Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತೆರವಾದ ಶಾಮನೂರು ಶಿವಶಂಕರಪ್ಪ ಜಾಗಕ್ಕೆ ಮೊಮ್ಮಗನೆ ಅಭ್ಯರ್ಥಿಯಾ..?

---Advertisement---

 

ದಾವಣಗೆರೆ: ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ ಶಾಮನೂರು ಶಿವಶಂಕರಪ್ಪ ಅವರು ನಿಧನರಾದರು. ಕಡೆ ತನಕವೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ನಿಧನಕ್ಕೂ ಮುನ್ನವೂ ಶಾಸಕರಾಗಿದ್ದರು. ಇದೀಗ ಅವರ ಕ್ಷೇತ್ರ ತೆರವಾಗಿದೆ. ಈ ಕ್ಷೇತ್ರಕ್ಕೆ ಅಂದ್ರೆ ದಾವಣಗೆರೆ ದಕ್ಷಿಣ ಉಪಚುನಾವಣೆ ನಡೆಯಲಿದೆ. ಹೀಗಾಗಿ ಈ ಕ್ಷೇತ್ರಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಮಗ ಸಮರ್ಥ್ ಅವರನ್ನು ನಿಲ್ಲಿಸ್ತಾರೆ ಎಂಬ ಮಾತಿದೆ. ಈ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದಾರೆ.

ಇವತ್ತಿನ ದಿನ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರನ್ನ ಬದಲಾಯಿಸಿ ಸಂಪೂರ್ಣ ಆತ್ಮವನ್ನೇ ಬದಲಾಯಿಸಿ ವಿಬಿಜಿ ರಾಮ್ ಜೀ ಎಂಬ ಬಿಲ್ ಅನ್ನ ಜಾರಿಗೆ ತರ್ತಾ ಇದ್ದಾರೆ ಕೇಂದ್ರ ಸರ್ಕಾರ, ಇದರ ವಿರುದ್ಧವಾಗಿ ನಾವೆಲ್ಲಾ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ದಾವಣಗೆರೆ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡ್ತಾ ಇದ್ದೀವಿ. ರಾಹುಲ್ ಗಾಂಧಿ ಅವರು ಮೂರು ಪ್ರೆಸ್ ಮೀಟ್ ಮಾಡಿ ಹೇಳಿದ್ದಾರೆ. ದಾಖಲೆ ಇಲ್ಲದೆ ಅವರು ಯಾವತ್ತು ಮಾತನಾಡಿಲ್ಲ. ಆಳಂದ ಕ್ಷೇತ್ರ ಇರಬಹುದು, ಮತಗಳು ಚೋರಿ ಮಾಡಿರುವುದು ಇರಬಹುದು. ನಿಜಾಂಶ ರಾಹುಲ್ ಗಾಂಧಿ ಅವರ ಹೇಳಿಕೆಯಲ್ಲಿದೆ ಎಂದಿದ್ದಾರೆ.

ಎಲ್ಲಾ ಸಂಪೂರ್ಣ ಹೈಕಮಾಂಡ್ ಗೆ ಬಿಟ್ಟಿದ್ದು. ನಾವೂ ನಿಜವಾಗಲೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಪ್ಪಾಜಿ ಅವರನ್ನ ಆರು ಬಾರಿ ಎಂಎಲ್ಎ ಮಾಡಿದ್ದರು, ನನ್ನನ್ನ ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ. ದಾವಣಗೆರೆ ಜನತೆಗೆ ಚಿರ ಋಣಿ. ಜನರ ಪಲ್ಸ್ ಕೂಡ ಹೈಕಮಾಂಡ್ ಗೆಸ್ ಮಾಡುತ್ತೆ. ಯಾರು ಸೂಕ್ತ ವ್ಯಕ್ತಿ ಅಂತ. ಅದಕ್ಕೆ ಬದ್ಧವಾಗಿರುತ್ತೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now