Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಹಿಳಾ ನೌಕರರ ಮೇಲಿನ ದೌರ್ಜನ್ಯ ಮೂಲಭೂತ ಹಕ್ಕಿನ ಉಲ್ಲಂಘನೆ : ನ್ಯಾ.ಎಂ.ವಿಜಯ್

Facebook
Twitter
Telegram
WhatsApp

ಚಿತ್ರದುರ್ಗ. ನ.29: ಕೆಲಸದ ಸ್ಥಳದಲ್ಲಿ ಮಹಿಳಾ ನೌಕರರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮೂಲಭೂತ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಮಹಿಳಾ ನೌಕರರ ಘನತೆ ಕಾಪಾಡುವುದು ಎಲ್ಲ ಪುರಷ ನೌಕರರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ, ಅಂತರಾಷ್ಟಿçÃಯ ಮಹಿಳಾ ದೌರ್ಜನ್ಯ ವಿರೋದಿ ದಿನದ ಅಂಗವಾಗಿ, ನಗರದ ಬಾಲ ಭವನದಲ್ಲಿ ಶುಕ್ರವಾರ ಆಯೋಜಿಸಲಾದ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ (ನಿರೋಧ, ನಿರ್ಬಂಧ ಹಾಗೂ ನಿವಾರಣೆ) ಕಾಯ್ದೆ-2013ರ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಚೇರಿಗಳಲ್ಲಿ ಮಹಿಳೆಯರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಮುಕ್ತ ವಾತಾವರಣವನ್ನು ಕಲ್ಪಿಸಬೇಕು. ಲಿಂಗಾಧಾರಿತ ಶೋಷಣೆ ತಡೆದು, ಸಮಾನತೆ, ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರವನ್ನು ಮಹಿಳೆಯರಿಗೆ ನೀಡಬೇಕು. ಸ್ವಾತಂತ್ರ ನಂತರ ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾಯ್ದೆಗಳು ಜಾರಿಯಾದರೂ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪ್ರತ್ಯೇಕ ಕಾನೂನು ಇರಲಿಲ್ಲ. 1997 ರಲ್ಲಿ ಬನ್ವಾರಿ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಕೆಲಸ ಸ್ಥಳದಲ್ಲಿ ಮಹಿಳೆಯರ ರಕ್ಷಣೆಗಾಗಿ ವಿಶಾಕ ಮಾರ್ಗಸೂಚಿಗಳನ್ನು ರೂಪಿಸಿತು. ಇದನ್ನು ಆಧರಿಸಿ 2013 ರಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ (ನಿರೋಧ, ನಿರ್ಬಂಧ ಹಾಗೂ ನಿವಾರಣೆ) ಕಾಯ್ದೆ ಜಾರಿ ಮಾಡಲಾಗಿದೆ. ಇದಕ್ಕೂ ಮೊದಲು 1979 ರಲ್ಲಿ ವಿಶ್ವ ಸಂಸ್ಥೆ ಕಾರ್ಯಸ್ಥಳಗಳಲ್ಲಿ ಮಹಿಳೆಯರ ವಿರುದ್ದದ ಎಲ್ಲ ತಾರತಮ್ಯ ಹಾಗೂ ದೌರ್ಜನ್ಯಗಳನ್ನು ತಡೆಯಲು ಸಮಾವೇಶ ನಡೆಸಿ ಅಂತರಾಷ್ಟಿçÃಯ ಒಪ್ಪಂದವನ್ನು ಜಾರಿ ಮಾಡಿತು. 1993 ರಲ್ಲಿ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿತು. ಆದಾಗ್ಯೂ ಪ್ರತ್ಯೇಕ ಕಾನೂನು ರಚಿಸಲು ಸುಮಾರು 20 ವರ್ಷಗಳ ಸುದೀರ್ಘ ಕಾಲ ಹಿಡಿದಿದ್ದು, ದೇಶದ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನ್ಯಾ.ಎಂ.ವಿಜಯ್ ವಿಷಾದ ವ್ಯಕ್ತ ಪಡಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ಪಂಚಾಯತಿಯಲ್ಲಿ ಮಹಿಳಾ ನೌಕರರ ರಕ್ಷಣೆ ಕ್ರಮ ವಹಿಸಿ, ಆಂತರಿಕ ಸಮಿತಿ ರಚನೆ ಮಾಡಲಾಗಿದೆ.  ಪುರಷ ಪ್ರಾಧನ ಸಮಾಜದ ಮನೋಭಾವ ಹಾಗೂ ಚಿಂತನೆಯಲ್ಲಿ ಬದಲಾವಣೆಯಾದರೆ, ದೌರ್ಜನ್ಯಗಳು ಕಡಿಮೆಯಾಗುತ್ತವೆ. ಜಿ.ಪಂ. ವತಿಯಿಂದ ಮಹಿಳಾ ಆಧಾರಿತ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳ ವಾಹನ ಚಾಲನೆ ತರಬೇತಿಯನ್ನು ಮಹಿಳಾ ಕಾರ್ಮಿಕರಿಗೆ ನೀಡಲಾಗಿದೆ. ನಲ್-ಜಲ್-ಮಿತ್ರ ಯೋಜನೆಯಡಿ ನೀರುಗಂಟಿ ಕೆಲಸಕ್ಕೂ ಮಹಿಳೆಯರನ್ನು ನೇಮಿಸಲಾಗುತ್ತಿದೆ. ಈ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮಹಿಳಾ ನೀರುಗಂಟಿಗಳಿಗೆ ತರಬೇತಿ ನೀಡಲಾಗುವುದು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ನಗರದ ಎರೆಡು ಕಡೆ, ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸುವ ಅಕ್ಕಾಕೆಫೆಗಳನ್ನು ತೆರಯಲಾಗುವುದು. ಇದಕ್ಕಾಗಿ ಮಹಿಳಾ ಸ್ವ ಸಹಾಯ ಗುಂಪುಗಳೊAದಿಗೆ ಸಮಾಲೋಚನೆ ನಡೆಸಲಾಗಿದೆ. ಮಹಿಳಾ ಸ್ವ ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಇ-ಮಾರುಕಟ್ಟೆ ಕಲ್ಪಿಸಲು ತಂತ್ರಾAಶ ರೂಪಿಸಲಾಗುತ್ತಿದೆ. ಈ ಬಗ್ಗೆ ಆಯ್ದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆ ಕುರಿತು ತರಬೇತಿ ನೀಡಲಾಗುವುದು ಎಂದು ಸಿಇಓ ಎಸ್.ಜೆ.ಸೊಮಶೇಖರ್ ತಿಳಿಸಿದರು.

ಜಿಲ್ಲಾ ಆಂತರಿಕ ಸಮಿತಿ ಅಧ್ಯಕ್ಷೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದ್ಯಸೆ ಡಿ.ಕೆ.ಶೀಲಾ ಮಾತನಾಡಿ, 2013ರ ಕಾಯ್ದೆಯ ಅನುಸಾರ 10 ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ, ಹಿರಿಯ ಮಹಿಳಾ ನೌಕರರ ಅಧ್ಯಕ್ಷತೆಯಲ್ಲಿ ಆಂತರಿಕ ಸಮಿತಿ ರಚಿಸಬೇಕು. ಮಹಿಳೆಯರು ದೂರು ಸಲ್ಲಿಸಲು ಅನುವಾಗುವಂತೆ ದೂರ ಪೆಟ್ಟಿಗೆ ಇರಿಸಬೇಕು. ಸಮಿತಿ ರಚನೆ ಬಗ್ಗೆ ಹಾಗೂ ಮಹಿಳಾ ನೌಕರರಿಗೆ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಿಷೇಧಿಸಲಾಗಿದೆ ಎಂದು ಕೆಲಸದ ಸ್ಥಳದಲ್ಲಿ ಸಾರ್ವಜನಿಕರಿಗೆ ಗೋಚರವಾಗುವಂತೆ ಫಲಕಗಳನ್ನು ಅಳವಡಿಸಬೇಕು.  ಕಾಯ್ದೆಯ ದುರುಪಯೋಗ ಪಡಿಸಿಕೊಂಡರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಸಭೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ವಿಜಯ್‌ಕುಮಾರ್ ಸೇರಿದಂತೆ, ಹಲವು ಇಲಾಖೆಗಳ ಆಂತರಿಕ ಸಮಿತಿ ಮುಖ್ಯಸ್ಥರು ಭಾಗವಹಿಸಿದ್ದರು. ಹಿರಿಯ ಸಹಾಯಕ ನಿರ್ದೇಶಕಿ ಪವಿತ್ರಾ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ (ನಿರೋಧ, ನಿರ್ಬಂಧ ಹಾಗೂ ನಿವಾರಣೆ) ಕಾಯ್ದೆ-2013ರ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಐವರು ಬಾಣಂತಿಯರ ಸಾವಿನ ಬೆನ್ನಲ್ಲೇ ಬ್ರಿಮ್ಸ್ ನಲ್ಲಿ ಶಿಶು ಸಾವು..!

ಬಳ್ಳಾರಿ: ಬೀಮ್ಸ್ ನಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಐವರು ಬಾಣಂತಿಯರು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಇದೀಗ ಶಿಶು ಒಂದು ಸಾವನ್ನಪ್ಪಿದೆ. ಬೀಮ್ಸ್ ಗೆ ನಾರ್ಮಲ್ ಡೆಲಿವರಿಗೆಂದು ಗರ್ಭಿಣಿ ಅಡ್ಮಿಟ್ ಆಗಿದ್ದರು. ಆದರೆ ಇದ್ದಕ್ಕಿದ್ದ ಹಾಗೇ

ಚಿತ್ರದುರ್ಗ ನಗರಸಭೆಯ ಗೋಪಾಲಕೃಷ್ಣ ಇನ್ನಿಲ್ಲ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 05 : ನಗರಸಭೆ ನೌಕರ ಹಾಗೂ ಪೌರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಗೋಪಾಲಕೃಷ್ಣ (55) ಗುರುವಾರ ನಿಧನರಾದರು. ಹೃದಯಸಂಬಂಧಿ ರೋಗದಿಂದ ಇತ್ತೀಚೆಗೆ ಚೇತರಿಸಿಕೊಂಡಿದ್ದ ಅವರು, ಬುಧವಾರ ರಾತ್ರಿ

ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ

ಸುದ್ದಿಒನ್ | ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆಜಾದ್

error: Content is protected !!