ್ದಾರೆ. ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50,000 ಪರಿಹಾರ ನೀಡಲಾಗುವುದು.
ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕ್ರಿಸ್ ಮಸ್ ರಜೆಯನ್ನ ಎಂಜಾಯ್ ಮಾಡೋಣಾ ಎಂದು ಹೋಗುತ್ತಿದ್ದ ಹಲವರಿಗೆ ಇಂದು ಕೊನೆ ದಿನ ಎಂಬುದು ಗೊತ್ತೆ ಇರಲಿಲ್ಲ. ದುರಂತ ಅಂತ್ಯ ಕಾಣುವಂತಾಯ್ತು.












