Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇಶದಲ್ಲಿ ಸತತ ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ: ಮೇ ತಿಂಗಳಿನಲ್ಲಿ ₹1.94 ಲಕ್ಷ ಕೋಟಿ ಆದಾಯ!

---Advertisement---

ಸುದ್ದಿಒನ್,ನವದೆಹಲಿ,ಜೂನ್.1: ದೇಶದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯಲ್ಲಿ ಸತತ ಏರಿಕೆ ಕಂಡುಬಂದಿದ್ದು, ಮೇ 2026ರ ತಿಂಗಳಿನಲ್ಲಿ ಭರ್ಜರಿ ಆದಾಯ ಹರಿದುಬಂದಿದೆ. ಮೇ ತಿಂಗಳ ಒಟ್ಟು ಜಿಎಸ್‌ಟಿ ಆದಾಯವು ವಾರ್ಷಿಕ ಆಧಾರದ ಮೇಲೆ ಶೇಕಡಾ 3.2 ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 1,94,184 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವರ್ಷದ (ಮೇ 2025) ಇದೇ ಅವಧಿಯಲ್ಲಿ ದೇಶದಲ್ಲಿ 1,88,172 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಆದಾಯದಲ್ಲಿ ಗಣನೀಯ ಪ್ರಗತಿ ಕಂಡುಬಂದಿದ್ದು, ಆರ್ಥಿಕತೆಯ ಸದೃಢ ಬೆಳವಣಿಗೆಗೆ ಇದು ಸಾಕ್ಷಿಯಾಗಿದೆ. ದೇಶೀಯ ವಹಿವಾಟು ಮತ್ತು ಗ್ರಾಹಕರ ಬೇಡಿಕೆಯಲ್ಲಿನ ಸ್ಥಿರತೆಯೇ ಈ ಸತತ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Join WhatsApp

Join Now

Join Telegram

Join Now