Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ ಆಪರೇಷನ್ ಸಿಂಧೂರ ; ಹೇಗಿದೆ ಟ್ಯಾಟೂ ಕ್ರೇಜ್..?

---Advertisement---

ಬೆಂಗಳೂರು; ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ನಮ್ಮ ಸೇನೆ ನಡುಕ ಹುಟ್ಟಿಸಿದೆ. ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರನ್ನ ಮಟ್ಟ ಹಾಕಿದೆ. ಈ ಬೆಳವಣಿಗೆಯ ಬಳಿಕ ಎಲ್ಲೆಲ್ಲೂ ಆಪರೇಷನ್ ಸಿಂಧೂರದ ಬಗ್ಗೆ ಗೌರವ ಹೆಚ್ಚಾಗಿದೆ. ಇದೀಗ ಆಪರೇಷನ್ ಸಿಂಧೂರ ಟ್ಯಾಟೂ ಕ್ರೇಜ್ ಕೂಡ ಶುರುವಾಗಿದೆ.

ಅಚ್ಚೆ ಹಾಕಿಸಿಕೊಳ್ಳುವ ಮೂಲಕ ಯುವಕರು ದೇಶ ಪ್ರೇಮ ಮೆರೆಯುತ್ತಿದ್ದಾರೆ. ಟ್ಯಾಟೂ ಮಾತ್ರವಲ್ಲ ಮೆಹಂದಿ ಕೂಡ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಆಪರೇಷನ್ ಸಿಂಧೂರ ಟ್ಯಾಟೂಗೆ ಸಿಕ್ಕಾಪಟ್ಟೆ ಕ್ರೇಜ್ ಶುರುವಾಗಿದೆ. ದೇಶ ಪ್ರೇಮವನ್ನು ಈ ಮೂಲಕ ಯುವಕರು ತೋರುತ್ತಿದ್ದಾರೆ. ಹೀಗಾಗಿ ಆಪರೇಷನ್ ಸಿಂಧೂರದ ಮೇಲಿನ ಕ್ರೇಜ್ ಜಾಸ್ತಿಯಾಗಿದೆ.

ಟ್ಯಾಟೂ ಹಾಕುವುದರಿಂದಾನೇ ಫೇಮಸ್ ಆಗಿರುವಂತ ನೀತೂ ವನಜಾಕ್ಷಿ ಈ ಬಗ್ಗೆ ಮಾತನಾಡಿದ್ದು, ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ಈಗ ಆ ವಿಕ್ಟರಿ ಸೆಲೆಬ್ರೆಟ್ ಮಾಡೋದಕ್ಕೆ ಜನ ಮುಂದಾಗಿದ್ದಾರೆ. ತಮ್ಮ ತಮ್ಮ ಕೈ ಮೇಲೆ ಆಪರೇಷನ್ ಸಿಂಧೂರ ಅಂತ ಟ್ಯಾಟೂ ಹಾಕಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಆ ಟ್ಯಾಟೂ ನೋಡಿದ ತಕ್ಷಣ ಅದರ ಬಗ್ಗೆ ನೆನೆಪಾಗುತ್ತದೆ ಎಂದಿದ್ದಾರೆ.

ನಮ್ಮ ಯುವಕರು ನಮ್ಮ ದೇಶ, ನಮ್ಮ ಸೇನೆ ಅಂತ ಬಂದರೆ ಸದಾ ಕಾಲವೂ ಗೌರವ ಕೊಡುವುದಕ್ಕೆ ರೆಡಿ ಇರ್ತಾರೆ. ಅದಕ್ಕಾಗಿ ತಮ್ಮ ಕೈಲಾದ ಭಕ್ತಿಯನ್ನ ಸಮರ್ಪಿಸುತ್ತಾರೆ. ಈಗ ಆಪರೇಷನ್ ಸಿಂಧೂರದ ವಿಚಾರದಲ್ಲೂ ಅದೇ ಆಗಿರೋದು. ಪಾಕಿಸ್ತಾನ ಆಗಾಗ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾ ಇತ್ತು. ಅದಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರವನ್ನ ನಮ್ಮ ಸೇನೆ ನೀಡಿದೆ‌. ಅದೇ ಖುಷಿಯಲ್ಲಿ ಆಪರೇಷನ್ ಸಿಂಧೂರ ಟ್ಯಾಟೂ ಹಿಂದೆ ಬಿದ್ದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment