Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಡಿಲು ಬಡಿದು ಕರ್ನಾಟಕದಲ್ಲಿ ಒಂದೇ ದಿನ ಸಾವನ್ನಪ್ಪಿದವರು ಎಷ್ಟು ಮಂದಿ..?

---Advertisement---

ಬೆಂಗಳೂರು; ರಾಜ್ಯಾದ್ಯಂತ ಮಳೆಗಾಲ ಶುರುವಾಗಿದೆ. ಅದರಲ್ಲೂ ಗುಡುಗು, ಸಿಡಿಲಿನ ಆರ್ಭಟ ಕೂಡ ಜೋರಾಗಿದೆ. ಹೀಗಾಗಿ ಜನ ಎಚ್ಚರದಿಂದ ಇರಬೇಕಾಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ ಸಿಡಿಲು ಬಡಿದು ಹಲವರು ಅಸು ನೀಗಿದ್ದಾರೆ. ರಾಜ್ಯ ಒಂದರಲ್ಲಿಯೇ ಏಳು ಮಂದಿ ಸಾವನ್ನಪ್ಪಿದ್ದಾರೆ. ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ‌ಕೊಪ್ಪಳ ಭಾಗದಲ್ಲಿ ಸಾವನ್ನಪ್ಪಿದ್ದಾರೆ.

ಬಳ್ಳಾರಿಯಲ್ಲಿ ಒಂದೇ ಕುಟುಂಬದ ಮೂವರು ಸಿಡಿಲಿಗೆ ಬಲಿಯಾಗಿದ್ದಾರೆ. ಭೀರಪ್ಪ, ಸುನೀಲ್, ವಿನೋದ್ ಎಂಬುವವರು ಮರದ ಕೆಳಗೆ ನಿಂತ ಪರಿಣಾಮ ಸಿಡಿಲು ಬಡಿದಿದೆ. ಕುರಿ ಮೇಯಿಸಲು ಹೋದವರು ಮನೆಗೆ ಹೆಣವಾಗಿ ಬಂದಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ಜಿಲ್ಲೆಯ ಮೈಲಾಪುರದಲ್ಲಿಯೂ ಇಂಥದ್ದೇ ಘಟನೆ ನಡೆದಿದೆ. ಸಿಡಿಲು ಬಡಿದು ರೈತ ಜೀವ ಬಿಟ್ಟಿದ್ದಾನೆ. 39 ವರ್ಷದ ಬಸನಗೌಡ ಭತ್ತವನ್ನು ಉಳಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ. ಭತ್ತ ಕೊಯ್ಲು ಮಾಡಿ ಒಣಗಿ ಹಾಕಿದ್ದರು. ಮಳೆ ಬಂದಿದ್ದು ಕಂಡು ಒಣಗಿ ಹಾಕಿದ್ದ ಭತ್ತವನ್ನ ಎತ್ತಿಡಲು ಹೋಗಿದ್ದಾನೆ. ಆದರೆ ಅದೇ ಸಮಯಕ್ಕೆ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ಎತ್ತುಗಳ ಸಮೇತ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಲಕ್ಕೆ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದ ರೈತನಿಗೆ ಸಿಡಿಲು ಬಡಿದು, ರೈತ ಹಾಗೂ ಎರಡು ಎತ್ತುಗಳು ಕೂಡ ಅಸುನೀಗಿವೆ. ಚಿಕ್ಕಮಗಳೂರಿನಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟಿದ್ದಾನೆ. ಗೆದ್ಲೆಹಳ್ಳಿಯ ಲೋಕೇಶಪ್ಪ ಎಂಬುವವರು ಕುರಿ ಕಾಯುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿರಲಿದೆ. ಹೀಗಾಗಿ ಹೊರಗೆ ಹೋಗುವವರು ಸ್ವಲ್ಪ ಎಚ್ಚರದಿಂದ ಇರಿ. ಅದರಲ್ಲೂ ರೈತರು ಜಮೀನುಗಳಿಗೆ ಹೋದಾಗ ಇನ್ನು ಎಚ್ಚರದಿಂದ ಇರಬೇಕಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment