Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಯೋಗದಿಂದ ಧ್ಯಾನ, ಮೌನದಿಂದ ಸಮಾಧಾನ : ಡಾ. ಬಸವಕುಮಾರ ಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಬಸವಾದಿ ಶಿವಶರಣರ ವಚನಗಳಲ್ಲಿ ಮಾನವನನ್ನು ಮಹದೇವನನ್ನಾಗಿಸುವ ತತ್ವಾದರ್ಶ ಹಾಗೂ ಉದಾತ್ತ ಮೌಲ್ಯಗಳು ಅಡಕವಾಗಿದ್ದು, ಶಿವಯೋಗದ ಸಾಧನೆಯಿಂದ ತನು–ಮನ–ಭಾವಶುದ್ಧಿಯೊಂದಿಗೆ ಧ್ಯಾನ, ಮೌನ ಮತ್ತು ಸಮಾಧಾನ ಪ್ರಾಪ್ತಿಯಾಗುತ್ತದೆ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಶೀಬಾರದ ಶ್ರೀ ಗುರುಪಾದ ಮುರುಘರಾಜೇಂದ್ರರ ವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಿವಯೋಗದ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು.

ತನು–ಮನದ ಶುದ್ಧಿಗಾಗಿ ಹಲವರು ದೇವಾಲಯಗಳಿಗೆ ತೆರಳುತ್ತಾರೆ. ಆದರೆ ಶಿವಯೋಗದ ಸಾಧನೆಯಿಂದಲೂ ಮನಸ್ಸನ್ನು ಸ್ಥಿರಗೊಳಿಸಿ ಆತ್ಮಶುದ್ಧಿಯನ್ನು ಸಾಧಿಸಬಹುದು. ಜೀವನದಲ್ಲಿ ಎದುರಾಗುವ ಏರುಪೇರು, ಕಳವಳ, ಸಂದಿಗ್ಧತೆ ಹಾಗೂ ಮನೋವಿಕಲತೆಯಿಂದ ಹೊರಬರಲು ಶಿವಯೋಗ ಪರಿಣಾಮಕಾರಿ ಮಾರ್ಗವಾಗಿದೆ. ಪಂಚೇಂದ್ರಿಯಗಳ ಚಂಚಲತೆಯಿಂದ ಬಳಲುವ ಮನಸ್ಸನ್ನು ಇಷ್ಟಲಿಂಗದ ಧ್ಯಾನದ ಮೂಲಕ ಏಕಾಗ್ರಗೊಳಿಸಿದಾಗ ಧ್ಯಾನ, ಮೌನ ಮತ್ತು ಸಮಾಧಾನದ ಅನುಭವ ದೊರೆಯುತ್ತದೆ. ಬಸವಾದಿ ಶಿವಶರಣರು ಜಾತಿ, ಮತ, ಲಿಂಗಭೇದವಿಲ್ಲದೆ ಎಲ್ಲರೂ ಈ ಮಾರ್ಗವನ್ನು ಅನುಸರಿಸಬೇಕೆಂದು ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಖ್ಯಾತ ಹಿನ್ನೆಲೆ ಗಾಯಕಿ ಡಾ. ಎಸ್. ಜಾನಕಿ ಅವರಿಗೆ ಗಾನನಮನ ಹಾಗೂ ಹಿರಿಯ ಗಾಂಧಿವಾದಿ ಹೆಚ್. ಹನುಮಂತಪ್ಪ ಅವರಿಗೆ ನುಡಿನಮನ ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ. ಜಾನಕಿ ಅವರು ಈ ನಾಡು ಕಂಡ ಅಪರೂಪದ ಗಾಯಕಿಯಾಗಿದ್ದು, ಅವರಿಗೆ ಅವರೇ ಸಾಟಿ. ಹಾಗೆಯೇ ಹೆಚ್. ಹನುಮಂತಪ್ಪ ಅವರು ರಾಜಕೀಯದಲ್ಲಿದ್ದು ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆಯೂ ಇದೇ ವೇದಿಕೆಯಲ್ಲಿ ನಡೆದಿರುವುದು ಸುದೈವ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹೆಚ್. ಹನುಮಂತಪ್ಪ ಅವರ ಒಡನಾಡಿ ಹಾಗೂ ಎಸ್ಸೆನ್ ಸ್ಮಾರಕ ಟ್ರಸ್ಟ್‌ನ ಪದಾಧಿಕಾರಿ ಎಸ್. ಷಣ್ಮುಖಪ್ಪ ಮಾತನಾಡಿ, ಹನುಮಂತಪ್ಪ ಅವರು ಶಿಕ್ಷಕ, ವಕೀಲ ಹಾಗೂ ರಾಜಕಾರಣಿಯಾಗಿ ಜನಪರ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ಅವರು ಸ್ಥಾಪಿಸಿದ ಸರಸ್ವತಿ ಕಾನೂನು ಕಾಲೇಜಿನಿಂದ ಅನೇಕ ಪ್ರತಿಭಾವಂತ ನ್ಯಾಯವಾದಿಗಳು ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ–ರಾಯದುರ್ಗ ರೈಲು ಮಾರ್ಗ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗಳ ಸ್ಥಾಪನೆ, ನೀರಾವರಿ ಹೋರಾಟ ಸೇರಿದಂತೆ ಹಲವು ಜನಪರ ಕಾರ್ಯಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅನೇಕ ಬಡವರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿಯೂ ಪಾತ್ರವಹಿಸಿದ್ದರು. ಎಸ್ಸೆನ್ ಸ್ಮಾರಕ ಟ್ರಸ್ಟ್ ಮೂಲಕ ಅವರ ಪುಣ್ಯಭೂಮಿಯನ್ನು ಐತಿಹಾಸಿಕ ಸ್ಮಾರಕವನ್ನಾಗಿ ರೂಪಿಸಲು ಶ್ರಮಿಸಿದ್ದರು. ರಾಜಕೀಯ ಪ್ರವೇಶಿಸುವ ಯುವಕರಿಗೆ ತರಬೇತಿ ನೀಡುವ ಶಾಲೆ ಸ್ಥಾಪಿಸಬೇಕೆಂಬ ಅವರ ಕನಸು ನನಸಾಗಿದ್ದರೆ ಅದೇ ಅವರಿಗೆ ಸಲ್ಲುವ ನಿಜವಾದ ನುಡಿನಮನವಾಗುತ್ತಿತ್ತು ಎಂದು ಹೇಳಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now