ಚಿತ್ರದುರ್ಗ.ಜು.25: ಬರ ಘೋಷಣೆಯ 10 ನಿಯಮಗಳಲ್ಲಿ ಬದಲಾವಣೆ ತರಬೇಕು. ಎಲ್‌ನಿಯೋ ಭೀಕರ ಪರಿಣಾಮ ರಾಜ್ಯದ ಮೇಲೆ ಉಂಟಾಗಿದೆ. ಇದೇ ಪರಿಸ್ಥಿತಿ ದೇಶಾದ್ಯಂತ ಮುಂದುವರೆದಿದ್ದು, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸು ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ರಾಜ್ಯಾದ್ಯಂತ ಮಳೆಯು ಮರೀಚಿಕೆಯಾಗಿದೆ.
ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ತೀವ್ರ ತರನಾದ ಚರ್ಚೆಯಾಯಿತು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಜೂನ್ ತಿಂಗಳ ಮುಂಗಾರು ಮಳೆ ಕೆಲವೆಡೆ ಮಾತ್ರ ಆಗಿದ್ದು, ಬೇರೆಯಡಿ ಮಳೆಯಾಗಿಲ್ಲ. ಜುಲೈ ತಿಂಗಳ ಅಂತ್ಯದ ವೇಳೆಗೆ ರಾಜ್ಯದಾದ್ಯಂತ ಶೇಕಡಾ 42 ಕ್ಕೂ ಹೆಚ್ಚು ಮಳೆ ಕೊರತೆ ಕಂಡುಬಂದಿದೆ. ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಶೇ. 2, ಕೋಲಾರದಲ್ಲಿ ಶೇ. 1.5 ರಿಂದ 2 ಹಾಗೂ ಚಿತ್ರದುರ್ಗದಲ್ಲಿ ಶೇ. 3 ರಿಂದ 12 ರಷ್ಟು ಮಾತ್ರ ಬಿತ್ತನೆಯಾಗಿದೆ. ಇಡೀ ರಾಜ್ಯದ ಸರಾಸರಿ ತೆಗೆದುಕೊಂಡರೆ ಕೇವಲ ಶೇ. 15 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಎಲ್ ನಿನೋ ಈ ಬಾರಿ ಮಳೆ ಕೊರತೆಗೆ ‘ಎಲ್ ನಿನೋ’ ಪ್ರಭಾವವೇ ಪ್ರಮುಖ ಕಾರಣ. ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ನೀರಿನ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಇದರಿಂದಾಗಿ ನೈಸರ್ಗಿಕ ಸಾಂದ್ರೀಕರಣ (Condensation) ಪ್ರಕ್ರಿಯೆಗೆ ಅಡಚಣೆಯುಂಟಾಗಿ ಮಳೆ ಮೋಡಗಳು ರೂಪುಗೊಳ್ಳುತ್ತಿಲ್ಲ. ಈ ಬಾರಿಯ ತಾಪಮಾನ ಏರಿಕೆಯನ್ನು ‘ಸೂಪರ್ ಎಲ್ ನಿನೋ’ ಎಂದು ಕರೆಯಲಾಗಿದ್ದು, ಇದರಿಂದಾಗಿ ಜಾಗತಿಕ ಮಟ್ಟದಲ್ಲೂ ಹವಾಮಾನ ವೈಪರೀತ್ಯ ಉಂಟಾಗಿದೆ ಎಂದು ಅವರು ವಿವರಿಸಿದರು.

ವಿಭಾಗದ 9 ಜಿಲ್ಲೆಗಳಲ್ಲಿ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ 223 ಮಿ.ಮೀ ಗೆ ಬದಲಾಗಿ 141 ಮಿ.ಮೀ ಮಳೆ ಆಗಿದೆ. ಶೇ.37% ಕೊರತೆ ಕಂಡುಬಂದಿದೆ.
ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದ್ದು, ಉಳಿದ 7 ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ತುಮಕೂರು ಜಿಲ್ಲೆಯಲ್ಲೂ ಸಹ ತೀವ್ರ ಮಳೆ ಕೊರತೆ ಎದುರಿಸಿದ ತಾಲ್ಲೂಕುಗಳಿವೆ.ವಿಭಾಗ ವ್ಯಾಪ್ತಿಯ 57 ತಾಲ್ಲೂಕುಗಳ ಪೈಕಿ 2 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು, 14 ತಾಲ್ಲೂಕಿನಲ್ಲಿ ವಾಡಿಕೆ, 36 ತಾಲ್ಲೂಕಿನಲ್ಲಿ ಕೊರತೆ ಹಾಗೂ 5 ತಾಲ್ಲೂಕಿನಲ್ಲಿ ತ್ರೀವ ತರನಾದ ಮಳೆ ಕೊರತೆ ಉಂಟಾಗಿದೆ ಎಂದರು.
ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ ಖಾತೆಗೆ 54.45 ಕೋಟಿ ಅನುದಾನ ಬಿಡುಗಡೆ:
ಬರದ ವಿಪತ್ತು ನಿರ್ವಹಣೆ ವಿಭಾಗದ 9 ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು ರೂ. 54.45 ಕೋಟಿ ಹಣವಿದೆ. ತುಮಕೂರು ರೂ.11.58 ಕೋಟಿ, ಕೋಲಾರ ರೂ.9.24 ಕೋಟಿ, ಬೆಂಗಳೂರು ದಕ್ಷಿಣ ರೂ. 8.7 ಕೋಟಿ, ಬೆಂಗಳೂರು ಗ್ರಾಮಾಂತರ ರೂ.7.56 ಕೋಟಿ, ಚಿತ್ರದುರ್ಗ ರೂ.4.35 ಕೋಟಿ, ಚಿಕ್ಕಬಳ್ಳಾಪುರ ರೂ.4.26 ಕೋಟಿ, ಶಿವಮೊಗ್ಗ ರೂ.2.41 ಕೋಟಿ, ದಾವಣಗೆರೆ ರೂ.,1.80 ಕೋಟಿ, ಬೆಂಗಳೂರು ನಗರ ರೂ1.1 ಕೋಟಿ ಹಣ ಬಳಕೆಗೆ ಲಭ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರು ಜಿಲ್ಲೆಯ ಜನಪ್ರತಿನಿಧಿ ಮಾಜಿ ಸಚಿವ ವೀರಣ್ಣ ಅವರ ನಿಧನ ಅಂಗವಾಗಿ ಪ್ರಗತಿ ಪರಿಶೀಲನೆ ಸಭೆ ಆರಂಭದಲ್ಲಿ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು. ಮೃತರಿಗೆ ಗೌರವ ಸಲ್ಲಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಭೆಯಿಂದ ನಿರ್ಗಮಿಸಿದರು.
ಕುಂಠಿತಗೊಂಡ ಕೃಷಿ ಬಿತ್ತನೆ:
ಜುಲೈ ಅಂತ್ಯಕ್ಕೆ ಬೆಂಗಳೂರು ವಿಭಾಗದ 9 ಜಿಲ್ಲೆಗಳಲ್ಲಿ ಒಟ್ಟು 13.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 1.74 ಲಕ್ಷ ಹೆಕ್ಟೇರ್ ಅಂದರೆ ಶೇ(
13 ರಷ್ಟು ಮಾತ್ರ ಬಿತ್ತನೆಯಾಗಿದೆ. 78,540 ಕ್ವಿಂಟಾಲ್ ಬಿತ್ತನೆ ಬೀಜಗಳ ಪೈಕಿ 19,454 ಕ್ವಿಂಟಾಲ್ ವಿತರಣೆಯಾಗಿದ್ದು, 17,088 ಕ್ವಿಂಟಾಲ್ ದಾಸ್ತಾನಿದೆ. 5,13,229 ಮೆ.ಟನ್ ರಸಗೊಬ್ಬರ ದಾಸ್ತಾನಿನ ಪೈಕಿ 2,83,645 ಮೆ.ಟನ್ ಮಾರಾಟವಾಗಿದ್ದು, 2,29,584 ಮೆ.ಟನ್ ಉಳಿಕೆಯಾಗಿದೆ ಎಂದು ಸರ್ಕಾರ ಕೃಷಿ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ರಾಜೇಂದ್ರ ಸಭೆಯಲ್ಲಿ ತಿಳಿಸಿದರು.
ಮೇವಿನ ಲಭ್ಯತೆ: ವಿಭಾಗದಲ್ಲಿ 24 ಲಕ್ಷ ದೊಡ್ಡ ಜಾನುವಾರು ಮತ್ತು 62 ಲಕ್ಷ ಸಣ್ಣ ಜಾನುವಾರುಗಳಿದ್ದು, ಲಭ್ಯವಿರುವ 46 ಲಕ್ಷ ಟನ್ ಮೇವು ಮುಂದಿನ 38 ವಾರಗಳಿಗೆ ಸಾಕಾಗುತ್ತದೆ ಎಂದು ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ವಿನುತ್ ಪ್ರಿಯಾ ಸಭೆಯಲ್ಲಿ ತಿಳಿಸಿದರು
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










