Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂಡ್ಯ ಬಂದ್ ಬೆನ್ನಲ್ಲೇ ಬೆಂಗಳೂರು ಬಂದ್ ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

Facebook
Twitter
Telegram
WhatsApp

 

ಮಂಡ್ಯ: ಕಾವೇರಿಗಾಗಿ ಮಂಡ್ಯ ಭಾಗದಲ್ಲಿ ಹೋರಾಟ‌ ತೀವ್ರಗೊಳ್ಳುತ್ತಿದೆ. ರಸ್ತೆಗಳಲ್ಲಿ‌ ಮಲಗಿ, ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಬಂದ್ ಗೂ ಕರೆ ನೀಡಲಾಗಿದೆ.

ಕನ್ನಡಪರ ಸಂಘಟನೆಗಳಿಂದ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್ ಮಾಡುವುದಾಗಿ ಹೇಳಿದ್ದಾರೆ. ಕಾವೇರಿ ನೀರು ರೈತರಿಗೆ ಎಷ್ಟು ಮುಖ್ಯವೋ ಬೆಂಗಳೂರಿಗರಿಗೂ ಅಷ್ಟೇ ಮುಖ್ಯವಾಗಿದೆ. ಯಾಕಂದ್ರೆ‌ ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತಿರುವುದು ಇದೇ ಕಾವೇರಿಯಿಂದ. ಹೀಗಾಗಿಯೇ ರೈತರು ಕೂಡ ಬೆಂಗಳೂರಿಗರು ಈ ಹೋರಾಟದಲ್ಲಿ ಭಾಗಿಯಾಗಲು ಸೂಚಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.

ಇನ್ನು ಇಂದು ಮಂಡ್ಯದಲ್ಲಿ ಹೋರಾಟ ಭುಗಿಲೆದ್ದಿದೆ. ರಸ್ತೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ‌ ಜೋರಾದ ಬೆನ್ನಲ್ಲೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಹೋರಾಟಕ್ಕೆ ರೈತರು, ರಾಜಕಾರಣಿಗಳು, ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ. ಇದೀಗ ಹೋರಾಟದ ತೀವ್ರತೆ ಹೆಚ್ಚಾದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರತಿದಿನ ಒಂದು ಲೋಟ ಈ ಜ್ಯೂಸ್ ಕುಡಿಯಿರಿ : ಫಲಿತಾಂಶ ನೀವೇ ಗಮನಿಸಿ…!

ಸುದ್ದಿಒನ್ : ಹಾಗಲಕಾಯಿಯನ್ನು ಅನೇಕ ಜನರು ಇಷ್ಟಪಡುವುದಿಲ್ಲ. ಆದರೆ ಈ ಹಾಗಲಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹಾಗಲಕಾಯಿಯ ರಸವು (ಜ್ಯೂಸ್) ಅನೇಕ ಪೋಷಕಾಂಶಗಳಿಂದ ಕೂಡಿದ ಆರೋಗ್ಯಕರ ಪಾನೀಯ ಎಂದು ಹೇಳಲಾಗುತ್ತದೆ.

ಈ ರಾಶಿಯವರು ಕೆಲಸಕ್ಕೆ ಮರು ನೇಮಕ ಗ್ಯಾರಂಟಿ, ಈ ರಾಶಿಯವರಿಗೆ ಮದುವೆದೇ ಚಿಂತೆ

ಈ ರಾಶಿಯವರು ಕೆಲಸಕ್ಕೆ ಮರು ನೇಮಕ ಗ್ಯಾರಂಟಿ, ಈ ರಾಶಿಯವರಿಗೆ ಮದುವೆದೇ ಚಿಂತೆ, ಬುಧವಾರ-ರಾಶಿ ಭವಿಷ್ಯ ಜುಲೈ-24,2024 ಸೂರ್ಯೋದಯ: 05:57, ಸೂರ್ಯಾಸ್ತ : 06:48 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ ,

ಮಹಾವಂಚನೆಯ ಕೇಂದ್ರ ಬಜೆಟ್ : ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಆರೋಪ

ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ಬಿಜೆಪಿ ಪಕ್ಷದ ಕೇಂದ್ರ ನಾಯಕರ ಪಾಲಿಗೆ ಕರ್ನಾಟಕ ರಾಜ್ಯವು ಚುನಾವಣೆಯ ಫಲವತ್ತಾದ ಭೂಮಿಯಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಶತ್ರು ರಾಷ್ಟ್ರ ದಂತೆ ಕಾಣುತ್ತಿರುವುದಕ್ಕೆ ಈ ಬಾರಿಯ ಬಜೆಟ್ ದೃಢಪಡಿಸಿದೆ

error: Content is protected !!