ಚಿತ್ರದುರ್ಗ. ಅ.30: ಆರ್ಮಿ ವೇಲ್‌ಫೇರ್ ಪ್ಲೇಸ್‌ಮೆಂಟ್ ಆರ್ಗನೈಜೇಷನ್ (AWPO) ಮತ್ತು ದಿ ಮಾವೆನ್ ಕೊಹಾರ್ಟ್ (The Maven Cohort) ಎಂಬ ಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ಸೇನೆಯ ಜೆ.ಸಿ.ಓ (JCO ) ರ‍್ಯಾಂಕ್‌ವರೆಗಿನ ಕೊನೆಯ ವರ್ಷದ ನವೃತ್ತಿ ಅಂಚಿನಲ್ಲಿರುವ ಸೈನಿಕರು ಹಾಗೂ ನಿವೃತ್ತ ಮಾಜಿ ಸೈನಿಕರುಗಳ ಕೇಂದ್ರ ಸರ್ಕಾರಿ ಉದ್ಯೋಗ ಮತ್ತು ಬ್ಯಾಂಕ್ ಉದ್ಯೋಗ ನೇಮಕಾತಿಗಾಗಿ ಪಾವತಿಯ ಮೇರೆಗೆ ಪೂರ್ವ ತಯಾರಿ ಆನ್‌ಲೈನ್ ತರಬೇತಿಗಳನ್ನು ಪರಿಚಯಿಸುತ್ತಿದೆ.
ನವೆಂಬರ್ 6 ರಿಂದ ತರಬೇತಿ ಆರಂಭಗೊಳ್ಳಲಿದ್ದು,ಆಸಕ್ತರು AWPO ಜಾಲತಾಣ https://me-qr.com/ZloLV2HS ನಲ್ಲಿ ನೊಂದಾಯಿಸಿಕಳ್ಳುವುದರ ಮೂಲಕ ತರಬೇತಿಯ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಆರ್ಮಿ ವೇಲ್‌ಫೇರ್ ಪ್ಲೇಸ್‌ಮೆಂಟ್ ಆರ್ಗನೈಜೇಷನ್ AWPO ನ ಜಾಲತಾಣವನ್ನು ಸಂಪರ್ಕಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಆರ್.ಸಿ.ಹಿರೇಮಠ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











