ಚಿತ್ರದುರ್ಗ .ಅ.26: ಪ್ರತಿಯೊಬ್ಬ ಮಾನವನ ಅಂತರಂಗದ ಪರಿವರ್ತನೆ ಮತ್ತು ಸನ್ಮಾರ್ಗದ ಪಯಣಕ್ಕೆ ಆತ್ಮಾವಲೋಕನವೇ ಮೂಲಾಧಾರ. ಪ್ರತಿಯೊಬ್ಬ ಮನುಷ್ಯನಲ್ಲೂ ಸನ್ಮಾರ್ನಕ್ಕೆ ಬದಲಾಗುವ ಅಪರವಾದ ಸಾಮಥ್ರ್ಯವಿದೆ ಎಂದು ಸಿಎಂಸಿಆರ್‍ಐ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಯುವರಾಜ್ ಅಭಿಪ್ರಾಯಪಟ್ಟರು.
ನಗರದ ಸಿ.ಎಮ್.ಸಿ.ಆರ್.ಐ ಬೋಧನಾ ಆಸ್ಪತ್ರೆಯ ಡಾ.ಬಿ.ಸಿ. ರಾಯ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಮ್ಮೆ ರತ್ನಾಕರನಿಗೆ ನಾರದ ಮುನಿಗಳು ‘ನೀವು ಮಾಡುತ್ತಿರುವ ಕರ್ಮ ಫಲ ಹಾಗೂ ದುಷ್ಕøತ್ಯದ ಪರಿಣಾಮಗಳಲ್ಲಿ ನಿಮ್ಮ ಕುಟುಂಬದವರು ಭಾಗಿಗಳಾಗುತ್ತಾರೆಯೇ? ಎಂದು ಕೇಳಿದ ಪ್ರಶ್ನೆಯೇ ಅವರ ಅಂತರಂಗವನ್ನು ಕಲಕಿ, ರತ್ನಾಕರನನ್ನು ‘ಮಹರ್ಷಿ ವಾಲ್ಮೀಕಿ’ಯನ್ನಾಗಿ ಪರಿವರ್ತಿಸಿತು. ಆದ್ದರಿಂದ ಹಿಂದೆ ಮಾಡಿದ ತಪ್ಪುಗಳನ್ನೇ ನೆನೆದು ಕೊರಗುವುದಕ್ಕಿಂತ ಪ್ರಸ್ತುತದಲ್ಲಿ ನಾವು ಮಾಡಬಹುದಾದ ಶ್ರೇಷ್ಠ ಹಾಗೂ ಸತ್ಕಾರ್ಯಗಳತ್ತ ಗಮನಹರಿಸಬೇಕು ಎಂದರು.
ದೇವರ ಹುಡುಕಾಟಕ್ಕಾಗಿ ದೇವಸ್ಥಾನ, ಮಸೀದಿ, ಆಧ್ಯಾತ್ಮಿಕ ಕೇಂದ್ರಗಳಿಗೆ ಅಲೆಯುವುದನ್ನು ಮಿತಿಗೊಳಿಸಿ, ಪ್ರತಿಯೊಬ್ಬರೂ ತಮ್ಮ ಅಂತರಂಗದತ್ತ ದೃಷ್ಟಿ ಹರಿಸಬೇಕು. ಧ್ಯಾನದ ಮೂಲಕ ನಮ್ಮೊಳಗಿನ ಶ್ರೇಷ್ಠ ಆತ್ಮವನ್ನು ಅರಿತು, ನಿರಂತರ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಆತ್ಮವು ಪರಿಶುದ್ಧಗೊಂಡು ಅಪಾರವಾದ ಗುಣಪಡಿಸುವ ಶಕ್ತಿ ಲಭಿಸುತ್ತದೆ. ಈ ಶುಭ ದಿನದಂದು ನಾವೆಲ್ಲರೂ ಸನ್ಮಾರ್ಗದಲ್ಲಿ ಬಾಳಿ, ಸಮಾಜಕ್ಕೆ ಶ್ರೇಷ್ಠ ಉಪಶಮನಕಾರರಾಗಿ ಸೇವೆಯೊದಗಿಸೋಣ ಎಂದು ಅವರು ಪ್ರೇರಣಾದಾಯಿ ಸಂದೇಶ ನೀಡಿದರು.
ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ದಸ್ತಗಿರಿ ಅವರು, ಮಹರ್ಷಿ ವಾಲ್ಮೀಕಿಯವರ ಸಮಗ್ರ ಜೀವನ ಚರಿತ್ರೆ, ಅವರ ಅಪೂರ್ವ ಸಾಧನೆಗಳು ಹಾಗೂ ಮಾನವಕುಲಕ್ಕೆ ಅವರು ನೀಡಿದ ಮಹಾನ್ ಕೊಡುಗೆಗಳ ಕುರಿತು ಸಮಗ್ರವಾಗಿ ಬೆಳಕು ಚೆಲ್ಲಿದರು.
ಈ ಸಂದರ್ಭದಲ್ಲಿ ಸಿಎಂಸಿಆರ್‍ಐ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಜಿ.ಹೆಚ್.ಮೇಘಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರವೀಂದ್ರ, ಶುಶ್ರೂಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(ಫೋಟೋ ಕಳುಹಿಸಿದೆ)
==========
ಪ್ರತಿ ತಿಂಗಳ ಎರಡನೇ ಮಂಗಳವಾರ ಮತ್ತು ನಾಲ್ಕನೇ ಮಂಗಳವಾರ ಆಯೋಜನೆ
ಉಚಿತ ಗ್ಯಾಸ್ಟ್ರೋ ಶಿಬಿರ
*********
ಚಿತ್ರದುರ್ಗ(ಕರ್ನಾಟಕ ವಾರ್ತೆ).ಅ.26:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೋಧಕ ಆಸ್ಪತ್ರೆ (ಸಿಎಂಸಿಆರ್‍ಐ) ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರ ಮತ್ತು ನಾಲ್ಕನೇ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ ಉಚಿತ ಗ್ಯಾಸ್ಟ್ರೋ ಶಿಬಿರ ಏರ್ಪಡಿಸಲಾಗಿದೆ.
ದಾವಣಗೆರೆ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಯಕೃತ್ ವೈದ್ಯರಾದ ಡಾ.ಅಶ್ವಿನ್ ಡಿ.ಕೆ. ಅವರು ಉಚಿತವಾಗಿ ಗ್ಯಾಸ್ಟ್ರೋ ಶಿಬಿರ ನಡೆಸುವರು.
ಹೊಟ್ಟೆನೋವು, ಹೊಟ್ಟೆ ಉಬ್ಬುವಿಕೆ, ಅಜೀರ್ಣ, ಎದೆಯುರಿ, ವಾಕರಿಕೆ, ವಾಂತಿ, ಮಲದಲ್ಲಿ ರಕ್ತ, ಗ್ಯಾಸ್, ವಾಯು, ಅಗಾಗ ತೇಗು ಬರುವುದು, ಮಲಬದ್ಧತೆ, ಅತಿಸಾರ ಬೇದಿ, ಹಸಿವಿನ ಕೊರತೆ, ನುಂಗಲು ತೊಂದರೆ, ತೀವ್ರವಾದ ಹೊಟ್ಟೆ ನೋವು, ವಾಂತಿಯಲ್ಲಿ ರಕ್ತ, ಹಠಾತ್ ತೂಕ ನಷ್ಟ, ಕಮಾಲೆ ಸೇರಿದಂತೆ ಈ ಗ್ಯಾಸ್ಟ್ರೋ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಮತ್ತು ಪೋಷಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸಿಎಂಸಿಆರ್‍ಐ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===========










