ನಾಳೆ ದೇಶಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮನೆ-ಮನಗಳಲ್ಲಿ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ವಿಘ್ನನಿವಾರಕ ಗಣಪತಿಯನ್ನು ಮನೆಗೆ ಬರಮಾಡಿಕೊಳ್ಳುವ ಮುನ್ನ ಕೆಲವು ಮಂಗಳಕರ ವಸ್ತುಗಳನ್ನು ಖರೀದಿಸಿ ತರುವುದರಿಂದ ಮನೆಯಲ್ಲಿ ಧನಧಾನ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ಹಬ್ಬಕ್ಕೆ ಮುನ್ನ ಮನೆಗೆ ತರಬೇಕಾದ ಆ 8 ಶುಭ ವಸ್ತುಗಳ ವಿವರ ಇಲ್ಲಿದೆ
ಚಿನ್ನ ಅಥವಾ ಬೆಳ್ಳಿ ಆಭರಣ/ನಾಣ್ಯ:

ಗಣೇಶ ಚತುರ್ಥಿಗೆ ಮುನ್ನ ಚಿನ್ನ ಅಥವಾ ಬೆಳ್ಳಿಯ ನಾಣ್ಯ, ಸಣ್ಣ ಮೂರ್ತಿ ಅಥವಾ ಆಭರಣಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಸಮೃದ್ಧಿಯ ಸಂಕೇತವಾಗಿದೆ.
ಶಾಂತ ರೂಪದ ಗಣೇಶನ ವಿಗ್ರಹ:
ಬಪ್ಪನನ್ನು ಮನೆಗೆ ಆಹ್ವಾನಿಸುವ ಮುನ್ನ ಪ್ರಶಾಂತ ಹಾಗೂ ನಯನಮನೋಹರ ಮುಖಭಾವವಿರುವ ಗಣೇಶನ ಸುಂದರ ವಿಗ್ರಹವನ್ನು ಮೊದಲೇ ಆಯ್ಕೆ ಮಾಡಿ ಮನೆಗೆ ತರುವುದು ಶ್ರೇಷ್ಠ.

ಅರಿಶಿನದ ಕೊಂಬು:
ಅರಿಶಿನವನ್ನು ಮಂಗಳಕರತೆ ಮತ್ತು ಅದೃಷ್ಟದ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಗಣೇಶ ಪೂಜೆಗಾಗಿ ಶುದ್ಧವಾದ ಅರಿಶಿನದ ಕೊಂಬುಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳುವುದು ಶುಭ.
ಅಡಿಕೆ (ಪೂಜಾ ಅಡಿಕೆ):
ಗಣೇಶನ ಪೂಜೆಯಲ್ಲಿ ಅಡಿಕೆಗೆ ವಿಶೇಷ ಸ್ಥಾನವಿದೆ. ಅಡಿಕೆಯನ್ನು ಗಣಪತಿಯ ರೂಪವೆಂದೂ ಪೂಜಿಸಲಾಗುತ್ತದೆ. ಆದ್ದರಿಂದ ಪೂಜಾ ಮಗ್ರಿಗಳ ಜೊತೆಗೆ ಅಡಿಕೆಯನ್ನು ಮುಂಚಿತವಾಗಿ ಖರೀದಿಸಿ.
ಲಕ್ಷ್ಮಿ-ಗಣೇಶನ ಜಂಟಿ ಮೂರ್ತಿ:
ಲಕ್ಷ್ಮೀದೇವಿಯು ಸಂಪತ್ತಿನ ಸಂಕೇತವಾದರೆ, ಗಣೇಶನು ಜ್ಞಾನ ಮತ್ತು ವಿವೇಕದ ಅಧಿಪತಿ. ಸಂಪತ್ತಿನ ಜೊತೆಗೆ ಸದ್ಬುದ್ಧಿ ನೆಲೆಸಲು ಲಕ್ಷ್ಮಿ-ಗಣೇಶ ಒಟ್ಟಿಗಿರುವ ಮೂರ್ತಿಯನ್ನು ಮನೆಗೆ ತರುವುದು ಮಂಗಳಕರ.
ಶ್ರೀ ಯಂತ್ರ:
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಶ್ರೀ ಯಂತ್ರವನ್ನು ಮನೆಗೆ ತಂದು ಸ್ಥಾಪಿಸುವುದು ಐಶ್ವರ್ಯ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ದಾರಿಮಾಡಿಕೊಡುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ಗರಿಕೆ (ದೂರ್ವಾ) ಮತ್ತು ನೈವೇದ್ಯ ಸಾಮಗ್ರಿಗಳು:
ಗಣಪತಿಗೆ ಅತ್ಯಂತ ಪ್ರಿಯವಾದ ಗರಿಕೆ ಹುಲ್ಲು, ಮೋದಕ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು, ಹಣ್ಣು ಮತ್ತು ಹೂವುಗಳನ್ನು ಪೂಜೆಗೆ ಕೊರತೆಯಾಗದಂತೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಬೇಕು.
ಕವಡೆ, ಗೋಮತಿ ಚಕ್ರ ಹಾಗೂ ಬೆಳ್ಳಿ ನಾಣ್ಯಗಳು:
ಕವಡೆಗಳು, ಗೋಮತಿ ಚಕ್ರ ಮತ್ತು ಬೆಳ್ಳಿ ನಾಣ್ಯಗಳಂತಹ ಮಂಗಳಕರ ವಸ್ತುಗಳನ್ನು ಖರೀದಿಸಿ ಪೂಜಿಸಿದ ನಂತರ, ಹಣ ಇಡುವ ಕಪಾಟು ಅಥವಾ ಸೇಫ್ನಲ್ಲಿ (ಲಾಕರ್) ಇಡುವುದು ಧನಲಾಭಕ್ಕೆ ಪ್ರೇರಕವೆಂದು ನಂಬಲಾಗಿದೆ.



















