Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಮನುಕುಲದ ವಿಕಾಸ ಕಟ್ಟಿಕೊಟ್ಟ ಮಹಾನ್ ವಿಚಾರವಾದಿ : ಎಸ್.ಸಂದೀಪ್ ಬಣ್ಣನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 26 : ಮಹರ್ಷಿ ವಾಲ್ಮೀಕಿ ಮನುಕುಲದ ವಿಕಾಸವನ್ನು ರಾಮಾಯಣದ ಮೂಲಕ ಕಟ್ಟಿಕೊಟ್ಟ ಮಹಾನ್ ವಿಚಾರವಾದಿ, ಚಿಂತಕರಾಗಿದ್ದರೆಂದು ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ತಿಳಿಸಿದರು.

ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಚರಿಸಲಾದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮಿಕಿರವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ವಾಲ್ಮೀಕಿರವರು ಬರೆದಿರುವ ರಾಮಾಯಣ ಒಂದು ಚಿಂತನ ಮಹಾ ಕಾವ್ಯವಾಗಿದೆ. ಒಳಿತು-ಕೆಡುಕು ಕಥೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಅತಿ ಆಸೆಯೇ ಅವನತಿಯ ಮೂಲ. ಕೇವಲ ಮನುಷ್ಯರ ಹಿತವಲ್ಲದೆ ರಾಕ್ಷಸರು, ಹನುಮರು, ಜಟಾಯು, ವಾಲಿ, ಸುಗ್ರಿವ, ಅಳಿಲು ಹೀಗೆ ಸಕಲ ಪ್ರಾಣಿ ಪಕ್ಷಿಗಳ ಹಿತವನ್ನೊಳಗೊಂಡಂತೆ ಕಾವ್ಯವನ್ನು ಮೂಲವಾಗಿಸಿಕೊಂಡಿದ್ದರಿಂದ ಮಹಾನ್ ಮಾನವತಾವಾದಿ ಎನಿಸಿಕೊಂಡರು ಎಂದು ತಿಳಿಸಿದರು.

ಮನುಷ್ಯನ ದುಗುಡ, ದುಮ್ಮಾನ, ಸಂತೋಷ, ಸಂಭ್ರಮಗಳನ್ನು ಕುರಿತು ರಾಮಾಯಣ ಮಾತನಾಡುತ್ತದೆ. ಸತ್ಯ ಗೆಲ್ಲುತ್ತದೆ. ಸ್ವಾಭಿಮಾನ ಬದುಕಿನ ಅಂಗವಾಗಬೇಕೆಂಬ ಸಲಹೆ ನೀಡುತ್ತದೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ವಾಲ್ಮೀಕಿ ರಾಮಾಯಣದಲ್ಲಿನ ಪ್ರತಿಯೊಂದು ಶ್ಲೋಕವು ಮಾನವನ ಒಳಿತನ್ನೇ ಬಿಂಬಿಸುತ್ತವೆ. ಮುಖ್ಯವಾಗಿ ಆತ್ಮಾವಲೋಕನ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಮನುಷ್ಯನನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಲ್ಲವು ಎನ್ನುವುದು ರಾಮಾಯಣ ಮಹಾಕಾವ್ಯದಿಂದ ಹೊರಬರುತ್ತದೆ ಎಂದರು.

ತಾಯಿ ಹೃದಯದವರಾಗಿದ್ದ ಮಹರ್ಷಿ ವಾಲ್ಮೀಕಿ ರಾಮ ಸೀತೆಯನ್ನು ತ್ಯಜಿಸಿದಾಗ ಆಗ ಕಾಡಿನಲ್ಲಿ ಸೀತೆಗೆ ಆಶ್ರಯ ನೀಡಿದವರು ಇದೆ ವಾಲ್ಮೀಕಿ. ಅವರಿಗೆ ಅವಳಿ ಮಕ್ಕಳಾದಾಗ ಪಾಲನೆ ಪೋಷಣೆ ಮಾಡುತ್ತಾರೆ. ವಿಶ್ವಮಾನವ ಸಂಸ್ಕøತಿಗೆ ಕೌಟುಂಬಿಕ ನಾಗರೀಕತೆಯನ್ನು ಕಟ್ಟಿಕೊಟ್ಟ ಮಹಾನ್ ಚಿಂತಕ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದರು.

ಡಾ.ಲತ ಎಸ್. ಡಾ.ದಾಸಪ್ಪ ಜಿ, ಚಂದ್ರಣ್ಣ ಎನ್.ಡಿ, ಚಂದ್ರಣ್ಣ ಜಿ.ಬಿ, ಆರ್.ಮಂಜುಳ, ಮಹಂತೇಶ ಕೆ, ಹಾಲೇಶ್ ಇವರುಗಳು ವಾಲ್ಮೀಕಿ ಜಯಂತಿಯಲ್ಲಿ ಹಾಜರಿದ್ದರು.
ಮದಕರಿನಾಯಕ ವಿದ್ಯಾಸಂಸ್ಥೆಯಡಿಯಲ್ಲಿನ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now