Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

MLA ಆದ್ರೆ ಗೋಡೆ ಬಿದ್ದೋಗುತ್ತೆ ಅಂತ ನನಗೆ ಮೊದಲೇ ಹೇಗೆ ಗೊತ್ತಾಗುತ್ತೆ : ಶಾಸಕ ರಿಜ್ವಾನ್ ಅರ್ಷದ್

---Advertisement---

ಬೆಂಗಳೂರು: ನಿನ್ನೆ ಬೀಸಿದ ಗಾಳಿಗೆ, ಸುರಿದ ಮಳೆಗೆ ಬೆಂಗಳೂರಲ್ಲಿ ಸೃಷ್ಟಿಯಾಗಿರುವ ಅವಾಂತರಗಳು ಒಂದೆರಡಲ್ಲ. ಅದರಲ್ಲೂ ಬೌರಿಂಗ್ ಆಸ್ಪತ್ರೆಯ ಕಾಪೌಂಡ್ ಕುಸಿದು ಏಳು ಜನ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಶಾಸಕ ರಿಜ್ವಾನ್ ಅರ್ಷದ್ ಮಾತನ್ನಾಡಿದ್ದಾರೆ.

ಇದು ಪ್ರಕೃತಿಯ ಆರ್ಭಟ. ಪ್ರಕೃತಿಯ ಆರ್ಭಟದ ಮುಂದೆ ಯಾರೂ ಕೂಡ ನಿಲ್ಲುವುದಕ್ಕೆ ಸಾಧ್ಯವಿಲ್ಲ. ನಾವೆಷ್ಟೇ ಬಲಿಷ್ಠ ಅಂತ ತಿಳಿದುಕೊಂಡರು ಸಹ ಸಾಧ್ಯವಿಲ್ಲ. ನಮ್ಮ ಪ್ರಿಪರೇಷನ್ ಇರಬೇಕು. ಇನ್ನು ಹೆಚ್ಚಿನ ಪ್ರಿಪರೇಷನ್ ಮಾಡಿಕೊಳ್ಳಬೇಕು. ಮಳೆ ಬಂದಿರುವಂತ ಪ್ರಮಾಣ ನೋಡಿ, ಗಾಳಿ ಬೀಸಿರುವ ಪ್ರಮಾಣ ನಿಒಡಿ. ನಾವೂ ಇನ್ನು ಹೆಚ್ಚಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನ ನಾನು ಒಪ್ಪಿಕೊಳ್ತೇನೆ. ಈಗ ನನ್ನ ಹಿಂದಿರುವ ಗೋಡೆ ನೋಡಿ. ಈಗ ಈ ಗೋಡೆ ಬಿದ್ದೋಗುತ್ತೆ ಅಂತ ಎಂಎಲ್ಎ ಆಗಿ ಅರ್ಥವಾಗುತ್ತಾ. ನೀವೂಗಳು ಸಾಕಷ್ಟು ಬಾರಿ ಅಲ್ಲಿಗೆ ಬಂದಿದ್ದೀರಿ. ನೀವೂ ಕೂಡ ಈ ಗೋಡೆ ಬಿದ್ದೋಗುತ್ತೆ ಅಂತ ಯಾವತ್ತು ತೋರಿಸಿರಲಿಲ್ಲ. ಯಾಕಂದ್ರೆ ನಿಮಗೂ ಕಾಣಿಸೋದಿಲ್ಲ, ನಮಗೂ ಕಾಣಿಸೋದಿಲ್ಲ ಅಲ್ವಾ.

ತನಿಖೆಯ ನಂತರ ಎಲ್ಲವೂ ಗೊತ್ತಾಗುತ್ತೆ. ಯಾಕೆ ಗೋಡೆ ಕುಸಿದಿದೆ ಎಂದು. 25 ವರ್ಷಗಳಿಗಿಂತ ಬೇಗ ಬಿದ್ದರೆ ಯಾಕೆ ಅನ್ನೋದನ್ನ ನೋಡಬೇಕು. ಯಾಕಂದ್ರೆ ಈ ಹಳೆಯ ಮನೆಗಳು, ಕಟ್ಟಡಗಳನ್ನು ನೋಡಿದಾಗ ನೂರಾರು ವರ್ಷಗಳು ಇರುತ್ತವೆ. ಕೇವಲ ಮೂವತ್ತೆ ವರ್ಷಕ್ಕೆ ಗೋಡೆ ಬಿತ್ತು ಅಂದ್ರೆ ಯಾಕೆ ಅನ್ನೋದು ತನಿಖೆಯಿಂದ ತಿಳಿಯಬೇಕಾಗಿದೆ. ಹೆರಿಟೇಜ್ ಬಿಲ್ಡಿಂಗ್ ಗಳನ್ನು ಉಳಿಸಿಕೊಳ್ಳುವತ್ತ ಗಮನ ಕೊಡಬೇಕು. ಸರ್ಕಾರ ಅದಕ್ಕೆ ಬೇಕಾದ್ದನ್ನು ಒದಗಿಸಬೇಕು. ಇಲ್ಲಂದ್ರೆ ಮುಂದಿನ ದಿನಗಳ ಮಕ್ಕಳಿಗೆ ಆ ಸಂಪ್ರದಾಯ ನೆನಪೇ ಇರೋಲ್ಲ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now