ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 28 : ಸೌಂದರ್ಯದ ಪ್ರತೀಕವಾಗಿರುವ ಮೆಹಂದಿಗೆ ಶುಭ ಸಮಾರಂಭಗಳಲ್ಲಿ ಅತಿ ಹೆಚ್ಚಿನ ಮಹತ್ವವಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ
ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಮಹಮದ್ಖಾಸಿಂರವರ ಪುತ್ರಿ ಮುಸ್ಕಾನ್ ಮೂರು ತಿಂಗಳುಗಳ ಕಾಲ ನಗರದಲ್ಲಿ ನಡೆಸಿದ ಮೆಹಂದಿ ತರಬೇತಿಯಲ್ಲಿ ಉತ್ತೀರ್ಣರಾದವರಿಗೆ ಭಾನುವಾರ ಮುರುಘಾಮಠದಲ್ಲಿಸರ್ಟಿಫಿಕೇಟ್ ಹಾಗೂ ಮೆಡಲ್ಗಳನ್ನು ವಿತರಿಸಿ ಮಾತನಾಡಿದರು.
ಮೆಹಂದಿ ಕಲೆ, ಸಂಪ್ರದಾಯ, ಪರಂಪರೆಯನ್ನು ಮತ್ತೊಬ್ಬರಿಗೆ ಕಲಿಸುವುದರಿಂದ ಮಹಿಳೆಯರು ಸ್ವಾವಲಂಭಿಗಳಾಗಿ ಆತ್ಮಸ್ಥೈರ್ಯದಿಂದ ಬದುಕಬಹುದು. ಯಾರು ಪರಾವಲಂಭಿಗಳಾಗಬಾರದು. ವಿವಾಹ, ಗೃಹ ಪ್ರವೇಶ, ಜನ್ಮದಿನ ಸೇರಿದಂತೆ ಅನೇಕ ಶುಭ ಕಾರ್ಯಗಳಲ್ಲಿ ಮೆಹಂದಿಗೆ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಮೆಹಂದಿ ಎನ್ನುವುದು ಕೂಡ ಒಂದು ರೀತಿಯ ಬಿಸ್ನೆಸ್ ಆಗಿ ಮಾರ್ಪಟ್ಟಿದೆ. ಮುರುಘಾಮಠದಿಂದ ಪ್ರತಿ ವರ್ಷವೂ ನಡೆಯುವ ಶರಣ ಸಂಸ್ಕøತಿ ಉತ್ಸವದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಈ ಬಾರಿ ಮೆಹಂದಿ ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಇದಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನು ಮಠದಿಂದ ನೀಡಲಾಗುವುದು. ಸರ್ವ ಧರ್ಮದವರಿಗೂ ನಮ್ಮ ಮಠದಲ್ಲಿ ಅವಕಾಶವಿದೆ ಎಂದರು.
ಉಪನ್ಯಾಸಕಿ ಲತಾ ಮಾತನಾಡಿ ಮೆಹಂದಿ ತರಬೇತಿಯಲ್ಲಿ ಎಲ್ಲರೂ ಅತ್ಯುತ್ತಮವಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ತೀರ್ಪು ನೀಡುವುದು ತುಂಬಾ ಕಷ್ಟದ ಕೆಲಸ. ಮೆಹಂದಿ ಹಾಕುವುದನ್ನು ಕಲಿಯುವುದರಿಂದ ನೀವುಗಳು ನಿಮ್ಮ ಕಾಲ ಮೇಲೆ ನಿಂತು ಸ್ವಾವಲಂಭಿಗಳಾಗಿ ಬದುಕಬಹುದು ಎಂದು ತಿಳಿಸಿದರು.
ನಾಲ್ಕು ತಂಡಗಳಲ್ಲಿ ನಡೆದ ಮೆಹಂದಿ ತರಬೇತಿ ಸ್ಪರ್ಧೆಯಲ್ಲಿ ಒಂದೊಂದು ತಂಡಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ಮಹಮದ್ ಖಾಸಿಂ ವೇದಿಕೆಯಲ್ಲಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













